Swachh Bharat Mission: ಪ್ರತೀ ವರ್ಷವೂ 60 ರಿಂದ 70 ಸಾವಿರ ಮಕ್ಕಳ ಜೀವ ಉಳಿಸುತ್ತಿದೆ ಮೋದಿಯ ‘ಸ್ವಚ್ಛ ಭಾರತ್’ !! ದೇಶವೇ ಹೆಮ್ಮೆ ಪಡುವ ವರದಿ ಬಹಿರಂಗ

Swachh Bharat Mission: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವುಗಳಲ್ಲಿ ‘ಸ್ವಚ್ಛ ಭಾರತ'(Swachh Bharata Missio) ಅಭಿಯಾನ ಕೂಡ ಒಂದು. ಇದು ದೇಶಾದ್ಯಂತ ಜನರಿಂದ ಸ್ಪಂದನೆ ಪಡೆದು ಯಶಸ್ವಿಯಾಯಿತು. ಆದರೀಗ ಈ ಯೋಜನೆ ಕುರಿತು ದೇಶವೇ ಹೆಮ್ಮೆ ಪಡುವಂತಹ ವರದಿ ಹೊರಬಿದದ್ದಿದೆ.

ಹೌದು, ನರೇಂದ್ರ ಮೋದಿ (Narendra Modi) ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ಶೌಚಾಲಯಗಳು ಪ್ರತಿ ವರ್ಷ 60,000-70,000 ಶಿಶು ಮರಣಗಳನ್ನು ತಪ್ಪಿಸಲು ಸಹಾಯ ಮಾಡಿರಬಹುದು ಎಂದು ಅಧ್ಯಯನವೊಂದು ಗುರುವಾರ ತಿಳಿಸಿದೆ. ಅಮೆರಿಕದ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಸಂಶೋಧಕ ರನ್ನು ಒಳಗೊಂಡ ತಂಡವು ದೇಶದ 35 ರಾಜ್ಯ / ಕೇಂದ್ರಾಡಳಿತ ಪ್ರದೇಶಗಳುಹಾಗೂ 600ಕ್ಕೂ ಹೆಚ್ಚು ಜಿಲ್ಲೆಗಳ ರಾಷ್ಟ್ರೀಯ ಪ್ರಾತಿನಿಧಿಕ ಸಮೀಕ್ಷೆಯನ್ನು ಆಧರಿಸಿ ಈ ಅಧ್ಯಯನವರದಿಯೊಂದನ್ನು ಸಿದ್ದಪಡಿಸಿದೆ.

ಯುನೈಟೆಡ್ ಸ್ಟೇಟ್ಸ್‌ನ ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು 35 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು 600 ಕ್ಕೂ ಹೆಚ್ಚು ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಪ್ರಾತಿನಿಧಿಕ ಸಮೀಕ್ಷೆಗಳ ಡೇಟಾವನ್ನು 20 ವರ್ಷಗಳಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.

ಜಿಲ್ಲಾ ಮಟ್ಟದಲ್ಲಿ ಶೌಚಾಲಯ ಬಳಕೆ ಶೇ.10ರಷ್ಟು ಹೆಚ್ಚಳವಾಗಿ ಪ್ರತೀವರ್ಷ ಶಿಶುಗಳ ಮರಣ ಪ್ರಮಾಣ ಶೇ.0.9 ರಷ್ಟು, 5 ವರ್ಷದೊಳಗಿನ ಮಕ್ಕಳ ಮರಣ ಶೇ.1.1ರಷ್ಟು ಇಳಿಕೆಯಾಗಿದೆ. ಪ್ರತೀವರ್ಷ 60-70 ಸಾವಿರ ಶಿಶುಗಳ ಮರಣ ತಪ್ಪಿದೆ ಎನ್ನಲಾಗಿದೆ. ಶೌಚಾಲ ಯ ಬಳಕೆ ಹೆಚ್ಚಳದಿಂದ ಮಹಿಳಾ ಸುರ ಕ್ಷತೆ, ವೈದ್ಯಕೀಯ ವೆಚ್ಚ ಕಡಿಮೆಯಾಗಿ ಆರ್ಥಿಕ ಉಳಿತಾಯ, ಸೇರಿ ಸಾಕಷ್ಟು ಪ್ರಯೋಜನವಾಗುತ್ತಿವೆ ಎಂದು ಹಲವು ಅಧ್ಯಯನಗಳು ಹೇಳಿವೆ.

ವರದಿಯಲ್ಲೇನಿದೆ?:
ಈ ವರದಿಯನ್ನು ಬ್ರಿಟನ್‌ನ ವೈಜ್ಞಾನಿಕ ನಿಯತಕಾಲಿಕೆ ‘ನೇಚರ್’ ಪ್ರಕಟಿಸಿದೆ. ಸ್ವಚ್ಛ ಭಾರತ ಯೋಜನೆಯು 2014ರಲ್ಲಿ ಜಾರಿಗೆ ಬಂದ ನಂತರ ದೇಶದಲ್ಲಿ ಶೌಚಾಲಯ ನಿರ್ಮಾಣ ಗಮ ನಾರ್ಹ ಪ್ರಮಾಣದಲ್ಲಿ ಏರಿಕೆಯಾಯಿತು. ಸ್ವಚ್ಛ ಭಾರತ ಮಿಷನ್ ಮುನ್ನ ಹಾಗೂ ನಂತರದ ಅವಧಿಗೆ ಹೋಲಿಸಿದರೆ ನವಜಾತ ಶಿಶು ಮತ್ತು ಮಕ್ಕಳ ಮರಣ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡುಬಂದಿದೆ.ಶೌಚಾಲಯಗಳ ಲಭ್ಯತೆಯಿಂದನೈರ್ಮಲ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ. ಇದರಿಂದ ರೋಗ ರುಜಿನ ಗಳು ಕಡಿಮೆ ಆಗಿ ಪ್ರತಿ ವರ್ಷ ಭಾರತದಲ್ಲಿ ಐದು ವರ್ಷದೊಳಗಿನ 60000ದಿಂದ 70 ಸಾವಿರ ಮಕ್ಕಳ ಸಾವನ್ನು ತಪ್ಪಿಸಿರುವಂತೆ ಕಂಡುಬರುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಸ್ವಚ್ಛ ಭಾರತದ ಯೋಜನೆಯಡಿ ಶೌಚಾ ಲಯ ನಿರ್ಮಾಣವಾದಂತೆಲ್ಲಾ ಮಕ್ಕಳ ಸಾವಿನ ಪ್ರಮಾಣ ಇಳಿಮುಖವಾಗಿರುವುದು ಕಂಡುಬಂದಿದೆ ಎಂದು ಹೇಳಿದೆ.

Leave A Reply

Your email address will not be published.