Electricity bill: ವಿದ್ಯುತ್ ಬಿಲ್ ಮನ್ನಾ ಯೋಜನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್!
Electricity bill: ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸಲು ಜನರು ಪರದಾಡುತ್ತಿದ್ದು, ಅದಕ್ಕಾಗಿ ಈ ಸಮಸ್ಯೆಯನ್ನ ಪರಿಹರಿಸಲು, ಸರ್ಕಾರವು ಹೊಸ ನಿಯಮವನ್ನ ಜಾರಿಗೆ ತಂದಿದ್ದು, ಈ ಹಿನ್ನೆಲೆ ವಿದ್ಯುತ್ ಬಿಲ್ (electricity bill) ಪಾವತಿ ಮಾಡುವ ಚಿಂತೆ ಇನ್ನಿಲ್ಲ.
ಹೌದು, ದೇಶದ ಹಲವು ರಾಜ್ಯಗಳಲ್ಲಿ ವಿದ್ಯುತ್ ಬಿಲ್ ಮನ್ನಾ ಯೋಜನೆಯನ್ನೂ ಸರ್ಕಾರ ಆರಂಭಿಸಿದೆ. ಈ ಯೋಜನೆಯಡಿಯಲ್ಲಿ, ದೀರ್ಘಕಾಲದವರೆಗೆ ವಿದ್ಯುತ್ ಬಿಲ್’ಗಳು ಬಾಕಿ ಇರುವ ಗ್ರಾಹಕರು ಇನ್ನು ಮುಂದೆ ಅವುಗಳನ್ನ ಪಾವತಿಸಬೇಕಾಗಿಲ್ಲ ಮತ್ತು ಈ ಬಿಲ್ ವೆಚ್ಚವನ್ನ ಸರ್ಕಾರವೇ ಭರಿಸಲಿದೆ. ಹಾಗಾಗಿ ಈಗ ಗ್ರಾಹಕರು ಹಳೆಯ ವಿದ್ಯುತ್ ಬಿಲ್’ಗಳ ಬಗ್ಗೆ ಚಿಂತಿಸಬೇಕಿಲ್ಲ.
ಇನ್ನು ದೇಶದ ಅನೇಕ ರಾಜ್ಯಗಳಲ್ಲಿ, ಈಗ ಹಳೆಯ ಎಲೆಕ್ಟ್ರಿಕ್ ಮೀಟರ್’ಗಳ ಬದಲಿಗೆ ಸ್ಮಾರ್ಟ್ ಮೀಟರ್’ಗಳನ್ನು ಅಳವಡಿಸಲಾಗುತ್ತಿದೆ. ವಿದ್ಯುತ್ ಇಲಾಖೆ ಅಳವಡಿಸಿರುವ ಈ ಸ್ಮಾರ್ಟ್ ಮೀಟರ್’ಗಳು ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತವೆ. ಇದು ವಿದ್ಯುತ್ ದುರ್ಬಳಕೆಯನ್ನ ತಡೆಯುತ್ತದೆ. ಸ್ಮಾರ್ಟ್ ಮೀಟರ್’ಗಳನ್ನ ಅಳವಡಿಸುವ ಮೂಲಕ ಗ್ರಾಹಕರು ತಮ್ಮ ವಿದ್ಯುತ್ ಬಿಲ್’ನಲ್ಲಿ ಯಾವುದೇ ಅಕ್ರಮಗಳನ್ನ ತೊಡೆದುಹಾಕಲು ಸಾಧ್ಯವಾಗುತ್ತದೆ. ಇದಲ್ಲದೆ, ಅವರು ವಿದ್ಯುತ್ ಬಳಸದಿದ್ದಾಗ, ಅವರು ಅದರ ಶುಲ್ಕವನ್ನ ಪಾವತಿಸಬೇಕಾಗಿಲ್ಲ. ಈ ಮೂಲಕ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಸಾಕಷ್ಟು ಪರಿಹಾರ ಸಿಗಲಿದೆ.