Ganapati: ದೇಶದ ಏಕೈಕ ನಾಗ ಗಣಪತಿ: ತಜ್ಞರಿಗೂ ಸವಾಲು ನೀಡುತ್ತಿದೆ ಇಲ್ಲಿನ ರಹಸ್ಯ ಪವಾಡಗಳು!
Ganapati: ಗಣಪತಿ ಎಂದರೆ ವಿಘ್ನ ನಿವಾರಕ. ಸಾಮಾನ್ಯವಾಗಿ ಭಾರತದಲ್ಲಿ ವಿಘ್ನ ನಿವಾರಕನ ಸಾಕಷ್ಟು ದೇವಾಲಯಗಳಿವೆ, ಅದರೆ ನಿಮಗೆ ಗೊತ್ತಾ? ನಾಗ ಗಣಪತಿಯಂಥ (Ganapati) ದೇವಾಲಯ ಮತ್ತೊಂದಿಲ್ಲ, ಈ ದೇವಾಲಯವು ಸುಮಾರು 1103 ವರ್ಷ ಹಿಂದಿನದು, ಈ ದೇವಾಲಯ ಛತ್ತೀಸ್‌ಗಢದ ಡೋಲ್ಕಲ್ ಬೆಟ್ಟದಲ್ಲಿದೆ, ಇದು ಅರಣ್ಯದೊಳಗಡೆ 14 ಕಿಮೀ ದೂರದಲ್ಲಿರುವ ಬೆಟ್ಟದಲ್ಲಿದೆ. ಇಲ್ಲಿನ ಇತಿಹಾಸ ಕೆದಕಿದಷ್ಟು ಇನ್ನಷ್ಟು ನಿಗೂಢಗಳು ತಿಳಿದು ಬರುತ್ತೆ.
ಹೌದು, ಛತ್ತೀಸ್‌ಗಢದ ಡೋಲ್ಕಲ್ ಬೆಟ್ಟದಲ್ಲಿರುವ ಈ ನಾಗ ಗಣಪತಿ ಮೂರ್ತಿಯ ವಿಶೇಷವೆಂದರೆ ಪ್ರತಿವರ್ಷವೂ ಬೆಳೆಯುತ್ತಲೇ ಇದೆ, ಮುಖ್ಯವಾಗಿ ಬೆಟ್ಟದ ತುತ್ತ ತುದಿಯಲ್ಲಿರುವ ಈ ಗಣೇಶನ ಮೂರ್ತಿ ರಂಗೋಲಿ ಹಾಕಿದಾಗ 360 ಡಿಗ್ರಿಯಲ್ಲಿ ತಿರುಗುತ್ತದೆ, ಹೌದು, ಇಲ್ಲಿ ನಾಗ ಸಾಮ್ರಾಜ್ಯದ 21 ಚಿಹ್ನೆಯ ರಂಗೋಲಿ ಹಾಕಿದರೆ ಗಣಪತಿ ಒಂದು ಸುತ್ತು ಹಾಕುತ್ತದೆ. ಅದರೆ ರಂಗೋಲಿ ತೂಕದ ಬೇರೆ ಯಾವುದೇ ವಸ್ತು ಇಟ್ಟರು ಗಣಪತಿಯ ಮೂರ್ತಿ ತಿರುಗುವುದಿಲ್ಲ, ಬೇರೆ ಯಾವುದೇ ರಂಗೋಲಿ ಬರೆದರೂ ಮೂರ್ತಿ ತಿರುಗಲ್ಲ, ಆದರೆ ನಾಗ ಸಾಮ್ರಾಜ್ಯದ 21 ಚಿಹ್ನೆ ಬರೆದರೆ ಮೂರ್ತಿ ಒಂದು ಸುತ್ತು ಹಾಕುತ್ತದೆ. ಇಲ್ಲಿಯ ಪವಾಡಗಳ ಕಾರಣದಿಂದ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತಿರುವ ದೇವಾಲಯವಾಗಿದೆ. ಇನ್ನು ಈ ಪವಾಡದ ಹಿಂದಿನ ಕಾರಣವೇನು ಎಂಬುವುದನ್ನು ಬೇಧಿಸಲು ಇಂದಿಗೂ ವಿಜ್ಞಾನಿಗಳಿಗೂ ಸಾಧ್ಯ ಆಗಿಲ್ಲ.
