General knowledge: ವಿಚಿತ್ರ ಆದ್ರು ಸತ್ಯ! ಈ ಪ್ರಾಣಿಗಳು ಒಂದೇ ಒಂದು ಹನಿ ನೀರು ಕುಡಿಯದೇ ಜೀವಿಸಬಲ್ಲದು!

General knowledge: ಯಾವುದೇ ಪ್ರಾಣಿ ಅಥವಾ ಸಸ್ತನಿ ನೀರು ಇಲ್ಲದೇ ಬದುಕಲು ಸಾಧ್ಯವಿಲ್ಲ ಅನ್ನೋ ನಿಮ್ಮ ಕಲ್ಪನೆ ಆಗಿರಬಹುದು ಆದ್ರೆ ಅದು ತಪ್ಪು. ಯಾಕಂದ್ರೆ ಇಲ್ಲಿ ತಿಳಿಸುವ ಪ್ರಾಣಿಗಳು ಒಂದೇ ಒಂದು ಹನಿ ನೀರು ಕುಡಿಯದೇ ಜೀವಿಸಬಲ್ಲದು ಅಂದ್ರೆ ನೀವು ನಂಬಲೇ ಬೇಕು. ಇದೊಂದು ಸಾಮನ್ಯ ಜ್ಞಾನ (General knowledge) ಪ್ರಶ್ನೆಯು ಹೌದು.

ಕಾಂಗರೂ ಇಲಿ:

ಉತ್ತರ ಅಮೆರಿಕಾದಲ್ಲಿ ಕಂಡುಬರುವ ಕಾಂಗರೂ ಇಲಿಗಳು ತಮ್ಮ ಆಹಾರದಲ್ಲೇ ನೀರನ್ನು ಪಡೆಯುತ್ತವೆ. ಈ ಇಲಿಗಳ ಮೂತ್ರಪಿಂಡಗಳು ತುಂಬಾ ಬಲಿಷ್ಠವಾಗಿರುವ ಕಾರಣ ಈ ಇಲಿಗಳು ತಮ್ಮ ಇಡೀ ಜೀವನವನ್ನು ನೀರಿಲ್ಲದೆ ಕಳೆಯಬಲ್ಲವು.

ಗ್ರೇಟರ್ ರೋಡ್ʼರನ್ನರ್:

ಉತ್ತರ ಮತ್ತು ಮಧ್ಯ ಅಮೆರಿಕದಲ್ಲಿ ಕಂಡುಬರುವ ಈ ಪಕ್ಷಿ ನೀರಿಲ್ಲದೆಯೂ ಬದುಕಬಲ್ಲದು. ಇವುಗಳು ತನ್ನ ಆಹಾರದಿಂದ ತೇವಾಂಶವನ್ನು ಪಡೆಯುತ್ತದೆ. ಇದರ ಆಹಾರದಲ್ಲಿ ಸರೀಸೃಪಗಳು ಮತ್ತು ಸಣ್ಣ ಸಸ್ತನಿಗಳು ಸೇರಿವೆ.

ಇಗ್ವಾನಾ:

ಮರುಭೂಮಿಯಲ್ಲಿ ಕಂಡುಬರುವ ಇಗ್ವಾನಾಗಳು ಸಹ ದೀರ್ಘಕಾಲ ನೀರಿಲ್ಲದೆ ಬದುಕಬಲ್ಲವು. ಈ ಪ್ರಭೇದವು ನೈಋತ್ಯ ಯುನೈಟೆಡ್ ಸ್ಟೇಟ್ಸ್ ಮತ್ತು ವಾಯುವ್ಯ ಮೆಕ್ಸಿಕೋದ ಸೊನೊರಾನ್ ಮತ್ತು ಮೊಜಾವೆ ಮರುಭೂಮಿಗಳಲ್ಲಿ ಕಂಡುಬರುತ್ತದೆ. ಜೊತೆಗೆ ಕ್ಯಾಲಿಫೋರ್ನಿಯಾ ಕೊಲ್ಲಿಯ ಹಲವಾರು ದ್ವೀಪಗಳಲ್ಲಿ ಕಂಡುಬರುತ್ತದೆ.

ಬಿಳಿ-ಪಾದದ ನರಿ:

ಸಹಾರಾ ಮರುಭೂಮಿಯಲ್ಲಿ ಕಂಡುಬರುವ ಬಿಳಿ-ಪಾದದ ನರಿ ಅಥವಾ ಮರುಭೂಮಿ ನರಿ ಕೀಟಗಳು ಮತ್ತು ಸಸ್ಯಗಳನ್ನು ತಿನ್ನುವ ಮೂಲಕ ತನ್ನ ದೇಹದಲ್ಲಿ ನೀರನ್ನು ಪುನಃ ತುಂಬಿಸುತ್ತದೆ. ಇದಲ್ಲದೆ, ಈ ನರಿ ಕಡಿಮೆ ಬೆವರು ಉತ್ಪಾದಿಸುವ ಮೂಲಕ ತನ್ನ ದೇಹದಲ್ಲಿ ನೀರನ್ನು ಸಂಗ್ರಹಿಸಿಕೊಳ್ಳುತ್ತವೆ

ಮರುಭೂಮಿ ಆಮೆ:

ಈ ಆಮೆಗಳು ಸಸ್ಯಗಳನ್ನು ತಿನ್ನುವ ಮೂಲಕ ತಮ್ಮ ದೇಹದಲ್ಲಿ ನೀರನ್ನು ಮರುಪೂರಣಗೊಳಿಸುತ್ತವೆ. ಇದಲ್ಲದೆ, ಬೆಳಗಿನ ಇಬ್ಬನಿ ಅಥವಾ ಮಳೆಯ ತೇವಾಂಶವು ಅವುಗಳ ದೇಹಕ್ಕೆ ನೀರನ್ನು ಪೂರೈಸುತ್ತದೆ.

ಥಾರ್ನಿ ಡೆವಿಲ್:

ಇದು ಆಸ್ಟ್ರೇಲಿಯಾದಲ್ಲಿ ಕಂಡುಬರುವ ಹಲ್ಲಿ ಜಾತಿಯ ಜೀವಿಯಾಗಿದೆ. ಇದು ತನ್ನ ಚರ್ಮದ ಮೂಲಕ ನೀರನ್ನು ಹೀರಿಕೊಳ್ಳುತ್ತದೆ.

Leave A Reply

Your email address will not be published.