Renukaswamy: ಪವಿತ್ರ ಗೌಡಗೆ ಮಾಡಿದ ಅಶ್ಲೀಲ ಮೆಸೇಜ್ ಕುರಿತು ರೇಣುಕಾ ಸ್ವಾಮಿ ತಾಯಿ ಫಸ್ಟ್ ರಿಯಾಕ್ಷನ್!!

Share the Article

Renukaswamy: ಹೆಂಡತಿ ಇದ್ದರೂ ಬೇರೊಂದು ಹೆಣ್ಣಿನ ಚಟಕ್ಕೆ, ಸಹವಾಸಕ್ಕೆ ಬಿದ್ದ ದರ್ಶನ್, ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು(Renukaswamy)ಭೀಕರವಾಗಿ ಹತ್ಯೆ ಮಾಡಿ ಕಂಬಿ ಎಣಿಸುತ್ತಿದ್ದಾರೆ. ಇದರಿಂದ ರೇಣುಕಾ ಸ್ವಾಮಿ ಹತ್ಯೆ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇದೀಗ ರೇಣುಕಾ ಸ್ವಾಮಿ ತಾಯಿ ಮಗ ಮಾಡಿದ ಅಶ್ಲೀಲ ಮೆಸೇಜ್ ಬಗ್ಗೆ ಮಾತನಾಡಿದ್ದಾರೆ.

ಹೌದು, ತಾಯಿ ರತ್ನಪ್ರಭಾ(Rathnaprabha) ಅವರು ಮಗ ಪವಿತ್ರ ಗೌಡಳಿಗೆ ಮಾಡಿರುವ ಮೆಸೇಜ್ ಬಗ್ಗೆ ಮಾತನಾಡಿದ್ದಾರೆ. ಇದರ ಕುರಿತು ರಿಯಾಕ್ಟ್ ಮಾಡಿದ ಅವರು ‘ಮಗ ಮೆಸೇಜ್ ಕಳಿಸಿರುವುದು ತಪ್ಪು. ಅವರು ಹೊಡೆದಿದ್ದರಲ್ಲಾ? ಅದು ಬಿಟ್ಟು ಅಷ್ಟೊಂದು ಕ್ರೂರತನ ಮಾಡೋದೇನಿತ್ತು? ಪೊಲೀಸ್ ಇತ್ತು, ಕಾನೂನು ಇತ್ತು, ಕಂಪ್ಲೇಂಟ್ ಕೊಡಬಹುದಿತ್ತು. ನಮಗೆ ಹೇಳಬಹುದಿತ್ತು. ಅಲ್ಲಿಂದಲೇ ಫೋನ್ ಮಾಡಿ ನಮಗೆ ಹೇಳಬಹುದಾಗಿತ್ತು. ಅವರಿಗೆ ಎಚ್ಚರಿಕೆ ಕೊಡಿ ಅನ್ನಬಹುದಾಗಿತ್ತು. ನಾವು ಅವನು ಬಂದಾಗ ಬುದ್ಧಿ ಹೇಳ್ತಿದ್ವಿ’ ಎಂದು ಹೇಳಿದ್ದಾರೆ.

‘ಕೊನೆ ಪಕ್ಷ ಅವನು ಮೆಸೇಜ್ ಹಾಕಿದಾಗ ನಮಗೆ ಹೇಳಬಹುದಾಗಿತ್ತು. ನಾವು ಎಚ್ಚೆತ್ತುಕೊಳ್ಳುತ್ತಿದ್ದೆವು. ಇಷ್ಟು ಆಗೋಕೆ ಬಿಡುತ್ತಿರಲಿಲ್ಲ. ನನ್ನ ಮಗನನ್ನು ನಾನು ಕಳೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ವೈರಲ್ ಫೋಟೋ ಬಗ್ಗೆ ಹೇಳಿ ಅವರೂ ಒಬ್ಬ ಮನುಷ್ಯರಾ ಅನಿಸುತ್ತದೆ. ಅವರೂ ಹುಡುಗ ಅಲ್ವ? ಅಮಾಯಕ ಮದುವೆಯಾದ ಹುಡುಗ. ಅಷ್ಟು ಕೇಳಿಕೊಂಡಿದ್ದಾನೆ. ಬಿಡಬೇಕು, ಏನೋ ಆಗಿ ಹೋಗಿದೆ. ಎರಡು ಏಟು ಹೊಡದು ಕಳಿಸಬಹುದಿತ್ತಲ್ಲಾ? ಅವನು ಹೇಗೆ ಯಾವ ಅವಸ್ಥೆಯಲ್ಲಿ ಬಂದಿದ್ರೂ ನಾವು ಸ್ವೀಕರಿಸ್ತಿದ್ವಿ. ಈಗ ನಮ್ಮ ಕುಟುಂಬವನ್ನೇ ನಾಶ ಎಂದು ಹೇಳಿದ್ದಾರೆ.

Leave A Reply