Unusual Voice: ಧ್ವನಿಯಲ್ಲಿ ಉಂಟಾದ ಬದಲಾವಣೆ; ಆಸ್ಪತ್ರೆಗೆ ದೌಡಾಯಿಸಿದ ವ್ಯಕ್ತಿಗೆ ಶಾಕಿಂಗ್‌ ನ್ಯೂಸ್‌

Unusual Voice : ನೋಯ್ಡಾದ ಖಾಸಗಿ ಆಸ್ಪತ್ರೆಯೊಂದರಿಂದ ಆಶ್ಚರ್ಯಕರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ರೋಗಿಯೊಬ್ಬರು ತಮ್ಮ ಧ್ವನಿಯಲ್ಲಿ ಉಂಟಾದ ಅಸಹಜವಾದ ರೀತಿಗೆ ಭಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ನಂತರ ರೋಗಿಗೆ ನಿರಂತರ 15 ಗಂಟೆಗಳ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ಘಟನೆ ನಡೆದಿದೆ.

 

ವ್ಯಕ್ತಿ ಧ್ವನಿಯ ಕಾರಣ ಆಸ್ಪತ್ರೆಗೆ ಬಂದಿದ್ದು, ನಂತರ ಎಲ್ಲಾ ರೀತಿಯ ಸ್ಕ್ಯಾನಿಂಗ್‌, ತಪಾಸಣೆ ಆದ ನಂತರ ಬಿಷಣ್‌ ಸಿಂಗ್‌ ಬಿಶ್ತ್‌ ಅವರ ದೇಹದಲ್ಲಿ ಕಂಡು ಬಂದದ್ದೇನೆಂದರೆ ಈತನ ದೇಹದ ಮುಖ್ಯ ಅಪಧಮನಿಯಲ್ಲಿ ಕಿತ್ತಳೆ ಗಾತ್ರದ ಮಹಾಪಧಮನಿಯ ಅನ್ಯೂರಿಸ್ಮ್‌ ಎಂದು ಹೇಳಲಾಗುವ ಗುಳ್ಳೆಯೊಂದು ಬೆಳೆದಿತ್ತು. ಇದು ಈತನ ಧ್ವನಿ ಬದಲಾವಣೆಗೆ ಕಾರಣವಾಗಿತ್ತು. ಈ ಘಟನೆಯ ನೋಯ್ಡಾದ ಸೆಕ್ಟರ್ 27 ನಲ್ಲಿರುವ ಕೈಲಾಶ್ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯಲ್ಲಿ ನಡೆದಿದೆ. ಈ ಶಸ್ತ್ರಚಿಕಿತ್ಸೆ ಸುಮಾರು 15 ಗಂಟೆಗಳ ಕಾಲ, ಮೂರು ಹಂತಗಳಲ್ಲಿ ಮಾಡಲಾಯಿತು.

ಆಸ್ಪತ್ರೆಯ ಪ್ರಕಟಣೆಯಲ್ಲಿ, ಮುಖ್ಯ ಹೃದಯ ಮತ್ತು ನಾಳೀಯ ಶಸ್ತ್ರಚಿಕಿತ್ಸಕ ಡಾ.ಸತೀಶ್ ಮ್ಯಾಥ್ಯೂ ಅವರು ಬಿಷನ್ ಸಿಂಗ್ ಬಿಷ್ತ್ ಅವರು ಕೈಲಾಶ್ ಆಸ್ಪತ್ರೆಗೆ ಬಂದಿದ್ದು, ತಮ್ಮ ಧ್ವನಿಯಲ್ಲಿ ಉಂಟಾದ ಬದಲಾವಣೆ ಕುರಿತು ಹೇಳಿದ್ದು, ಎಲ್ಲಾ ಪರೀಕ್ಷೆಗಳ ನಂತರ, ಬಿಷ್ತ್‌ನ ದೇಹದ ಮುಖ್ಯ ಮಹಾಪಧಮನಿಯಲ್ಲಿ ಕಿತ್ತಳೆ ಬಣ್ಣದ ಮಹಾಪಧಮನಿಯ ಅನ್ಯಾರಿಸಮ್ ಬೆಳವಣಿಗೆಯಾಗಿದ್ದು, ಇದು ಆತನ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಲಾಗಿದೆ.

ಪರಿಧಮನಿಯ ಆಂಜಿಯೋಗ್ರಾಮ್ ಪರೀಕ್ಷೆಗಳು ಅವರ ಹೃದಯಕ್ಕೆ ರಕ್ತವನ್ನು ಸಾಗಿಸುವ ಎರಡು ಪ್ರಮುಖ ಅಪಧಮನಿಗಳು ಸಹ ನಿರ್ಬಂಧಿಸಲ್ಪಟ್ಟಿವೆ. ಇದು ಹೃದಯಾಘಾತದ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಡಾ.ಮ್ಯಾಥ್ಯೂ ನೇತೃತ್ವದ ಹೃದಯ ಶಸ್ತ್ರಚಿಕಿತ್ಸಾ ತಂಡವು ರೋಗಿಯ ಜೀವಕ್ಕೆ ಅಪಾಯವನ್ನು ಪರಿಗಣಿಸಿ ಮೂರು ಹಂತಗಳಲ್ಲಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಮಾಡಿದೆ.

ಶಸ್ತ್ರಚಿಕಿತ್ಸೆ ನಂತರ ರೋಗಿಯನ್ನು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ಮೇಲ್ವಿಚಾರಣೆಯಲ್ಲಿ ಏಳು ದಿನಗಳ ಕಾಲ ನೋಡಿಕೊಳ್ಳಲಾಯಿತು. ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.