Bulldozer: ನಿಮಗೆ ಗೊತ್ತಾ.. ‘ಬುಲ್ಡೋಜರ್’ ಅಥವಾ ‘ಜೆಸಿಬಿ’ಯ ನಿಜವಾದ ಹೆಸರೇ ಬೇರೆ ಅನ್ನೋದು? ಇವು ಹಳದಿಬಣ್ಣದಲ್ಲಿರಲು ಇದೆ ಒಂದು ಕಾರಣ !!

Bulldozer: ‘ಜೆಸಿಬಿ’ ಅಥವಾ ‘ಬುಲ್ಡೋಜರ್'(Bulldozer) ಈ ಹೆಸರು ಕೇಳದವರು ಯಾರು? ಎಲ್ಲರಿಗೂ ಈ ಯಂತ್ರದ ಬಗ್ಗೆ ಗೊತ್ತೇ ಇದೆ. ಎಲ್ಲಾದರೂ ನಿರ್ಮಾಣ ಕಾರ್ಯ, ಕಾಮಗಾರಿ ನಡೆಯುತ್ತಿದ್ದರೆ ಈ ಬೃಹತ್ ಜೆಸಿಬಿ ಅಥವಾ ಕ್ರೇನ್ ನ ಯಂತ್ರಗಳನ್ನು ಬಳಸುತ್ತಾರೆ. ಆದರೆ ಆಗಾಗ ಈ ಜೆಸಿಬಿ ಹೆಸರಿನ ಬಗ್ಗೆ ನೀವು ಕೆಲವು ಕುತೂಹಲಕರವಾದ ವಿಚಾರಗಳನ್ನು ಕೇಳಬಹುದು. ಜೆಸಿಬಿತ ನಿಜವಾದ ಹೆಸರು ಜೆಸಿಬಿ ಅಥವಾ ಬುಲ್ಡೋಜರ್ ಅಲ್ಲ. ಅದರ ನಿಜ ಹೆಸರು ಬೇರೆಯೇ ಇದೆ ಎಂಬಂತಹ ಮಾತುಗಳನ್ನು, ಮಾಹಿತಿಗಳನ್ನು ನಿಮ್ಮ ಕಿವಿಗೂ ಬಿದ್ದಿರಬಹುದು. ಹಾಗಾದ್ರೆ ಏನಿದರ ನಿಜ ನಾಮ? ಜೆಸಿಬಿ ಅನ್ನೋ ಹೆಸರೇಕೆ ಬಂತು?

ಹೌದು, ಈ ಜೆಸಿಬಿ(JCB) ಎನ್ನುವುದು ಯಂತ್ರದ ಹೆಸರಲ್ಲ. ಇದು ಕಂಪನಿಯ ಹೆಸರು. ಆದರೆ ಈ ಅಗೆಯುವ ಯಂತ್ರವು ಈಗ ಕಂಪನಿಯ ಹೆಸರಿನಿಂದಲೇ ಖ್ಯಾತಿ ಪಡೆದಿದೆ. ಜೆಸಿಬಿ ಎನ್ನುವುದು ಬ್ರಿಟಿಷ್ ಮ್ಯಾನ್ಯುಫ್ರಾಕ್ಚರರ್ ಕಂಪನಿ. ಯುನೈಟೆಡ್ ಕಿಂಗ್ಡಮ್ ನಲ್ಲಿ ಅದರ ಮುಖ್ಯ ಕಚೇರಿ ಇದೆ. ಜೋಸೆಫ್ ಬಾಮ್ ಫೋರ್ಡ್ ಎಂಬಾತನೇ ಇದರ ಸ್ಥಾಪಕ. ಜೋಸೆಫ್ ಸಿರಿಲ್ ಬಾಮ್ ಫೋರ್ಡ್ ( ಜೆಸಿಬಿ) ಎಂಬುದು ಕಂಪನಿ ಹಾಗೂ ಸಂಸ್ಥಾಪಕ‌ನ ಹೆಸರು ಎರಡನ್ನೂ ಹೊಂದಿದೆ.

ಇನ್ನು ಈ ಬುಲ್ಡೋಜರ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಪ್ರಕರಣವೊಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದು, ಮುಂದಿನ ವಿಚಾರಣೆ ಸೆಪ್ಟೆಂಬರ್ 17, 2024 ರಂದು ನಡೆಯಲಿದೆ.

ಹಳದಿ ಬಣ್ಣವೇ ಏಕೆ ?
ಜೆಸಿಬಿ 1945 ರಿಂದ ನಿರಂತರವಾಗಿ ಹೊಸ ಯಂತ್ರಗಳನ್ನು ತಯಾರಿಸುತ್ತಿದೆ. ಅನೇಕ ಆವಿಷ್ಕಾರಗಳನ್ನು ಮಾಡಿದೆ. ಮಾಡುತ್ತಿದೆ. ಕಂಪನಿಯ ಮೊದಲ ಬ್ಯಾಕ್‌ಹೋ ಲೋಡರ್ ಅನ್ನು 1953 ರಲ್ಲಿ ತಯಾರಿಸಲಾಯಿತು. ಅದು ನೀಲಿ ಮತ್ತು ಕೆಂಪು ಬಣ್ಣಗಳಲ್ಲಿತ್ತು. ಇದರ ನಂತರ, ಅದನ್ನು ನವೀಕರಿಸಲಾಯಿತು. 1964 ರಲ್ಲಿ ಹಳದಿ ಬಣ್ಣದ ಬ್ಯಾಕ್‌ಹೋ ಲೋಡರ್ ಅನ್ನು ತಯಾರಿಸಲಾಯಿತು. ಅಂದಿನಿಂದ, ಹಳದಿ ಬಣ್ಣದ ಯಂತ್ರಗಳನ್ನೇ ನಿರಂತರವಾಗಿ ತಯಾರಿಸಲಾಗುತ್ತಿದೆ ಮತ್ತು ಇತರ ಕಂಪನಿಗಳು ಸಹ ನಿರ್ಮಾಣ ಸ್ಥಳದಲ್ಲಿ ಬಳಸುವ ಯಂತ್ರಗಳನ್ನು ಹಳದಿ ಬಣ್ಣದಲ್ಲೇ ಇಡುತ್ತವೆ.

ಯಂತ್ರಗಳಲ್ಲಿ ಹಳದಿ ಬಣ್ಣ ಇರಲು ಆ ಬಣ್ಣಕ್ಕೆ ಇರುವ ಗೋಚರತೆ ಕಾರಣವಾಗಿದೆ. ಈ ಹಳದಿ ಬಣ್ಣದಿಂದಾಗಿ ಹಗಲು ರಾತ್ರಿ ಎನ್ನದೆ ಉತ್ಖನನ ಸ್ಥಳದಲ್ಲಿ ಜೆಸಿಬಿ ಸುಲಭವಾಗಿ ಗೋಚರಿಸುತ್ತದೆ. ಅಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ದೂರದಿಂದಲೇ ಗೊತ್ತಾಗುತ್ತದೆ. ಹಳದಿ ಬಣ್ಣ ಕತ್ತಲೆಯಲ್ಲಿಯೂ ಕಾಣುವುದರಿಂದ ಯಂತ್ರ ಇರುವುದನ್ನು ದೂರದಿಂದಲೇ ಪತ್ತೆ ಹಚ್ಚಬಹುದಾಗಿದೆ. ಈ ನಿಟ್ಟಿನಲ್ಲಿ ಹಳದಿ ಬಣ್ಣ ಇಡಲಾಗಿದೆ.

Leave A Reply

Your email address will not be published.