Fireworks Ban: ರಾಜ್ಯದಲ್ಲಿ ಪಟಾಕಿ ಬ್ಯಾನ್- ದೀಪಾವಳಿ ಹೊಸ್ತಿಲಲ್ಲೇ ಸರ್ಕಾರದಿಂದ ಖಡಕ್ ನಿರ್ಧಾರ !!

Fireworks Ban: ಪ್ರತಿ ವರ್ಷ ದೀಪಾವಳಿ ಹೊತ್ತಿಗೆ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧದ ಪ್ರಸ್ತಾಪ ಕೇಳಿ ಬರುತ್ತೆ. ಪರಿಸರ ವಾದಿಗಳು, ಆರೋಗ್ಯ ತಜ್ಞರು ಪಟಾಕಿ ನಿಷೇಧದ ಪರ ಮಾತನಾಡುತ್ತಾರೆ. ಕೆಲವರು ಹಸಿರು ಪಟಾಕಿ ಮಾತ್ರ ಬಳಸಬೇಕು ಅಂತಾನೂ ವಾದಿಸ್ತಾರೆ. ಆದರೀಗ ರಾಜ್ಯ ಸರ್ಕಾರ ಇವರೆಲ್ಲರ ಬೇಡಿಕೆಗೆ ಅಸ್ತು ಎಂದಿದೆ. ಹಾಗಂತ ಇದು ನಮ್ಮ ಕರ್ನಾಟಕ ಸರ್ಕಾರದ ನಿರ್ಧಾರವಲ್ಲ, ಬದಲಿಗೆ ದೆಹಲಿ ಸರ್ಕಾರದ್ದು.

ಹೌದು, ದೀಪಾವಳಿ ಸಮೀಪಿಸುತ್ತಿರುವ ಹೊತ್ತಲ್ಲೇ ದೆಹಲಿ ಸರ್ಕಾರ ಗಟ್ಟಿ ನಿರ್ಧಾರ ಮಾಡಿ ತನ್ನ ಆಡಳಿತ ವ್ಯಾಪ್ತಿಯ ರಾಜ್ಯದಲ್ಲಿ ಪಟಾಕಿಯನ್ನು ಬ್ಯಾನ್(Fireworks Ban) ಮಾಡಿ ಆದೇಶ ಹೊರಡಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆ ಪಟಾಕಿ ಮಾರಾಟ ಹಾಗೂ ಬಳಕೆಯನ್ನು 2025ರ ಜನವರಿ 1 ರ ವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದೆಹಲಿ ಸರ್ಕಾರ (Delhi Government) ಖಡಕ್ ಆದೇಶ ಮಾಡಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ (Gopal Rai) ‘ಕೇಜ್ರಿವಾಲ್ ಸರ್ಕಾರವು ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದೆ. 2025ರ ಜನವರಿ 1ರ ವರೆಗೆ ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ವಾಯುಮಾಲಿನ್ಯವನ್ನು ತಡೆಯುವ 21 ಅಂಶಗಳ ಯೋಜನೆಯ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ

Leave A Reply

Your email address will not be published.