Devadas Kapikad: ಕಾಪಿಕಾಡ್ ಬಗೆಗಿನ ವಿವಾದ ಸೃಷ್ಟಿ: ಜಾಲತಾಣದಲ್ಲಿ ಕಾಪಿಕಾಡ್ ಶೋ ಬಹಿಷ್ಕಾರ!

Devadas Kapikad: ತುಳುಚಿತ್ರ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಬಗೆಗಿನ ವಿವಾದ ಸೃಷ್ಟಿ ಆಗಿದ್ದು ಭಾರಿ ಚರ್ಚೆಗೆ ಕಾರಣ ಆಗಿದೆ. ಹೌದು, ಕಾಪಿಕಾಡ್ (Devadas Kapikad) ಅವರು ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎನ್ನಲಾದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದೀಗ ವಿವಾದ ಸೃಷ್ಟಿಯಾಗಿದೆ.

ಆದ್ದರಿಂದ ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಅವರ ‘ದಿ ಕಾಪಿಕಾಡ್ ಶೋ’ಗೆ ಬಹಿಷ್ಕಾರ ಹಾಕುವ ಬೆದರಿಕೆಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದ್ರೆ ಇದರ ಬೆನ್ನಲ್ಲೇ ದೇವದಾಸ್ ಕಾಪಿಕಾಡ್ ಅವರು ತಾವು ಬಿಜೆಪಿ ಸದಸ್ಯತ್ವ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸೆಪ್ಟೆಂಬರ್ 4ರಂದು ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ದೇವದಾಸ್ ಕಾಪಿಕಾಡ್ ಅವರ ಸ್ಥಳೀಯ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ದೇವದಾಸ್‌ ಸದಸ್ಯತ್ವ ಪಡೆದಿದ್ದಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕವು ತನ್ನ ಫೇಸ್‌ಬುಕ್‌ ಪುಟದಲ್ಲಿ ಮಾಹಿತಿ ಹಂಚಿಕೊಂಡಿತ್ತು. ಸದಾನಂದ ಗೌಡರು ಸಹ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದರು. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಈ ಹಿನ್ನೆಲೆ ಸೆಪ್ಟೆಂಬರ್ 13 ಮತ್ತು 14ರಂದು ಸೌದಿ ಅರೇಬಿಯಾದಲ್ಲಿ ಆಯೋಜಿಸಿದ್ದ ದಿ ಕಾಪಿಕಾಡ್ ಶೋಗೆ ಬಹಿಷ್ಕಾರ ಹಾಕುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡಿವೆ. ಈ ಬಗ್ಗೆ ದೇವದಾಸ್‌ ಕಾಪಿಕಾಡ್ ಸ್ಪಷ್ಟನೆ ನೀಡಿರುವ ಧ್ವನಿ ಮುದ್ರಣ ವಾಟ್ಸ್‌ಆಯಪ್‌ ಗ್ರೂಪ್‌ಗಳಲ್ಲಿ ಹಂಚಿಕೆಯಾಗುತ್ತಿದೆ.

ಬಿಜೆಪಿ ಘಟಕ ಹಂಚಿಕೊಂಡಿದ್ದ ಸದಸ್ಯತ್ವ ಅಭಿಯಾನದ ಚಿತ್ರ ಇಲ್ಲಿದೆ

ಕಾಪಿಕಾಡ್ ಪ್ರಕಾರ, ‘ಬಿಜೆಪಿ ನಾಯಕರನ್ನು ಸೌಹಾರ್ದವಾಗಿ ಭೇಟಿಯಾಗಿದ್ದು, ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ, ಎಲ್ಲ ಪಕ್ಷಗಳ ಮುಖಂಡರ ಜೊತೆ ನನಗೆ ಉತ್ತಮ ಸೌಹಾರ್ದ ಭಾಂದವ್ಯ ಇದೆ’ ಎಂದು ಅವರು ಹೇಳಿಕೊಂಡಿದ್ದಾರೆ.

 

ಇನ್ನು ಈ ಕುರಿತು ‘ಸದಸ್ಯತ್ವ ಅಭಿಯಾನದ ಭಾಗವಾಗಿ ಸಮಾಜದ ಗಣ್ಯ ವ್ಯಕ್ತಿಗಳು,

ಕಲಾವಿದರ ಮನೆಗೆ ಭೇಟಿ

ನೀಡುವುದು ‍ಸಹಜ ಪ್ರಕ್ರಿಯೆ. ದೇವದಾಸ್‌ ಮನೆಗೆ ಭೇಟಿ ನೀಡಿದ್ದು ನಿಜ, ಹಾಗೆಂದ ಮಾತ್ರಕ್ಕೆ ಅವರು ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂದರ್ಥವಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಪ್ರತಿಕ್ರಿಯಿಸಿದ್ದಾರೆ.

 

 

Leave A Reply

Your email address will not be published.