Saving Scheme: ತಿಂಗಳಿಗೆ 500 ರೂಪಾಯಿ ಉಳಿತಾಯ ಮಾಡಿ 35,000 ರೂ ಗಳಿಸುವ ಹೊಸ ಯೋಜನೆ ಇಲ್ಲಿದೆ!

Share the Article

Saving Scheme: ಉಳಿತಾಯ ಮಾಡಲು ಸಾಕಷ್ಟು ಬ್ಯಾಂಕ್ ಶಾಖೆ ಇವೆ ಆದ್ರೆ ನೀವು ಉತ್ತಮ ಲಾಭ ಪಡೆಯಲು ಪೋಸ್ಟ್ ಆಫೀಸ್ ಮೂಲಕ ತಿಂಗಳಿಗೆ ಕೇವಲ 500 ರೂಪಾಯಿ ಉಳಿತಾಯ ಮಾಡಿ 35,000 ರೂ ಗಳಿಸಬಹುದು.

ಹೌದು, ಮುಖ್ಯವಾಗಿ ಮಕ್ಕಳು ಈ ಪಿಗ್ಗಿ ಯಲ್ಲಿ ಠೇವಣಿ ಮಾಡಿದರೆ ಬಡ್ಡಿ ಸಿಗಳಿದ್ದು, ಮರುಕಳಿಸುವ ಠೇವಣಿ (RD) ಯೋಜನೆಯು (Saving Scheme) ಬಡ್ಡಿ ನೀಡುವ ಪಿಗ್ಗಿ ಬ್ಯಾಂಕ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಿದಲ್ಲಿ, ಮೆಚುರಿಟಿ ಮೊತ್ತವು ಬಡ್ಡಿಯೊಂದಿಗೆ ಲಭ್ಯವಾಗುತ್ತದೆ.

ನೀವು ಪ್ರತಿ ತಿಂಗಳು 500 ರೂಪಾಯಿಗಳನ್ನು ಠೇವಣಿ ಮಾಡಿದರೆ, ನೀವು ಒಂದು ವರ್ಷದಲ್ಲಿ 6,000 ರೂಪಾಯಿ ಮತ್ತು 5 ವರ್ಷಗಳಲ್ಲಿ 30,000 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ. ಇದಕ್ಕೆ ಶೇ.6.7ರಷ್ಟು ಬಡ್ಡಿಯಾಗಿ 5,681 ರೂಪಾಯಿ ಸಿಗಲಿದೆ. ಯೋಜನೆಯ ಮೆಚುರಿಟಿಯಲ್ಲಿ ಒಟ್ಟು 35,681 ರೂಪಾಯಿ ಪಡೆಯಬಹುದು. ಆದರೆ, ಅದೇ ಮೊತ್ತವನ್ನು 5 ವರ್ಷಗಳ ಕಾಲ ಪಿಗ್ಗಿ ಬ್ಯಾಂಕ್‌ನಲ್ಲಿ ಇಟ್ಟರೆ 30,000 ರೂಪಾಯಿ ಮಾತ್ರ ಸಿಗುತ್ತದೆ. ಬಡ್ಡಿಯ ಲಾಭವಿರುವುದಿಲ್ಲ.

ಅದಕ್ಕಾಗಿ ನಿಮ್ಮ ಹತ್ತಿರದ ಯಾವುದೇ ಅಂಚೆ ಕಚೇರಿಯಲ್ಲಿ ಮಗುವಿನ ಹೆಸರಿನಲ್ಲಿ ಖಾತೆ ತೆರೆಯಬಹುದು. ಅಥವಾ ಮಗು ಅಪ್ರಾಪ್ತ ವಯಸ್ಕರಾಗಿದ್ದರೆ ತಾಯಿ ಅಥವಾ ತಂದೆಯ ಹೆಸರಿನಲ್ಲಿ ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಅವರ ಹೆಸರಿನಲ್ಲಿಯೇ ಖಾತೆ ತೆರೆಯಬಹುದು. ಜಂಟಿ ಖಾತೆ ಸೌಲಭ್ಯವೂ ಇದೆ. ಇದಲ್ಲದೆ ನೀವು ಬಯಸಿದಷ್ಟು RD ಖಾತೆಗಳನ್ನು ತೆರೆಯಬಹುದು.

Leave A Reply