SSLC: ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ: ಮಧ್ಯವಾರ್ಷಿಕ “ಬೋರ್ಡ್‌” ಪರೀಕ್ಷೆಗೆ ತಯಾರಾಗಿ

SSLC: ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳು ಈ ಬಾರಿ ವಾರ್ಷಿಕ ಪರೀಕ್ಷೆ ಅಲ್ಲದೆ, ಮಧ್ಯವಾರ್ಷಿಕ ಪರೀಕ್ಷೆಗೂ ಮಂಡಳಿ ಮಟ್ಟದ ಪ್ರಶ್ನೆ ಪತ್ರಿಕೆ ಕೂಡಾ ಬರೆಯಬೇಕಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2024ರ ಎಸ್‌ಎಸ್‌ಎಲ್‌ಸಿ ಮಧ್ಯವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಮಾಡಲು ನಿರ್ಧಾರ ಮಾಡಿದೆ. ಕೇವಲ ವಾರ್ಷಿಕ ಪರೀಕ್ಷೆಯನ್ನಷ್ಟೇ ಮಂಡಳಿ ನಡೆಸುತ್ತಿತ್ತು. ಹಾಗಾಗಿ ಮಧ್ಯವಾರ್ಷಿಕ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿಯೇ ನಡೆಸಲಾಗುತ್ತಿತ್ತು.

ಮಂಡಳಿಯೇ ಈ ಬಾರಿ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ರೂಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆನ್ಲೈನ್‌ ಮೂಲಕ ಕಳುಹಿಸಿದೆ. ಹಾಗೂ ಆಯಾ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಶ್ನೆ ಪತ್ರಿಕೆ ಮುದ್ರಣ ಮಾಡಿ ತಲುಪಿಸಲಿರುವ ಕುರಿತು ವರದಿಯಾಗಿದೆ.

Leave A Reply

Your email address will not be published.