Pakistan: ಬದ್ಧ ವೈರಿ ಪಾಕಿಸ್ತಾನದ ಬಳಿ ಸದಾ ಈ 10 ವಸ್ತುಗಳನ್ನು ಖರೀದಿಸುತ್ತೆ ಭಾರತ – ಇವನ್ನು ಪ್ರತಿಯೊಬ್ಬ ಭಾರತೀಯರೂ ದಿನನಿತ್ಯ ಮನೆಯಲ್ಲಿ ಬಳಸುತ್ತಾರೆ

Pakistan: ಪಾಕಿಸ್ತಾನ- ಭಾರತದ(India-Pakistan)ಬದ್ಧ ವೈರಿ. ಎರಡೂ ಹಾವು-ಮುಂಗಸಿಯಂತವು. ಆದರೂ ಕೂಡ ಭಾರತ ಇಂದಿಗೂ ಕೆಲವು ದಿನನಿತ್ಯ ವಸ್ತುಗಳಿಗಾಗಿ ಪಾಕಿಸ್ತಾನವನ್ನೇ ಅವಲಂಬಿಸಿದೆ. ಪಾಕಿಸ್ತಾನದಿಂದ ನಿರಂತರವಾಗಿ ಈ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಈ ವಸ್ತುಗಳನ್ನು ಭಾರತೀಯರು ದಿನವೂ ಮನೆಯಲ್ಲಿ ಬಳಸುತ್ತಾರೆ.

ಹೌದು, ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರ ಸಂಬಂಧ ಉತ್ತಮವಾಗಿ ನಡಿಯುತ್ತಿದೆ. ಭಾರತವು ಪಾಕಿಸ್ತಾನದಿಂದ ಅತ್ಯಧಿಕವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುತ್ತದೆ. ಅದೂ ಕೂಡ ದಿನನಿತ್ಯ ನಾವುಗಳು ಮನೆಯಲ್ಲಿ ಬಳಸುವ ವಸ್ತುಗಳು. ಅವು ಯಾವ ವಸ್ತುಗಳು ಎಂದು ಗೊತ್ತಾದ್ರೆ ನೀವೂ ಅಚ್ಚರಿ ಪಡುತ್ತೀರಾ !!

ಪಾಕಿಸ್ತಾನದಿಂದ ಭಾರತ ಖರೀದಿಸುವ ವಸ್ತುಗಳು:
ಪಾಕಿಸ್ತಾನದಿಂದ ಭಾರತ ಖರೀದಿಸುವ ಪ್ರಮುಖ ವಸ್ತು ಕಲ್ಲುಪ್ಪು ಅಥವಾ ಸೇಂಧಾ ನಮಕ್ (ರಾಕ್ ಸ್ಟಾಲ್ Himalayan salt). ಭಾರತವು ಈ ರಾಕ್ ಸ್ಟಾಲ್ ಮೇಲೆ ಸಂಪೂರ್ಣವಾಗಿ ಪಾಕಿಸ್ತಾನದ ಮೇಲೆಯೇ ಅವಲಂಬಿತವಾಗಿದೆ. ಉಪವಾಸದ ಸಂದರ್ಭದಲ್ಲಿ ಈ ರಾಕ್ ಸ್ಟಾಲ್ ಹೆಚ್ಚು ಬಳಕೆಯಾಗುತ್ತದೆ. ಹಾಗಾಗಿ ಈ ಉಪ್ಪನ್ನು ಮನೆಗಳಲ್ಲಿ ವಿಶೇಷವಾಗಿ ಬಳಕೆ ಮಾಡಲಾಗುತ್ತದೆ.

ಜೊತೆಗೆ ಮುಲ್ತಾನಾ ಮಿಟ್ಟಿ, ಕಾಟನ್, ಮೆಟಲ್ ಕಾಂಪೌಂಡ್, ಸಲ್ಫರ್, ಕಲ್ಲು ಮತ್ತು ಸುಣ್ಣವನ್ನು ಸಹ ಭಾರತ ಖರೀದಿ ಮಾಡುತ್ತದೆ. ಕನ್ನಡಕಗಳಲ್ಲಿ ಬಳಕೆಯಾಗುವ ಆಪ್ಟಿಕ್ಲಸ್ ಸಹ ದೊಡ್ಡ ಪ್ರಮಾಣದಲ್ಲಿ ಪಾಕಿಸ್ತಾನದಿಂದಲೇ ಭಾರತಕ್ಕೆ ಬರುತ್ತದೆ. ಪಾಕಿಸ್ತಾನದ ಚರ್ಮದ ಉತ್ಪನ್ನಗಳು, ಹಣ್ಣುಗಳು, ಕಾರ್ಬನಿಕ್ ಕೆಮಿಕಲ್ ಮತ್ತು ಮೆಟಲ್ ಕಾಂಪೌಂಡ್ ಭಾರತದಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ.

ಸಕ್ಕರೆಯಿಂದ ಮಾಡಲ್ಪಡುವ ಕನ್ಫೆಕ್ಷನರಿ ಪ್ರೊಡಕ್ಟ್‌ಗಳು ಸಹ ಪಾಕಿಸ್ತಾನದಿಂದಲೇ ಭಾರತಕ್ಕೆ ಬರುತ್ತವೆ. ಸ್ಟೀಲ್‌ ಮೇಲೆಯೂ ಸಹ ಪಾಕಿಸ್ತಾನದ ಮೇಲೆಯೇ ಭಾರತ ಅವಲಂಬಿತವಾಗಿದೆ. ತಾಮ್ರವೂ ಸಹ ಪಾಕಿಸ್ತಾನದಿಂದ ಬರುವ ವಸ್ತುಗಳಲ್ಲಿ ಒಂದಾಗಿದೆ. ಒಟ್ಟಿನಲ್ಲಿ ನಾವು ದಿನನಿತ್ಯ ಬಳಸುವ ಕೆಲವು ಪ್ರಮುಖ ವಸ್ತು, ಪದಾರ್ಥಗಳು ಪಾಕಿಸ್ತಾನದಿಂದ ನಮ್ಮಲ್ಲಿಗೆ ಬಂದವು.

ಇನ್ನು ಇದೀಗ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು, ಜನರು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ವಿದೇಶ ಹಣದ ಸಂಗ್ರಹ ಕುಸಿತ ಮತ್ತು ಸಾಲದ ಪ್ರಮಾಣ ಹೆಚ್ಚಳದಿಂದ ಪಾಕಿಸ್ತಾನ ಅರ್ಥವ್ಯವಸ್ಥೆಯ ಮೇಲೆ ನರಕಾರಾತ್ಮಕ ಪರಿಣಾಮ ಬೀರಿದೆ. ಪಾಕಿಸ್ತಾನದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರು ಬೇಳೆ, ಹಿಟ್ಟು, ಎಣ್ಣೆ ಸೇರಿದಂತ ಅಡುಗೆ ಸಾಮಾಗ್ರಿಗಳನ್ನು ಖರೀದಿಸಲು ಪರದಾಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಪಾಕಿಸ್ತಾನ ಸರ್ಕಾರ ಸಹ ಒಪ್ಪಿಕೊಂಡಿದೆ.

1 Comment
  1. Tech to Trick says

    Tech to Trick I appreciate you sharing this blog post. Thanks Again. Cool.

Leave A Reply

Your email address will not be published.