JCB Mileage: ಜೆಸಿಬಿ ಮೈಲೇಜ್’ನ ಈ ಇಂಟ್ರೆಸ್ಟಿಂಗ್ ವಿಚಾರ ನಿಮಗೆ ಗೊತ್ತಾ? ಕಾರು, ಬೈಕ್ ನಂತೆ ಲೀಟರ್-ಕಿ.ಮೀ ಲೆಕ್ಕಾಚಾರವಲ್ಲ ; ಇಲ್ಲಿದೆ ಬೇರೇಯೇ ಸೀಕ್ರೇಟ್!!

JCB Mileage: ತನ್ನ ಹೆಸರಿನ ಬದಲು ತನ್ನ ನಿರ್ಮಾತೃ ಕಂಪೆನಿಯ ಹೆಸರಿನ ಮೂಲಕವೇ ಫೇಮಸ್ ಆದ ವಾಹನ ಅಥವಾ ಯಂತ್ರವೆಂದರೆ ಅದು ಜೆಸಿಬಿ. ಎಲ್ಲಿ ನಿರ್ಮಾಣ ಕಾರ್ಯ, ಕಾಮಗಾರಿ, ಏನೇ ನಡೆದರೂ ಬಹುತೇಕ ಬಾರಿ ಕ್ರೇನ್ ಅಥವಾ ಜೆಸಿಬಿಯಂತಹ ಯಂತ್ರಗಳನ್ನು ಬಳಸುತ್ತಾರೆ. ದಿನನಿತ್ಯವೂ ನಮ್ಮ ಕಣ್ಣೆದುರೇ ಓಡಾಡುವ, ಕಾರ್ಯ ನಿರ್ವಹಿಸುವ ಈ ಯಂತ್ರಗಳ ಮೈಲೇಜ್( ಬಗ್ಗೆ ನಿಮಗೆ ತಿಳಿದಿದೆಯಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ.

ಜೆಸಿಬಿಯ ಮೈಲೇಜ್(JCB Mileage) ಮಿಸ್ಟ್ರಿಯೇ ಬೇರೆ ಇದೆ. ಕಾರುಗಳು ಅಥವಾ ಬೈಕುಗಳಂತೆ, ಅವುಗಳ ಮೈಲೇಜ್ ಅನ್ನು ಪ್ರತಿ ಲೀಟರ್‌ಗೆ ಕಿಲೋಮೀಟರ್‌ಗಳಲ್ಲಿ ಅಳೆಯಲಾಗುವುದಿಲ್ಲ. ಬದಲಾಗಿ, ಬೆಸಿಬಿಯು ಒಂದು ಗಂಟೆಯಲ್ಲಿ ಎಷ್ಟು ಡೀಸೆಲ್ ಅನ್ನು ಬಳಸುತ್ತದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಅದರ ಮೂಲಕವೇ ಲೆಕ್ಕಾಚಾರ ಮಾಡಲಾಗುತ್ತದೆ.

ಹೌದು, ಬುಲ್ಡೋಜರ್(Bulldozer) ಅಥವಾ ಜೆಸಿಬಿ ಎಂಬ ಹೆಸರಿನ ಮೂಲಕವೇ ಫೇಮಸ್ ಆಗಿರೋ ಬ್ಯಾಕ್‌ಹೋ ಲೋಡರ್ ಯಂತ್ರವು ಒಂದು ಗಂಟೆ ಓಡಿದಾಗ ಎಷ್ಟು ಡೀಸೆಲ್ ಬಳಸುತ್ತದೆ ಎಂಬುದು ಅದರ ಮೈಲೇಜ್ ಆಗಿದೆ. ನಾವು ಸಾಮಾನ್ಯ ಬುಲ್ಡೋಜರ್ ಅನ್ನು ನೋಡಿದಾಗ, ಅದು ಒಂದು ಗಂಟೆ ಓಡಲು ಸುಮಾರು 4-5 ಲೀಟರ್ ಡೀಸೆಲ್ ಅನ್ನು ಬಯಸುತ್ತದೆ. ಬ್ಯಾಕ್‌ಹೋ ಲೋಡರ್(Backhoe Loader ) ಪ್ರತಿ ಗಂಟೆಗೆ ಎಷ್ಟು ಡೀಸೆಲ್ ಬಳಸುತ್ತದೆ ಎಂಬುದು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.

ವಿಭಿನ್ನ ಮಾದರಿಗಳು ವಿಭಿನ್ನ ಎಂಜಿನ್‌ಗಳನ್ನು ಹೊಂದಿವೆ, ಆದ್ದರಿಂದ ಅವುಗಳ ಇಂಧನ ಬಳಕೆ ಬದಲಾಗುತ್ತದೆ. ಅಂತೆಯೇ, ಬ್ಯಾಕ್‌ಹೋ ಲೋಡರ್ ಹೆಚ್ಚು ಕೆಲಸ ಮಾಡಬೇಕಾದರೆ, ಅದು ಹೆಚ್ಚು ಡೀಸೆಲ್ ಅನ್ನು ಸೇವಿಸುತ್ತದೆ. ಭೂಮಿ ಗಟ್ಟಿಯಾಗಿದ್ದರೆ, ಬ್ಯಾಕ್‌ಹೋ ಲೋಡರ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದು ಡೀಸೆಲ್ ಬಳಕೆಯನ್ನು ಹೆಚ್ಚಿಸುತ್ತದೆ. ಮುಖ್ಯ ವಿಷಯವೆಂದರೆ ಉತ್ತಮವಾಗಿ ನಿರ್ವಹಿಸಲ್ಪಡುವ ಯಂತ್ರವು ಕಡಿಮೆ ಡೀಸೆಲ್ ಅನ್ನು ಹೀರುತ್ತದೆ.

Leave A Reply

Your email address will not be published.