Jammu-Kashmir Assembly Election: ಬಿಜೆಪಿ ಪ್ರಣಾಳಿಕೆ ಬಿಡುಗಡೆ – ಮತ್ತೆ ಜಾರಿಯಾಗುತ್ತಾ ಆರ್ಟಿಕಲ್ 370?!

Jammu-Kashmir Assembly Election: ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ (Jammu and Kashmir Assembly Election) ಬಿಜೆಪಿ (BJP) ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಸಮ್ಮುಖದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಪ್ರಣಾಳಿಕೆ ಬಿಡುಗಡೆಯಲ್ಲಿ ಮಾತನಾಡಿದ ಅಮಿತ್ ಶಾ, “ಸ್ವಾತಂತ್ರ್ಯದ ನಂತರ, ಜಮ್ಮು ಮತ್ತು ಕಾಶ್ಮೀರದ ವಿಷಯವು ನಮ್ಮ ಪಕ್ಷಕ್ಕೆ ಮುಖ್ಯವಾಗಿದೆ. ನಾವು ಯಾವಾಗಲೂ ಈ ಪ್ರದೇಶವನ್ನು ಭಾರತದೊಂದಿಗೆ ಇರಿಸಿಕೊಳ್ಳಲು ಪ್ರಯತ್ನಿಸಿದ್ದೇವೆ” ಎಂದು ಹೇಳಿದರು.

ಅಲ್ಲದೆ ಆರ್ಟಿಕಲ್ 370 ಮರು ಸ್ಥಾಪಿಸುವ ಬಗ್ಗೆ ಮಾತನಾಡಿದ ಅವರು ‘370 ಇತಿಹಾಸದ ಭಾಗವಾಗಿದೆ ಮತ್ತು ಎಂದಿಗೂ ಹಿಂತಿರುಗುವುದಿಲ್ಲ. ನಾನು ನ್ಯಾಷನಲ್ ಕಾನ್ಫರೆನ್ಸ್‌ನ “ಅಜೆಂಡಾ”ವನ್ನು ಪರಿಶೀಲಿಸಿದ್ದೇನೆ. ಆದರೆ 370ನೇ ವಿಧಿ ಈಗ ಇತಿಹಾಸದ ಭಾಗವಾಗಿದೆ. ಅದನ್ನು ಎಂದಿಗೂ ಮರುಸ್ಥಾಪಿಸಲು ಸಾಧ್ಯವಿಲ್ಲ. 370ನೇ ವಿಧಿ ಇನ್ನು ಮುಂದೆ ಸಂವಿಧಾನದ ಭಾಗವಲ್ಲ ಎಂದು ಶಾ ಒತ್ತಿ ಹೇಳಿದರು.

ಅಲ್ಲದೆ ಪಂಡಿತ್ ಪ್ರೇಮ್ ನಾಥ್ ಡೋಗ್ರಾ ಅವರ ಹೋರಾಟದಿಂದ ಶ್ಯಾಮ ಪ್ರಸಾದ್ ಮುಖರ್ಜಿ ಅವರ ತ್ಯಾಗದವರೆಗೆ, ಈ ಹೋರಾಟವನ್ನು ಮೊದಲು ಜನಸಂಘ ಮತ್ತು ನಂತರ ಬಿಜೆಪಿಯು ಮುಂದಕ್ಕೆ ತೆಗೆದುಕೊಂಡಿತು. ಜಮ್ಮು ಮತ್ತು ಕಾಶ್ಮೀರ ಯಾವಾಗಲೂ ಭಾರತದ ಭಾಗವಾಗಿದೆ ಮತ್ತು ಹಾಗೆಯೇ ಉಳಿಯುತ್ತದೆ ಎಂದು ನಾವು ನಂಬುತ್ತೇವೆ” ಎಂದು ಹೇಳಿದ್ದಾರೆ.

ಪ್ರಣಾಳಿಕೆಯಲ್ಲಿ ಏನಿದೆ?
ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಏನನ್ನು ನೀಡುತ್ತೇವೆ ಎಂದು 25 ಅಂಶಗಳನ್ನೊಳಗೊಂಡ ಪ್ರಣಾಳಿಕೆಯನ್ನು ರಿಲೀಸ್ ಮಾಡಿದೆ. ‘ಮಾ ಸಮ್ಮಾನ್ ಯೋಜನೆ’ ಅಡಿಯಲ್ಲಿ ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ವರ್ಷಕ್ಕೆ ₹ 18,000 ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

ಅಲ್ಲದೆ ನಾವು ಉಜ್ವಲ ಯೋಜನೆಯಡಿ ವರ್ಷಕ್ಕೆ ಎರಡು ಉಚಿತ ಸಿಲಿಂಡರ್‌ಗಳು, ಪ್ರಗತಿ ಶಿಕ್ಷಾ ಯೋಜನೆಯಡಿ ಪ್ರಯಾಣ ಭತ್ಯೆಯಾಗಿ ಕಾಲೇಜು ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹ 3,000 ನೀಡುವುದಾಗಿಯೂ ಬಿಜೆಪಿ ತಿಳಿಸಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆಯನ್ನು ಬಿಜೆಪಿ ಖಚಿತಪಡಿಸುತ್ತದೆ ಎಂದು ಶಾ ಹೇಳಿದರು.

ಜೊತೆಗೆ ದೂರದ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಗಳು ಅಥವಾ ಲ್ಯಾಪ್‌ಟಾಪ್‌ಗಳನ್ನು ನೀಡಲಾಗುವುದು. ಆದರೆ ಕಾಲೇಜು ವಿದ್ಯಾರ್ಥಿಗಳು ಪ್ರಗತಿ ಶಿಕ್ಷಾ ಯೋಜನೆಯಡಿ ವಾರ್ಷಿಕ ₹ 3,000 ಪ್ರಯಾಣ ಭತ್ಯೆಯಿಂದ ಪ್ರಯೋಜನ ಪಡೆಯುತ್ತಾರೆ. ಜಮ್ಮು ನಗರದಲ್ಲಿ ಐಟಿಗಾಗಿ ವಿಶೇಷ ಆರ್ಥಿಕ ವಲಯ (SEZ), ಶ್ರೀನಗರದ ಅಮ್ಯೂಸ್‌ಮೆಂಟ್ ಪಾರ್ಕ್, ಮತ್ತು ಗುಲ್ಮಾರ್ಗ್ ಮತ್ತು ಪಹಲ್ಗಾಮ್ ಅನ್ನು ಆಧುನಿಕ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವುದು ಕೇಂದ್ರಾಡಳಿತ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಪ್ರಮುಖ ಅಂಶಗಳಾಗಿವ ಎಂದು ಬಿಜೆಪಿ ಹೇಳಿದೆ.

Leave A Reply

Your email address will not be published.