Mohan Bhagavat: ‘ನಾವೇ ದೇವರಾದರೆ ಹೇಗೆ? ಅದನ್ನು ಜನ ಮಾಡಬೇಕಲ್ಲೇ?’ ಮೋದಿಗೆ ಮತ್ತೆ ಟಾಂಗ್ ಕೊಟ್ಟ RSS ನಾಯಕ ಮೋಹನ್ ಭಾಗವತ್

Mohan Bhagavat: RSS ಹಾಗೂ ಪ್ರಧಾನಿ ಮೋದಿಯವರ ಸಂಬಂಧ ಹದಗೆಟ್ಟಿದೆ ಎಂಬುದನ್ನು ಯಾಕೋ RSS ಪದೇ ಪದೇ ಹೇಳಿಕೊಳ್ಳುತ್ತಿದೆ ಅನಿಸುತ್ತಿದೆ. ಯಾಕೆಂದರೆ RSS ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagavat) ಹೇಳಿಕೆ ಆ ರೀತಿ ಇದೆ. ಯಸ್, ‘ನಾವು ದೇವರಾಗಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ, ನಾವು ದೇವರಾಗಿದ್ದೇವೆ ಎಂದು ಘೋಷಿಸಬಾರದು’ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಮೋದಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ(PM Narendra modi) ಲೋಕಸಭೆ ಚುನಾವಣೆ ವೇಳೆ ‘ನಾನು ಜೈವಿಕವಾಗಿ ಜನಿಸಿದಂತೆ ಭಾಸವಾಗುತ್ತಿಲ್ಲ. ನನ್ನನ್ನು ಭಗವಂತನೇ ಕಳಿಸಿದ್ದಾನೆ ಎಂಬಂತೆ ಭಾಸವಾಗುತ್ತಿದೆ’ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿ ಜು.19ರಂದೂ ಭಾಗವತ್‌, ‘ಒಬ್ಬ ವ್ಯಕ್ತಿಯು ‘ಸೂಪರ್ ಮ್ಯಾನ್‌’ ಆಗಲು ಬಯಸಬಹುದು. ನಂತರ ‘ದೇವತೆ’ ಮತ್ತು ‘ಭಗವಾನ್’ ಮತ್ತು ‘ವಿಶ್ವರೂಪ’ ಆಗಲು ಹಾತೊರೆಯಬಹುದು. ಆದರೆ ಮುಂದೆ ಏನಾಗುತ್ತದೆ ಎಂಬ ಅರಿವು ಯಾರಿಗೂ ಇರಲ್ಲ’ ಎಂದು ಹೇಳಿದ್ದರು. ಇದಾದ ನಂತರ ಇಷ್ಟಕ್ಕೇ ಸುಮ್ಮನಾಗದ ಭಾಗವತ್‌ ಅವರು ಇದೀಗ 2ನೇ ಬಾರಿಗೆ ಮತ್ತೆ ಅಂಥದ್ದೇ ಹೇಳಿಕೆ ನೀಡಿದ್ದಾರೆ.

ಹೌದು, ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುರುವಾರ ರಾತ್ರಿ ಮಾತನಾಡಿದ ಭಾಗವತ್‌, ‘ಕೆಲವರು ಶಾಂತವಾಗಿರುವುದಕ್ಕಿಂತ ಮಿಂಚಿನಂತೆ ಹೊಳೆಯಬೇಕು ಎಂದು ಭಾವಿಸುತ್ತಾರೆ. ಆದರೆ ಮಿಂಚು ಹಾಗೂ ಗುಡುಗು-ಸಿಡಿಲಿನ ಬಳಿಕ ಮೊದಲಿಗಿಂತ ಹೆಚ್ಚು ಕತ್ತಲೆಯಾದಂತೆ ಕಾಣುತ್ತದೆ. ಆದ್ದರಿಂದ, ಕಾರ್ಯಕರ್ತರು ದೀಪದಂತೆ ಉರಿಯಬೇಕು ಮತ್ತು ಅಗತ್ಯವಿದ್ದಾಗ ಹೊಳೆಯಬೇಕು’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

