Ujire: ಹಿಂದೂ ಸಮಾಜೋತ್ಸವದಲ್ಲಿ ದ್ವೇಷ ಭಾಷಣ – ಉಜಿರೆ ದಂತ ವೈದ್ಯ ದಯಾಕರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ SDPI ದೂರು !!

Ujire: ಉಜಿರೆಯಲ್ಲಿ ಇತ್ತೀಚೆಗೆ ಹಿಂದೂ ಸಮಾಜೋತ್ಸವ ಸಮಾವೇಶ(Hindu Samajotsava Samavesha) ನಡೆದಿದ್ದು, ಇದರಲ್ಲಿ ಉಜಿರೆ ದಂತ ವೈದ್ಯ ದಯಾಕರ್ ಅವರು ಕೋಮು-ಕೋಮುಗಳ ಬಗ್ಗೆ ವಿಷ-ಬೀಜ ಬಿತ್ತುವ ದ್ವೇಷ ಭಾಷಣವನ್ನು ಮಾಡಿದ್ದಾರೆಂದು ದಯಾಕರ್ ವಿರುದ್ಧ SDPI ಉಜಿರೆ ಬ್ಲಾಕ್ ಸಮಿತಿ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಉಜಿರೆಯ ಹಿಂದೂ ಸಮಾವೇಶದ ವೇದಿಕೆಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ದಯಾಕರ್(Dr Dayakar) ಅವರು ಬಹಿರಂಗವಾಗಿ ಅವರ ಕಾರ್ಯಕರ್ತರೊಂದಿಗೆ ‘ಕೇವಲ ಬಲಿಯಾಗುವುದು ಮಾತ್ರವಲ್ಲ ಬಲಿ ಕೊಡಲು ಸಿದ್ದರಿರಬೇಕು’ ಹಾಗೂ ‘ದೇವಾಲಯದಲ್ಲಿ ತೀರ್ಥವನ್ನು ನೀಡುವ ಸಂದರ್ಭದಲ್ಲಿ ಶಾಪವನ್ನಿಟ್ಟು ತೀರ್ಥ ನೀಡಬೇಕೆಂದು’ ಎಂದು ಮಾತನಾಡಿದ್ದಾರೆ. ಇದು ಕೋಮು ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು SDPI ತಿಳಿಸಿದೆ.

ಜನ್ಮ ಕೊಡುವವಳು ತಾಯಿ ಆದರೆ, ಮರು ಜನ್ಮ ನೀಡುವವನು ವೈದ್ಯರೈ. ಆದರೆ ಈ ವೈದ್ಯನು ಬಹಿರಂಗವಾಗಿ ಕೊಲೆಗೆ ಆಹ್ವಾನ ನೀಡುವ ಹೇಳಿಕೆ ನೀಡುವುದಲ್ಲದೆ, ತೀರ್ಥಕ್ಕೆ ಶಾಪವನ್ನು ಇಟ್ಟು ದೇವಾಲಯದಲ್ಲಿ ಅರ್ಚಕನು ತೀರ್ಥವನ್ನು ನೀಡಬೆಕೆಂಬ ಹೇಳಿಕೆಯನ್ನು ನಿಡಿದ್ದಾರೆ. ಇದು ಕೋಮು-ಕೋಮುಗಳ ಬಗ್ಗೆ ವಿಷ-ಬೀಜ ಬಿತ್ತುವ ದ್ವೇಷ ಭಾಷಣವಾಗಿದೆ. ಸಮಾಜದಲ್ಲಿ ಈ ರೀತಿ ಹೇಳಿಕೆ ನೀಡಿ ಜಾತಿಗಳ ಮದ್ಯೆ ಗಲಬೆ ಎಬ್ಬಿಸುವ ಹುನ್ನಾರವಾಗಿದೆ. ಹೀಗಾಗಿ ದಯಾಕರು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

Leave A Reply

Your email address will not be published.