ಮಾಹಿತಿ ಪ್ರಕಾರ, ಈ ದೇವಾಲಯವನ್ನು 2ನೇ ಶತಮಾನದಲ್ಲಿ ನಾಗ ಸಾಮ್ರಾಜ್ಯ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಗಣಪತಿಯ ಕಲ್ಲು ಕೂಡ ತುಂಬಾನೇ ವಿಶೇಷವಾಗಿದೆ, ಇಂಥದ್ದೊಂದು ಕಲ್ಲು ಎಲ್ಲಿಯೂ ಕಂಡು ಬಂದಿಲ್ಲ ಎಂದು ಪುರಾತತ್ವ ಇಲಾಖೆ ಹೇಳುತ್ತದೆ. 1924ರಲ್ಲಿ ಛತ್ತೀಸ್‌ಗಢದಲ್ಲಿ ಭೂಕಂಪನ ಸಂಭವಿಸಿದಾಗ ಡೋಲ್ಕಲ್ ಬೆಟ್ಟ 4 ವಿಭಾಗವಾಗುತ್ತದೆ, ಅದರೆ ಈ ಮೂರ್ತಿ ಇರುವ ಬೆಟ್ಟದ ಭಾಗಕ್ಕೆ ಏನೂ ಆಗದೆ ಹಾಗೆಯೇ ಉಳಿದಿದೆ.
ಇನ್ನು ಸಾಮಾನ್ಯರು ಡೋಲ್ಕಲ್ ಬೆಟ್ಟ ಹತ್ತುವುದು ಸುಲಭವಲ್ಲ, ಹೀಗೆ ಹತ್ತಲು ಪ್ರಯತ್ನ ಮಾಡಿದ ಹಲವಾರು ಜನರು ಅಪಾಯ ಎದುರಿಸಿದ್ದಾರೆ. ಅದರೆ ಅದರ ಸಮೀಪ ಇರುವ ಬಸ್ಕಾರ್ ಬೆಟ್ಟ ಹತ್ತುವುದು ಸುಲಭ, ಈ ಬೆಟ್ಟ ಹತ್ತಿದರೆ ಡೋಲ್ಕಲ್ ಬೆಟ್ಟದಲ್ಲಿರುವ ಗಣೇಶನ ದರ್ಶನ ಪಡೆಯಬಹುದು. ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು ಬಂದು ಗಣೇಶನ ದರ್ಶನ ಪಡೆಯುತ್ತಾರೆ ಎನ್ನಲಾಗಿದೆ.
ಹಾಗಿದ್ರೆ ಇಲ್ಲಿನ ಪೂಜೆ ಪುನಸ್ಕಾರ ಗತಿ ಏನು ಎಂದು ನೋಡಿದಾಗ, ಈ ದೇವಾಲಯದ ಪೂಜೆಯನ್ನು ಅಲ್ಲಿಯ ಸರ್ಕಾರ ವಹಿಸಿಕೊಂಡಿದ್ದು ಪುರೋಹಿತರನ್ನು ಹೆಲಿಕಾಫ್ಟರ್‌ನಲ್ಲಿ ಕರೆದುಕೊಂಡು ಬಂದು ಪೂಜೆ ಸಲ್ಲಿಸಿ ಹೋಗಲಾಗುವುದು. ಈ ಬೆಟ್ಟದಲ್ಲಿ ಇಬ್ಬರು ನಿಲ್ಲಬಹುದು ಅಷ್ಟೇ. ಇಲ್ಲಿಗೆ ನಾಗ ಜನಾಂಗದವರು ಸುಲಭದಲ್ಲಿ ಹತ್ತಿ ಬರುತ್ತಾರೆ.
ಇನ್ನೊಂದು ಬಗೆಯಲ್ಲಿ ಡೋಲ್ಕರ್ ಬೆಟ್ಟದಲ್ಲಿರುವ ನಾಗ ಗಣಪತಿಯನ್ನು ಕೆತ್ತಿ ಮಾಡಿದ್ದಲ್ಲ, ಮಂತ್ರ ಶಕ್ತಿಯಿಂದ ಮಾಡಿದ್ದು ಎಂದು ಹೇಳಲಾಗುತ್ತಿದೆ.