Jyothi Rai: ‘ಕಮೆಂಟ್ ಯಾಕ್ರೀ, ಡೈರೆಕ್ಟ್ ಇನ್‌ಬಾಕ್ಸ್‌ಗೆ ಮೆಸೇಜ್ ಹಾಕ್ರಿ’- ಅಭಿಮಾನಿಗಳಿಗೆ ಜ್ಯೋತಿ ರೈ ಬಿಗ್ ಆಫರ್

Jyothi Rai: ಸುಮಾರು 40ರ ಆಸುಪಾಸಿನಲ್ಲೂ ಹರೆಯದ ಹುಡುಗಿಯಂತೆ, ಬಳ್ಳಿಯಂತೆ ಬಳುಕುತ್ತಿರುವ ನಟಿ ಜ್ಯೋತಿ ರೈ(Jyothi Rai) ಸಾಕಷ್ಟು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಕ್ರಿಕೆಟ್ ಮಾಡಿದ್ದಾರೆ. ಹಾಟ್ ಫೋಟೋಗಳನ್ನು ಹರಿಬಿಟ್ಟು, ಮೈ ಮಾಟ ತೋರುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇದೀಗ ಈಕೆ ತನ್ನ ಅಭಿಮಾನಿಗಳಿಗೆ ಬಿಗ್ ಆಫರ್ ನೀಡಿದ್ದಾರೆ.

 

40ರಲ್ಲಿ 18ರ ಹುಡುಗಿಯಂತೆ ಕಾಣುವ ಈಕೆಯ ಚೆಲುವಿಗೆ ಮಾರುಹೋಗದವರೇ ಇಲ್ಲ ಅನ್ನಬಹುದು. ಈಕೆ ಫೋಟೋ ಹರಿಬಿಡುವಾಗ ಪಡ್ಡೆ ಹುಡುಗರು ಆ ಸೌಂದರ್ಯಕ್ಕೆ ಮರುಗಾಗಿ ಕಮೆಂಟ್ ಮಾಡಿದ್ದೇ ಮಾಡಿದ್ದು. ಇದೆಲ್ಲವನ್ನೂ ಇಷ್ಟು ದಿನ ತಡೆದುಕೊಂಡ ಜ್ಯೋತಿ ರೈ ಇದೀಗ ಆ ಅಭಿಮಾನಿಗಳಿಗೆ, ಪಡ್ಡೆ ಹುಡುಗರಿಗೆ ‘ಕಮೆಂಟ್ ಯಾಕ್ರೀ, ಡೈರೆಕ್ಟ್ ಇನ್‌ಬಾಕ್ಸ್‌ಗೆ ಮೆಸೇಜ್ ಹಾಕ್ರಿ’ ಎಂದು ಹೇಳಿದ್ದಾರೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಜ್ಯೋತಿ ರೈ ಮಾಹಿತಿ ಹಂಚಿಕೊಂಡಿದ್ದಾರೆ. ನಿಮಗೆಲ್ಲರಿಗೂ ಒಂದು ಮಾಹಿತಿ ನೀಡುತ್ತಿದ್ದೇನೆ. ನನ್ನ ಸೋಶಿಯಲ್ ಮೀಡಿಯಾದ ಕಮೆಂಟ್ಸ್ ಸೆಕ್ಷನ್ ಆಫ್ ಮಾಡಲು ನಿರ್ಧರಿಸಿದ್ದೇನೆ. ಆದರೆ ನಿಮ್ಮ ಅಭಿಪ್ರಾಯಗಳನ್ನು ನೇರವಾಗಿ ನನಗೆ ಇನ್‌ಬಾಕ್ಸ್ ಮಾಡಿ ಎಂದು ನಟಿ ಜ್ಯೋತಿ ರೈ ಹೇಳಿದ್ದಾರೆ.

ಯಾಕೆ ಜ್ಯೋತಿ ರೈ ಅವರು ಈ ಆಫರ್ ನೀಡದ್ದಾರೆ ಎಂದು ನೋಡುವುದಾದರೆ ಅವರು ಕೆಟ್ಟ ಕಮೆಂಟ್ಸ್‌ಗಳಿಂದ ಮಾನಸಿಕ ಆಘಾತ, ಕುಟುಂಬದ ಮೇಲಾಗುತ್ತಿರುವ ಪರಿಣಾಣಗಳ ಕುರಿತು ಮಾತನಾಡಿದ್ದರು. ಆದರೆ ಇದನ್ನು ನಿಯಂತ್ರಿಸಲು ಮಾತ್ರ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇದೀಗ ಸಂಪೂರ್ಣವಾಗಿ ಕಮೆಂಟ್ಸ್ ಆಫ್ ಮಾಡಿದ್ದರೆ. ಇದರಿಂದ ಜ್ಯೋತಿ ರೈ ಪೋಸ್ಟ್‌ಗಳಿಗೆ ಕಮೆಂಟ್ಸ್ ಮಾಡಲು ಸಾಧ್ಯವಿಲ್ಲ. ಆದರೆ ಅಭಿಪ್ರಾಯ ಹಂಚಿಕೊಳ್ಳಲು ಬಯಸುವರಿಗೆ ಇನ್‌ಬಾಕ್ಸ್‌ಗೆ ಮೆಸೇಜ್ ಮಾಡಲು ಸಾಧ್ಯವಿದೆ.

Leave A Reply

Your email address will not be published.