Nikil Kumaraswamy: ಚಣ್ಣಪಟ್ಟದಲ್ಲಿ ನಾನು ಸ್ಪರ್ಧೆ ಮಾಡಲ್ಲ ಎಂದ ನಿಖಿಲ್! ಹಾಗಾದರೆ ಅಭ್ಯರ್ಥಿ ಯಾರು?
Channapattana Election: ಚನ್ನಪಟ್ಟಣ(Chennapattana) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ(By election) ತಮ್ಮ ಸ್ಪರ್ಧೆ ಸಾಧ್ಯತೆಯನ್ನು ತಳ್ಳಿ ಹಾಕಿರುವ ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ(JDS President) ನಿಖಿಲ್ ಕುಮಾರಸ್ವಾಮಿ(Nikhil Kumaraswamy), ತಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತ ಎನ್‌ಡಿಎ(NDA) ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯಾಗಿ(Cabdidate) ಕಣಕ್ಕೆ ಇಳಿಯುತ್ತಾರೆ ಎಂದು ಪುನರುಚ್ಚರಿಸಿದ್ದಾರೆ.
ಕೊಪ್ಪಳದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಿಂದ ನನ್ನ ಸ್ಪರ್ಧೆ ಕುರಿತಂತೆ ಇದುವರೆಗೆ ನಾನು ಬಹಿರಂಗವಾಗಿ ಮಾತನಾಡಿಯೇ ಇಲ್ಲ. ನನ್ನ ಸ್ಪರ್ಧೆ ಕುರಿತ ಸುದ್ದಿಗಳು ಊಹಾಪೋಹವಷ್ಟೇ ಎಂದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವು ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿನಿಧಿಸಿದ್ದಂತಹ ಕ್ಷೇತ್ರ. ಅನಿರೀಕ್ಷಿತ ಬೆಳವಣಿಗೆಗಳಿಂದ ಅವರು ಕೇಂದ್ರ ರಾಜಕಾರಣದತ್ತ ಹೊರಳಿದ್ದಾರೆ. ನಾನು ನಿರಂತರವಾಗಿ ಆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರ ರಾಜಕಾರಣದ ವಸ್ತುನಿಷ್ಠ ವರದಿ, ಸಂಗ್ರಹಿಸಲಾಗಿರುವ ಅಭಿಪ್ರಾಯಗಳನ್ನು ನಮ್ಮ ವರಿಷ್ಠರ ಗಮನಕ್ಕೆ ತರಲಾಗಿದೆ. ಕ್ಷೇತದಲ್ಲಿ ನಿಷ್ಠವಂತ ಕಾರ್ಯಕರ್ತಗೆ ಟಿಕೆಟ್ ನೀಡಿದಲ್ಲಿ ತಾವೆಲ್ಲಾ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತೇವೆ ಎಂದು ಪ್ರತಿಯೊಬ್ಬರೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಚನ್ನಪಟ್ಟಣದಿಂದ ಕಾಂಗ್ರೆಸ್ ಪಕ್ಷವನ್ನು ದೂರವಿಡಲು ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಬಿಜೆಪಿ, ಜೆಡಿಎಸ್ ಸಂಘಟಿತ ಹೋರಾಟ ನಡೆಸಲಿವೆ ಎಂದರು.
ರೈತರ ಸಮಸ್ಯೆ ಉಲ್ಬಣ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿಗಳ ಗುಂಗಿನಲ್ಲೇ ಮುಳುಗಿದೆ. 5 ಗ್ಯಾರಂಟಿಗಳು ಇದುವರೆಗೆ ಎಲ್ಲಾ ಜನರನ್ನೂ ತಲುಪಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಇತರೆ ರಾಜ್ಯಗಳ ಪರಿಸ್ಥಿತಿ ಏನಾಗಿದೆ? ಅದು ನಮ್ಮಲ್ಲೂ ಬರುವ ಕಾಲ ದೂರವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ಲೇಷಿಸಿದರು.
ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಆ ಸಮುದಾಯಕ್ಕೆ ಹೇಳಿಕೊಳ್ಳುವ ಯಾವುದೇ ಕೊಡುಗೆ ನೀಡಿಲ್ಲ. ಕುಮಾರಸ್ವಾಮಿ ಅವರು ಯಾವುದೇ ವಿಚಾರದಲ್ಲೂ ಹಿಟ್ ಅಂಡ್ ರನ್ ಮಾಡುವವರಲ್ಲ. ಪೂರಕ ದಾಖಲೆಗಳಿಲ್ಲದೆ ಮಾತನಾಡುವುದಿಲ್ಲ. ಎಲ್ಲವನ್ನೂ ಜನತೆಯ ಮುಂದಿಟ್ಟಿದ್ದಾರೆ ಎಂದು ಅವರು ತಿಳಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಥಾಪಿಸಿರುವ ಜೆಡಿಎಸ್ ಪಕ್ಷ ತನ್ನ ಸಿದ್ಧಾಂತವನ್ನು ಬಿಟ್ಟುಕೊಟ್ಟಿಲ್ಲ. ಬಿಜೆಪಿ ಜತೆ ಕೈಜೋಡಿಸಿದ ಮಾತ್ರಕ್ಕೆ ನಮ್ಮ ಸಿದ್ಧಾಂತ ಮಾರಾಟವಾದಂತಲ್ಲ. ಅಲ್ಪಸಂಖ್ಯಾತರು ಸೇರಿದಂತೆ ನಾಡಿನ ಎಲ್ಲಾ ಸಮುದಾಯಗಳ ಪರವಾಗಿ ನಮ್ಮ ಪಕ್ಷ ಕಳಕಳಿ, ಬದ್ಧತೆ ತೋರುತ್ತದೆ ಎಂದು
ಸ್ಪಷ್ಟಪಡಿಸಿದರು.
ಪಕ್ಷ ಸಂಘಟನೆಗೆ ಒತ್ತು:
ರಾಜ್ಯದ 31 ಜಿಲ್ಲೆಗಳಲ್ಲೂ ಸದಸ್ಯತ್ವ ನೊಂದಣಿ ಮತ್ತು ಬೂತ್ ಮಟ್ಟದ ಕಮಿಟಿ ರಚನೆಗೆ ಪ್ರವಾಸ ಪ್ರಾರಂಭಿಸಲಾಗಿದೆ. ಜೆಡಿಎಸ್ ಪಕ್ಷವು ಹಳೆ ಮೈಸೂರು ಭಾಗಕ್ಕಷ್ಟೇ ಸೀಮತವಾದ ಪಕ್ಷವಲ್ಲ. ನಾಡಿನ ಉದ್ದಗಲಕ್ಕೂ ತನ್ನದೇ ಆದ ಮತಬ್ಯಾಂಕ್ ಈ ಪಕ್ಷಕ್ಕಿದೆ ಎಂದು ನಿಖಿಲ್ ಹೇಳಿದರು. ರಾಜ್ಯದ 31 ಜಿಲ್ಲೆಗಳಲ್ಲಿ ಕೂಡ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಂತ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದರು.
ಪಾದಯಾತ್ರೆ ಯಶಸ್ವಿ:
ಮುಡಾ ನಿವೇಶನ ಹಂಚಿಕೆ ಹಗರಣದ ವಿರುದ್ಧ ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಒಟ್ಟು 121 ಕಿಮೀ ಪಾದಯಾತ್ರೆಯಿಂದ ಏನು ಮಾಡಿದ್ದೇವೆ ಎಂದು ಮಾಧ್ಯಮದಲ್ಲಿ ನೋಡಿದ್ದೀರಿ. ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಅದಕ್ಕೆ ನಮ್ಮ ಪಾದಯಾತ್ರೆಗೆ ವ್ಯಕ್ತವಾದ ಅಭೂತಪೂರ್ವ ಬೆಂಬಲವೇ ಸಾಕ್ಷಿ ಎಂದು ನಿಖಿಲ್ ಹೇಳಿದರು.
ಕಾನೂನು ಎಲ್ಲರಿಗೂ ಒಂದೇ:
ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ನಟ ದರ್ಶನ್ ಪ್ರಕರಣ ಸಂಬಂಧ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿರುವ ಕಾನೂನು ಒಬ್ಬೊಬ್ಬರಿಗೆ ಒಂದೊAದು ರೀತಿ ಇಲ್ಲ. ಜೈಲಿನಲ್ಲಿ ತಾರತಮ್ಯ ನಡೆದಿರುವ ಫೋಟೋ, ವೀಡಿಯೋ ಹೊರ ಬಂದಿದ್ದರಿಂದ ಪೊಲೀಸ್ ಮತ್ತು ಜೈಲು ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
I have read some excellent stuff here Definitely value bookmarking for revisiting I wonder how much effort you put to make the sort of excellent informative website