Relationship: ಕಾಂಡೋಮ್ ಬಳಕೆ ಮಾಡಿದ್ರೂ ಈ ಭಯ ನಿಮ್ಮಲ್ಲಿರಲಿ! ತಜ್ಞರು ಬಿಚ್ಚಿಟ್ಟ ಕಹಿ ಸತ್ಯ ಇಲ್ಲಿದೆ ನೋಡಿ

Relationship: ಕಾಂಡೋಮ್ ಬಳಕೆದಾರರಿಗೆ ತಜ್ಞರು ಮಹತ್ವ ಮಾಹಿತಿ ಒಂದನ್ನು ತಿಳಿಸಿದ್ದಾರೆ. ಹೌದು, ಸಾಮಾನ್ಯವಾಗಿ ಮಾರಕ ಸೋಂಕು ಹರಡದಂತೆ ಮತ್ತು ಅನಗತ್ಯ ಗರ್ಭಧಾರಣೆ ತಡೆಯಲು ಪುರುಷರು ಕಾಂಡೋಮ್‌ಗಳನ್ನು ಬಳಕೆ ಮಾಡುತ್ತಾರೆ. ಆದ್ರೆ ಈ ಉದ್ದೇಶ ಈಡೇರಿಕೆ ಅಸಾಧ್ಯ ಎಂದು ತಿಳಿಸಲಾಗಿದೆ.

ಕಾಂಡೋಮ್ ಲೈಂಗಿಕವಾಗಿ (Relationship) ಹರಡುವ ಸೋಂಕುಗಳನ್ನು (sexually transmitted infections) ತಡೆಯುವ ಪೂರ್ಣ ಸಾಮಾರ್ಥ್ಯವನ್ನು ಹೊಂದಿಲ್ಲ ಎಂದು ನವದೆಹಲಿಯ ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞೆಯಾಗಿರುವ ಡಾಕ್ಟರ್ ಸಾಧನಾ ಸಿಂಘಲ್ ವೈಷ್ಣೋಯಿ ತಿಳಿಸಿದ್ದಾರೆ. ಅಲ್ಲದೆ ಕಾಂಡೋಮ್ ಬಳಕೆದಾರರು ಈ ಕೆಳಗಿನ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಅಪೂರ್ಣ ಸುರಕ್ಷತೆ: Incomplete Protection

ಕಾಂಡೋಮ್ ಕೇವಲ ಪುರುಷನ ಶಿಶ್ನವನ್ನು ಕವರ್ ಮಾಡುತ್ತದೆ. ಸೆಕ್ಸ್ ಮಾಡುವಾಗ Syphilis, Herpes, Human papillomavirus(HPV) ಅಂತಹ ಸೋಂಕು ಚರ್ಮದಿಂದ ಚರ್ಮಕ್ಕೆ ತಗುಲಿ ಬರಬಹುದು. ಈ ಕಾರಣದಿಂದ ಕಾಂಡೋಮ್ ಸಂಪೂರ್ಣ ಲೈಂಗಿಕ ಸೋಂಕಿನಿಂದ ರಕ್ಷಣೆ ನೀಡೋದಿಲ್ಲ.

ಕಾಂಡೋಮ್ ಜಾರಬಹುದು: Condom Breakage or Slippage

ಸೆಕ್ಸ್‌ನ ಘರ್ಷಣೆಯಿಂದಾಗಿ ಶಿಶ್ನವನ್ನು ಕವರ್ ಮಾಡಿರುವ ಕಾಂಡೋಮ್ ಹರಿಯಬಹುದು ಅಥವಾ ಜಾರಬಹುದು. ಕಾಂಡೋಮ್‌ಗಳಲ್ಲಿ ಎಣ್ಣೆ ದ್ರವರೂಪದ ಲುಬ್ರಿಕಂಟ್‌ನಿಂದಾಗಿ ಲೈಂಗಿಕ ಕ್ರಿಯೆ ನಡೆಸುವಾದ ಕಾಂಡೋಮ್ ಜಾರುವ ಸಾಧ್ಯತೆ ಇರುತ್ತದೆ. ಇದು ಕೂಡಾ ರಕ್ಷಣೆಯ ಉದ್ದೇಶಕ್ಕೆ ತಡೆಯಾಗಿದೆ.

ಫಂಗಲ್ ಸೋಂಕುಗಳು: Fungal Infections

ಕಾಂಡೋಮ್‌ಗಳು ಫಂಗಲ್ ಸೋಂಕುಗಳನ್ನು ತಡೆಯುವ ಸಾಮಾರ್ಥ್ಯವನ್ನು ಹೊಂದಿರಲ್ಲ. ಆದ್ದರಿಂದ ಖಾಸಗಿ ಭಾಗದಲ್ಲಿಯ ಸೋಂಕುಗಳು ಹರಡಬಹುದು ಎಂದು ಲೈಂಗಿಕ ತಜ್ಞರು ಹೇಳುತ್ತಾರೆ.

ಅದಕ್ಕಾಗಿ ಲೈಂಗಿಕ ಸೋಂಕುಗಳಿಂದ ರಕ್ಷಣೆ ಮಾಡಲು, ವೈದ್ಯಕೀಯ ಪರೀಕ್ಷೆ ಮಾಡಬೇಕು. ಒಬ್ಬರಿಗಿಂತ ಅಧಿಕ ಲೈಂಗಿಕ ಸಂಗಾತಿಗಳನ್ನು ಹೊಂದಿರುವ ಜನರು ರೆಗ್ಯಲುರ್ ಆಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು.

ಇನ್ನು ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಲೈಂಗಿಕ ಸೋಂಕಿನಿಂದ ಪಾರಾಗಬಹುದು. ಲೈಂಗಿಕ ಸಂಬಂಧದ ನಂತರ ಖಾಸಗಿ ಭಾಗ ಸ್ವಚ್ಛ ಮಾಡಿಕೊಳ್ಳಬೇಕು. ಇದರ ಜೊತೆಗೆ ಎಂದಿಗೂ ಬೇರೆಯವರ ಜೊತೆ ಒಳಉಡುಪುಗಳನ್ನು ಶೇರ್ ಮಾಡಿಕೊಳ್ಳಬಾರದು.

ಇನ್ನು ಸೋಂಕಿನ ಮುನ್ಸೂಚನೆ ಸಿಗುತ್ತಿದ್ದಂತೆ ತಜ್ಞರಿಂದ ಚಿಕಿತ್ಸೆ ಪಡೆದು ವ್ಯಾಕ್ಸಿನೇಷನ್ ಪಡೆದುಕೊಳ್ಳಬಹುದು. ಉದಾಹರಣೆಗೆ HPV and hepatitis B ವ್ಯಾಕ್ಸಿನೇಷನ್‌ನಿಂದ ಲೈಂಗಿಕ ಸೋಂಕುಗಳಿಂದ ರಕ್ಷಣೆ ಪಡೆಯಬಹುದಾಗಿದೆ.

Leave A Reply

Your email address will not be published.