Assault: 70 ರ ಹರೆಯದ ಮುದುಕನಿಂದ ಅಂಗಡಿಗೆ ಬಂದ ಬಾಲಕಿಯ ಖಾಸಗಿ ಅಂಗ ಸ್ಪರ್ಶ

Share the Article

Assault: ಹೆಣ್ಣು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳ ಸಂಖ್ಯೆಗೆ ಹೊಸ ಸೇರ್ಪಡೆಯಾಗಿದೆ. ಹೌದು 70 ವರ್ಷದ ಮದುಕನೋರ್ವ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ವೀಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈತನನ್ನು ಇದೀಗ ಪೊಲೀಸರು ಬಂಧನ ಮಾಡಿದ್ದಾರೆ.

ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿರುವ ಘಟನೆ ಇದಾಗಿದ್ದು, ಅಂಗಡಿಗೆ ಬಂದ ಬಾಲಕಿಯ ಜೊತೆ ವೃದ್ಧನೋರ್ವ ವಿಕೃತಿ ಮೆರೆದಿದ್ದಾರೆ. ಬಾಲಕಿಯೊಬ್ಬಳು ಮೊಹಮ್ಮದ್‌ ಅನ್ವರ್‌ (70) ಎಂಬಾತನ ಪೆಟ್ಟಿ ಅಂಗಡಿಗೆ ಬಂದಿದ್ದು, ತಿಂಡಿ ತಿನಿಸು ಖರೀದಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಾಕಲೇಟ್‌ ಕೊಡುವ ನೆಪದಲ್ಲಿ ಬಾಲಕಿಯನ್ನು ಹತ್ತಿರ ಕರೆಸಿದ ಈತ ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಇದನ್ನು ಸೋಷಿಯನ್‌ ಮೀಡಿಯಾದಲ್ಲಿ ಯಾರೋ ಒಬ್ಬರು ವೀಡಿಯೋ ಮಾಡಿದ್ದಾರೆ.

ವೀಡಿಯೋ ವೈರಲ್‌ ಆಗುತ್ತಿದ್ದಂತೆ ಸೀತಾಪುರ ಪೊಲೀಸರು ಪೋಕ್ಸೋ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಲ್ಲಿ 70 ರ ಹರೆಯದ ಅನ್ವರ್‌ನನ್ನು ಬಂಧನ ಮಾಡಲಾಗಿದೆ.

https://twitter.com/TimesAlgebraIND/status/1831328921519796579

 

Leave A Reply