D K Shivkumar: KPCC ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಇದ್ದಕ್ಕಿದ್ದಂತೆ ಸಿಡಿದೆದ್ದ ಕಾಂಗ್ರೆಸ್ ಹೈಕಮಾಂಡ್!! ಕಾರಣವೇನು?

D K Shivkumar: ಡಿ ಕೆ ಶಿವಕುಮಾರ್ ಅಂದ್ರೆ ಕಾಂಗ್ರೆಸ್ ಹೈಕಮಾಂಡ್ ಗೆ ಭಾರೀ ಇಷ್ಟ. ಹೇಳಿದ್ದೆಲ್ಲವನ್ನು ಮಾಡುವ, ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ, ಉತ್ತಮ ನಾಯಕತ್ವದ ಗುಣ ಹೊಂದಿರುವ ಒಬ್ಬ ನಾಯಕ, ರಾಜ್ಯ ಕಾಂಗ್ರೆಸ್ ನ ಒಬ್ಬ ಸಮರ್ಥ ನೇತಾರ ಎಂಬ ಕಾರಣದಿಂದ ಡಿಕೆಶಿ ಹೈಕಮಾಂಡ್ ನ ನೆಚ್ಚಿನ ನಾಯಕ. ಆದರೀಗ ಇದೇ ಕಾಂಗ್ರೆಸ್ ಹೈಕಮಾಂಡ್ (Congress Highcomand) ಡಿ ಕೆ ಶಿವಕುಮಾರ್ (D K Shivkumar) ವಿರುದ್ಧ ಸಿಡಿದೆದ್ದಿದೆ. ಅದಕ್ಕೆ ಕಾರಣವೂ ಇದೆ.

ಹೌದು, ಕಳೆದ ಬಾರಿ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇ ಡಿಕೆಶಿ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಸಿಟ್ಟಾಗಲು ಕಾರಣ ಎನ್ನಲಾಗಿದೆ.
ತಾನು ರಾಜ್ಯದ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಸಲು ಮೋದಿಯವರನ್ನು ಭೇಟಿಯಾಗಿದ್ದೆ ಎಂದು ಡಿ ಕೆ.ಶಿವಕುಮಾರ್ ಹೇಳಿದ್ದಾರಾದರೂ, ಈ ಬಗ್ಗೆ ಹೈಕಮಾಂಡ್‌ಗೆ ಅನುಮಾನ ಇದೆ ಎನ್ನಲಾಗಿದೆ. ಯಾಕೆಂದರೆ ಪ್ರಧಾನಿ ಮೋದಿ ಅವರು ಅವರದ್ದೆ ಪಕ್ಷದ ಮುಖ್ಯಮಂತ್ರಿಗಳ ಭೇಟಿಗೆ ಸಿಗೋದೆ ಕಷ್ಟ. ಹೀಗಿದ್ದಾಗ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಧಾನಿ ಭೇಟಿಗೆ ಅವಕಾಶ ಸಿಕ್ಕಿದ್ದು ಹೇಗೆ? ಅನ್ನೋ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಎದ್ದಿದೆ.
ಅದೂ ಅಲ್ಲದೆ ರಾಜ್ಯದಲ್ಲಿ ಸಿದ್ದರಾಮಯ್ಯ ಕಾನೂನು ಸಂಕಷ್ಟದಲ್ಲಿರುವ ಸಂದರ್ಭದಲ್ಲೇ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಏನು ಮಾತನಾಡಿದರು ಎಂಬುದರ ಬಗ್ಗೆಯೂ ಅನುಮಾನ ಮೂಡಿದೆ ಎನ್ನಲಾಗ್ತಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಬಳಿ ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಅದಕ್ಕೆ ಡಿ.ಕೆ.ಶಿವಕುಮಾರ್‌ರಿಂದ ಉತ್ತರ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.