Petrol from Plastic waste: ಕಸದಿಂದ 50 ರೂಗೆ ತಗ್ಗಬಲ್ಲುದಾ ಪೆಟ್ರೋಲ್ ಬೆಲೆ? ಸಾರಿಗೆ ಸಚಿವ ನಿತಿನ್ ಗಡ್ಕರಿ ಸಲಹೆ ಏನು?
Petrol from Plastic waste: ಜಾಗತೀಕ(Global) ಮಟ್ಟದ ಬಹುದೊಡ್ಡ ಸಮಸ್ಯೆ ಪ್ಲಾಸ್ಟಿಕ್ ತ್ಯಾಜ್ಯ(Plastic waste). ಬೃಹತ್ ಬೆಟ್ಟಗಳಾಗಿ ಬೆಳೆದಿರುವ ಈ ಸಮಸ್ಯೆಯಿಂದ ಹೊರ ಬರುವುದೇ ತ್ರಾಸದಾಯಕವಾಗಿದೆ. ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ(MP Nithin Gadkari) ಇದೇ ಪ್ಲಾಸ್ಟಿಕ್ ಕಸದಿಂದ ಪೆಟ್ರೋಲ್(Petrol) ತಯಾರಿಸುವ ಬಗ್ಗೆ ಮಾತುಗಳನ್ನಾಡಿದ್ದಾರೆ. ಕಸಕ್ಕೂ(Waste) ಬಹಳ ಮೌಲ್ಯವಿದೆ. ಅದು ನಿರುಪಯುಕ್ತ ಅಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಪೆಟ್ರೋಲಿಯಂ ಆಗಿ ಪರಿವರ್ತಿಸಬಹುದು. ಈ ಮೂಲಕ ಶತಕ ದಾಟಿದ ಪೆಟ್ರೋಲ್ ಬೆಲೆಯನ್ನು 50 ರೂಪಾಯಿಗೆಗೆ ಇಳಿಸಬಹುದು ಎಂದಿದ್ದಾರೆ.
ನಾಗಪುರದಲ್ಲಿ ಅಖಿಲ ಭಾರತೀಯರ ಸ್ಥಾನಿಕ್ ಸ್ವರಾಜ್ಯ ಸಂಸ್ಥಾ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಸಚಿವರು ಈ ಬಗ್ಗೆ ಪ್ರಸ್ತಾಪಿಸಿದರು. ಕಸವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ವಿವಿಧ ಮಾರ್ಗಗಳ ಬಗ್ಗೆ ಹೇಳಿದರು. ಕಸವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿದ್ರೆ, ಅದರಿಂದ ವಿವಿಧ ರೀತಿಯಲ್ಲಿ ಲಾಭ ಮಾಡಿಕೊಳ್ಳಬಹುದು. ತ್ಯಾಜ್ಯ ಕೂಡ ಅಮೂಲ್ಯ ವಸ್ತು. ಇದರ ಉಪಯೋಗ ಅರಿತರೆ ಜನರು ಕಸಕ್ಕಾಗಿ ಪೈಪೋಟಿ ಮಾಡಬೇಕಾಗಿ ಬರಬಹುದು ಎಂದರು.
ಹೆದ್ದಾರಿಗಳ ನಿರ್ಮಾಣಕ್ಕಾಗಿ ‘ಉತ್ತರ ಭಾರತದಲ್ಲಿ ಇತ್ತೀಚೆಗೆ 80 ಲಕ್ಷ ಟನ್ಗಳಷ್ಟು ತ್ಯಾಜ್ಯವನ್ನು ಪಯೋಗಿಸಿಕೊಳ್ಳಲಾಗಿದೆ. ಈ ಮೂಲಕ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಿಂದ ಕಸದ ಸಮಸ್ಯೆಯನ್ನು ಕಮ್ಮಿ ಮಾಡಲು ಸಹಾಯವಾಗಿದೆ’ ಎಂದು ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದರು.
ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಪೆಟ್ರೋಲ್ ತಯಾರಿಕೆ ಮಾಡಬಹುದು ಎಂದಿದ್ದಾರೆ. ಪ್ಲಾಸ್ಟಿಕ್ ಅನ್ನು ಕಚ್ಛಾ ಪೆಟ್ರೋಲ್ ಆಗಿ ಪರಿವರ್ತಿಸಿ, ಅದನ್ನು ಡೀಸೆಲ್ನಲ್ಲಿ ಅರ್ಧದಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಬಹುದು. ಇದರಿಂದ ಡೀಸಲ್ ಬೆಲೆ ಲೀಟರ್ಗೆ 50 ರೂಗೆ ಇಳಿಯಬಹುದು. ಟ್ರಾಕ್ಟರ್ ಇತ್ಯಾದಿ ವಾಹನಗಳ ಬಳಕೆಗೆ ಇದರಿಂದ ಬಹಳ ಅನುಕೂಲ ಆಗುತ್ತದೆ ಎಂದಿದ್ದಾರೆ ಗಡ್ಕರಿ. ಪ್ಲಾಸ್ಟಿಕ್ ಕಸ ಮಾತ್ರವ್ಲದೆ ಹಸಿ ತ್ಯಾಜ್ಯವನ್ನು ಬಳಸಿಕೊಂಡು ಬಯೋ ಡೈಜೆಸ್ಟರ್ನಲ್ಲಿ ಸಂಸ್ಕರಿಸಿ ಮೀಥೇನ್ ತಯಾರಿಸಬಹದು. ಅದರಿಂದ ಜೈವಿಕ ಇಂಧನ ತಯಾರಿಸಬಹುದು ಎಂದು ಮಾಹಿತಿ ನೀಡಿದರು.
ನಮಗೆ ಬೇಕಾದ ಸಂಪತ್ತನ್ನು ಸೃಷ್ಟಿಸಲು ಅಗತ್ಯ ಇರುವ ಸಂಪನ್ಮೂಲಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಬೇಡವೆಂದು ಬಿಸಾಡುವ ತ್ಯಾಜ್ಯದ ಮೌಲ್ಯ ತಿಳಿಯಬೇಕು. ತ್ಯಾಜ್ಯವನ್ನು ಬಹುದೊಡ್ಡ ದೇಶದ ಸಮಸ್ಯೆ ಎಂದು ಕಾಣಲಾಗುತ್ತಿದೆ. ಆದರೆ ಅದರಿಂದಲೇ ಲಾಭ ಮಾಡಿಕೊಳ್ಳುವುದು ಹೇಗೆ? ಇದನ್ನು ಸಾಧ್ಯವಾಗಿಸುವ ಕೆಲಸವನ್ನು ಎಲ್ಲಾ ನಗರಾಡಳಿತ ಸಂಸ್ಥೆಗಳು ಮುತುವರ್ಜಿಯಿಂದ ಮಾಡಬೇಕು ಎಂದು ನಿತಿನ್ ಗಡ್ಕರಿ ಕರೆ ನೀಡಿದರು.