Hijab: ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಬೇಕೋ, ಬೇಡವೋ? ಮುಖಂಡ ಮೌಲಾನ ಮದನಿ ಹೇಳಿದ್ದೇನು?
Hijab: ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ, ವಕ್ಫ್ ತಿದ್ದುಪಡಿ, ಮೋದಿ ಸರ್ಕಾರದ ವಿದೇಶಾಂಗ ನೀತಿ ಸೇರಿ ಹಲವು ಪ್ರಸ್ತುತ ವಿದ್ಯಾಮಾನಗಳ ಕುರಿತು ಖಾಸಗಿ ವಾಹಿನಿವೊಂದರ ಜೊತೆಗೆ ಮಾತನಾಡಿದ ಜಮಿಯತ್-ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ(Maulana Mahmood Madani) ಅವರು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವ ವಿಚಾರವಾಗಿಯೂ ಮಾತನಾಡಿದ್ದಾರೆ.
ಹಿಜಾಬ್(Hijab) ವಿವಾದದ ಕಿಚ್ಚು ಕರ್ನಾಟಕದಲ್ಲಿ ಹುಟ್ಟಿ ಇದೀಗ ದೇಶಾದ್ಯಂತ ಹಬ್ಬಿದೆ. ಯಾವುವೇ ಮುಸ್ಲಿಂ ಮುಖ್ಯಸ್ಥರು ಏನಾದರೂ ವಿಚಾರದ ಬಗ್ಗೆ ಮಾತನಾಡುವುದಿದ್ದರೆ ಹಿಜಾಬ್ ವಿಚಾರವನ್ನೂ ಮಧ್ಯ ತಂದು ಪರ-ವಿರೋಧದ ವಾದ ಮಾಡುವುದು ಅಥವಾ ಅವರಿಗೆ ಈ ಕುರಿತು ಪ್ರಶ್ನೆ ಎದುರಾಗುವುದು ಸಾಮಾನ್ಯವಾಗಿದೆ. ಅಂತೆಯೇ ಇದೀಗ ಜಮಿಯತ್-ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ ಅವರು ಕೂಡ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಹಿಜಾಬ್ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಮೌಲಾನಾ ಮಹಮೂದ್ ಮದನಿ, ನೀವು ಹಿಜಾಬ್ ಅನ್ಪೈ ಅಭಿವೃದ್ಧಿಯ ಹಾದಿಯಲ್ಲಿ ಏಕೆ ಅಡ್ಡಿ ಎಂದು ಪರಿಗಣಿಸುತ್ತಿದ್ದೀರಿ ಶಿಕ್ಷಣದ ಹಾದಿಯಲ್ಲಿ ಹಿಜಾಬ್ ಏಕೆ ಅಡ್ಡಿ ಎಂದು ಪರಿಗಣಿಸಲಾಗುತ್ತದೆ.? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಈ ವಿಷಯದ ಬಗ್ಗೆ ಆಯ್ಕೆ ಇರಬೇಕು, ಹಿಜಾಬ್ ಧರಿಸಲು ಬಯಸುವ ಹುಡುಗಿ ಅದನ್ನು ಧರಿಸಲು ಅನುಮತಿಸಬೇಕು ಮತ್ತು ಯಾರು ಹಿಜಾಬ್ ಇಲ್ಲದೆ ಅಧ್ಯಯನ ಮಾಡಲು ಬಯಸುತ್ತಾರೆ, ಅವರು ಹಾಗೆಯೇ ಅಧ್ಯಯನ ಮಾಡಲಿ. ಅವರ ಸ್ವಾತಂತ್ರ್ಯವನ್ನ ಏಕೆ ಕಸಿದುಕೊಳ್ಳುತ್ತಿದ್ದಾರೆ.? ನೀವು ಕಸಿದುಕೊಳ್ಳಬೇಡಿ. ಯಾರನ್ನೂ ಬಲವಂತ ಮಾಡಬೇಡಿ. ಇದು ನಮ್ಮ ಇಸ್ಲಾಂ, ಇದು ನಮ್ಮ ಸನಾತನ ಧರ್ಮ ಮತ್ತು ಇದು ನಮ್ಮ ದೇಶ ಎಂದು ಅವರು ಹೇಳಿದರು.