Viral Video: ಆಕಾಶದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ನಿಗೂಢವಾದ ಅನ್ಯಗ್ರಹ – ವೈರಲ್ ಆಯ್ತು ಅತ್ಯದ್ಭುತ ವಿಡಿಯೋ !!

Viral Video: ಇಡೀ ಜಗತ್ತು ಒಂದು ವಿಸ್ಮಯಗಳ ಆಗರ. ದಿನದಿಂದ ದಿನಕ್ಕೂ ಹೊಸ ಹೊಸ ಕೌತುಕಗಳು ಇಲ್ಲಿ ಗೋಚರವಾಗುತ್ತವೆ. ಅದರಲ್ಲೂ ಖಗೋಳದಲ್ಲಾಗುವ, ಹುಟ್ಟುವ ಹಲವು ಕುತೂಹಲಗಳಿಗೆ ಎಡೆಯೇ ಇಲ್ಲ. ಅಂತೆಯೇ ಇದೀಗ ಈ ಖಗೋಳದಲ್ಲಿ ವಿಸ್ಮಯವೊಂದು ನಡೆದಿದ್ದು, ಇದ್ದಕ್ಕಿದ್ದಂತೆ ಅನ್ಯಗ್ರಹ(Alien planet) ಒಂದು ಗೋಚರವಾಗಿದೆ.

 

ಹೌದು, ಇತ್ತೀಚೆಗೆ ದೆಹಲಿಯಲ್ಲಿ ಆಕಾಶದಲ್ಲಿ ಅನ್ಯಗ್ರಹವೊಂದು ಗೋಚರವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಟೇಕಿಂಗ್ ಟು ರೆಡ್ಡಿಟ್, ‘ಅನಿಮೆ-ಕುಂಗ್‌ಫು’ ಎಂಬ ಹೆಸರಿನ ಬಳಕೆದಾರರು ಈ ಬೆರಗುಗೊಳಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಕಪ್ಪು ಆಕಾಶ ಮತ್ತು ಶನಿ ಗ್ರಹ ಸುತ್ತುತ್ತಾ ಬರುತ್ತಿರುವುದನ್ನು ಕಾಣಬಹುದು. ಅಂದಹಾಗೆ ವಿದ್ಯಾರ್ಥಿಗಳಾಗಿರುವಾಗ ನಾವು ಸಾಮಾನ್ಯವಾಗಿ ಎಲ್ಲಾ ವಿವಿಧ ರೀತಿಯ ಗ್ರಹಗಳ ಬಗ್ಗೆ ಓದಿರುತ್ತೇವೆ, ಹಾಗೂ ಇವುಗಳ ಹೆಸರನ್ನು ಕೇಳಿರುತ್ತೇವೆ. ಈ ಗ್ರಹಗಳ ಓದುವಾಗ ಹಾಗೂ ಕೇಳುವಾಗ ಎಷ್ಟು ವಿಭಿನ್ನವಾಗಿರುತ್ತದೆಯೋ ಅಷ್ಟೆ ವಿಭಿನ್ನವಾಗಿ ಈ ಗ್ರಹ ಕಾಣುತ್ತಿದೆ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Saturn from Delhi (with a Telescope)
byu/Anime-kungfu indelhi

 

Leave A Reply

Your email address will not be published.