Vinesh Pogat: ಕಾಂಗ್ರೆಸ್ ಸೇರಿದ ಕುಸ್ತಿಪಟು ವಿನೇಶ್ ಪೋಗಟ್ ರೈಲ್ವೆ ಇಲಾಖೆಯಲ್ಲಿ ಪಡೆಯುತ್ತಿದ್ದ ಸಂಬಳವೆಷ್ಟು?

Vinesh Pogat: ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat), ಬಜರಂಗ್‌ ಪುನಿಯಾ ಕಾಂಗ್ರೆಸ್ ಸೇರಿದ್ದಾರೆ. ಹರಿಯಾಣ ಚುನಾವಣೆಯಲ್ಲಿ ವಿನೇಶ್‌ಗೆ ಕಾಂಗ್ರೆಸ್‌ಗೆ ಟಿಕೆಟ್‌ ಕೂಡ ಘೋಷಣೆಯಾಗಿದೆ.

ಕುಸ್ತಿಪಟು ವಿನೇಶ್ ಫೋಗಟ್(Vinesh Pogat) ಕಾಂಗ್ರೆಸ್ ಸೇರುವ ಮೊದಲು ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಕಾಂಗ್ರೆಸ್ ಸೇರುವ ಮೂಲಕ, ವಿಧಾನಸಭಾ ಟಿಕೆಟ್ ಪಡೆಯುವ ಮೂಲಕ ಅವರು ಭಾರತೀಯ ರೈಲ್ವೆಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ಸದ್ಯ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಅಂದಹಾಗೆ ಇಂದಿನ ಈ ಬರವಣಿಗೆಯಲ್ಲಿ ನಾವು ವಿನೇಶ್ ಅವರು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವಾಗ ಎಷ್ಟು ಸಂಬಳ ಪಡೆಯುತ್ತಿದ್ದರು, ರೈಲ್ವೆಯಲ್ಲಿ OSD/ಕ್ರೀಡಾ ಕೆಲಸದಲ್ಲಿ ಎಷ್ಟು ಸಂಬಳವಿದೆ ಮತ್ತು ಅದಕ್ಕೆ ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ ಎಂದು ತಿಳಿಸಿಕೊಡುತ್ತೇವೆ.

ವಿನೇಶ್ ಪೋಗಟ್ ಅವರು ಉತ್ತರ ರೈಲ್ವೆಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ಕೆಲಸ ಮಾಡುತ್ತಿದ್ದರು. ಮಾಹಿತಿಯ ಪ್ರಕಾರ, ವಿನೇಶ್‌ಗೆ ಜೂನಿಯರ್ ವೇತನ ಶ್ರೇಣಿಯಲ್ಲಿ (ಹಂತ 7) 54000 ದರ್ಜೆಯ ಅಡಿಯಲ್ಲಿ ವೇತನವನ್ನು ನೀಡಲಾಯಿತು. ಈ ಕೋಟಾದಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಳದ ಜೊತೆಗೆ ಅನೇಕ ರೀತಿಯ ಭತ್ಯೆಗಳನ್ನು ಸಹ ನೀಡಲಾಗುತ್ತದೆ.

ರೈಲ್ವೇ ಸಚಿವಾಲಯವು ಕ್ರೀಡಾ ಕೋಟಾದ ಅಡಿಯಲ್ಲಿ ಪ್ರತಿ ವಲಯಕ್ಕೆ ಕಾಲಕಾಲಕ್ಕೆ ನೇಮಕಾತಿಗಳನ್ನು ನಡೆಸುತ್ತದೆ. ಕ್ರೀಡಾ ಕೋಟಾದಡಿಯಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡಲಾಗುತ್ತದೆ, ಅದರ ಅಡಿಯಲ್ಲಿ ಕೆಲವು ಸ್ಥಾನಗಳನ್ನು ಕ್ರೀಡಾ ಪಟುಗಳಿಗೆ ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಸಂಬಳ ಪಡೆಯುತ್ತಾರೆ.

1 Comment
  1. eco wool says

    Hi! Do you know if they make any plugins to help with Search Engine Optimization? I’m trying to get my website to rank for some
    targeted keywords but I’m not seeing very good success.
    If you know of any please share. Thank you! You can read
    similar art here: Warm blankets

Leave A Reply

Your email address will not be published.