Arun Puthila: ಒಂದೇ ದಿವಸ ಅರುಣ್ ಪುತ್ತಿಲ ಮತ್ತು ಸಂತ್ರಸ್ತೆಯಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ!

Arun Puthila: ಅರುಣ್ ಕುಮಾ‌ರ್ ಪುತ್ತಿಲ (Arun Puthila) ಅವರ ವಿರುದ್ಧ ಅತ್ಯಾಚಾರ ಪ್ರಕರಣ ದೂರು ನೀಡಿದ ಸಂತ್ರಸ್ತ ಮಹಿಳೆ ಸೆ.11 ರಂದು ಬೆಳಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ರುದ್ರಾಭಿಷೇಕ ಸೇವೆ ಮಾಡಿಸಿ ವಿಶೇಷ ಸಂಕಲ್ಪ ಮಾಡಿರುತ್ತಾರೆ.

 

ಇನ್ನು ಈಗಾಗಲೇ ಅರುಣ್ ಕುಮಾರ್ ಪುತ್ತಿಲ ಅವರ ಮೇಲೆ ಎಫ್ ಐ ಆರ್ ಮತ್ತು ಮುಂದಿನ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಅಂತೆಯೇ ಅರುಣ್‌ ಕುಮಾ‌ರ್ ಪುತ್ತಿಲ ಪಕ್ಷದ ಜನರೊಂದಿಗೆ ಸೆಪ್ಟೆಂಬರ್ 11ರಂದು ಬೆಳಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ದೇವರಿಗೆ ಮಲ್ಲಿಗೆ ಸಮರ್ಪಣೆ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ನಂತರ ಮಾದ್ಯಮದೊಂದಿಗೆ ಮಾತನಾಡಿದ ಪುತ್ತಿಲ ನನ್ನ ವಿರುದ್ಧ ಮಾಡಿದ ಕುತಂತ್ರ ಬಗ್ಗೆ ಪುತ್ತೂರಿನ ಜನತೆಗೆ ತಿಳಿದಿದೆ. ಒಟ್ಟಿನಲ್ಲಿ ರಾಜಕೀಯವಾಗಿ ನನ್ನನ್ನು ಮುಗಿಸುವ ಹುನ್ನಾರ ಮಾಡಿದ್ದಾರೆ. ಆದರೆ ಮಹಾಲಿಂಗೇಶ್ವರ ದೇವರು, ಉಳ್ಳಾಲ್ತಿ ಅಮ್ಮನವರಲ್ಲಿ ನಂಬಿಕೆಯ ಆಧಾರದಲ್ಲಿ ಬದುಕಿದ್ದೇನೆ, ಯಾವತ್ತೂ ಕೂಡ ಸತ್ಯಕ್ಕೆ ನ್ಯಾಯ ಸಿಗುತ್ತದೆ ಎಂದು ಮಾತನಾಡಿದರು.

Leave A Reply

Your email address will not be published.