‘ನಾವು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಒಳ್ಳೆಯ ಕೆಲಸವನ್ನು ಮಾಡಲು ಪ್ರಯತ್ನಿಸಬೇಕು. ನಾವು ಹೊಳೆಯಬಾರದು ಅಥವಾ ಎದ್ದು ಕಾಣಬಾರದು ಎಂದು ಯಾರೂ ಹೇಳುತ್ತಿಲ್ಲ. ಕೆಲಸದ ಮೂಲಕ, ಪ್ರತಿಯೊಬ್ಬರೂ ಪೂಜ್ಯ ವ್ಯಕ್ತಿಯಾಗಬಹುದು. ಆದರೆ ನಾವು ಆ ಮಟ್ಟವನ್ನು ತಲುಪಿದ್ದೇವೆಯೇ ಎಂಬುದನ್ನು ಇತರರು ನಿರ್ಧರಿಸುತ್ತಾರೆ. ನಮ್ಮಷ್ಟಕ್ಕೆ ನಾವೇ ‘ನಾವು ದೇವರಾಗಿದ್ದೇವೆ’ ಎಂದು ಘೋಷಿಕೊಳ್ಳಬಾರದು’ ಎಂದರು

ಹಿಂದೆಯೂ ಹೀಗೆ ಹೇಳಿದ್ದರು:
ಜಾರ್ಖಂಡ್‌ನ(Jarkhand) ಗುಮ್ಲಾದಲ್ಲಿ ವಿಕಾಸ್ ಭಾರತಿ ಆಯೋಜಿಸಿದ್ದ ಕಾರ್ಯಕರ್ತರ ಮಾತನಾಡಿದ್ದ ಭಾಗವತ್ ಅವರು ‘ಸ್ವಯಂ ಅಭಿವೃದ್ಧಿಯ ಹಾದಿಯಲ್ಲಿ ಕೆಲವರು ಸೂಪರ್‌ ಮ್ಯಾನ್ ಆಗಲು ಬಯಸುತ್ತಾರೆ, ನಂತರ ‘ಭಗವಾನ್’ (ದೇವರು) ಆಗಲು ಬಯಸುತ್ತಾರೆ, ಬಳಿಕ ವಿಶ್ವರೂಪ ಹೊಂದಲು ನೋಡುತ್ತಾರೆ. ಆದರೆ ಮುಂದೇನು ಎಂದು ಯಾರಿಗೂ ಖಚಿತವಿಲ್ಲ. ಆಂತರಿಕ ಮತ್ತು ಬಾಹ್ಯ ಆತ್ಮದ ಬೆಳವಣಿಗೆಗೆ ಅಂತ್ಯವಿಲ್ಲ ಮತ್ತು ಮಾನವೀಯ ಕಾರ್ಯಕಕ್ಕಾಗಿ ಅವಿರತವಾಗಿ ಶ್ರಮಿಸಬೇಕುʼʼ ಎಂದು ಹೇಳಿದ್ದರು.

ಅಲ್ಲದೆ ‘ಹೆಚ್ಚಿನದಕ್ಕೆ ಯಾವಾಗಲೂ ಅವಕಾಶವಿದೆ ಎಂದು ಯೋಚಿಸಬೇಕು. ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅಂತಿಮವಾಗಿ ಅಭಿವೃದ್ದಿಗೆ ಯಾವುದೇ ಕೊನೆ ಎಂಬುದೇ ಇಲ್ಲ. ಇದನ್ನು ಪ್ರತಿಯೊಬ್ಬ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಯಾರೇ ಆಗಲಿ ಹೆಚ್ಚಿನದ್ದನ್ನು ಸಾಧಿಸಲು ದುಡಿಯಬೇಕು ಎಂದು ಮೋಹನ್ ಬಾಗವತ್’ ಹೇಳಿದ್ದರು.

Leave A Reply

Your email address will not be published.