Deepika Padukone Baby Girl: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ದೀಪಿಕಾ ಪಡುಕೋಣೆ

Deepika Padukone Baby Girl: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಂದೆ ತಾಯಿಯಾಗಿದ್ದಾರೆ. ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿಯನ್ನು ಶನಿವಾರ ಮಧ್ಯಾಹ್ನ ಮುಂಬೈನ ಗಿರ್ಗಾಂವ್ ಪ್ರದೇಶದ ಹೆಚ್ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಣವೀರ್ ಸಿಂಗ್ ಮತ್ತು ಅವರ ಕುಟುಂಬ ಕೂಡ ಹಾಜರಿದ್ದರು. ಸೆಪ್ಟೆಂಬರ್ 6 ರಂದು ದೀಪಿಕಾ ಬಪ್ಪನ ದರ್ಶನಕ್ಕಾಗಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬಂದಿದ್ದರು.

 

ಈ ವರ್ಷದ ಫೆಬ್ರವರಿ 28 ರಂದು ದೀಪಿಕಾ ತಾನು ಗರ್ಭಿಣಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಸೆಪ್ಟೆಂಬರ್ 2024 ರಲ್ಲಿ ಮಗುವಿಗೆ ಜನ್ಮ ನೀಡುವುದಾಗಿ ಬರೆದಿದ್ದಾರೆ.

ಶುಕ್ರವಾರ ಮಧ್ಯಾಹ್ನ ದೀಪಿಕಾ ಪತಿ ರಣವೀರ್ ಸಿಂಗ್ ಅವರೊಂದಿಗೆ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ, ದೀಪಿಕಾ ಹಸಿರು ಸೀರೆಯಲ್ಲಿ ಕಾಣಿಸಿಕೊಂಡರೆ, ರಣವೀರ್ ಕುರ್ತಾ-ಪೈಜಾಮದಲ್ಲಿ ಕಾಣಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ ಇಬ್ಬರ ಕುಟುಂಬದವರೂ ಉಪಸ್ಥಿತರಿದ್ದರು.

1 Comment
  1. MAXCLUB88 says

    Gaskan terus buat kau ya ANJINGLAH

Leave A Reply

Your email address will not be published.