Foreign Muslims: ಈ 28 ಮುಸ್ಲಿಮರು ವಿದೇಶಿಯರು! ಬಂಧನ ಕೇಂದ್ರಕ್ಕೆ ಹಾಕಿದ ಪೊಲೀಸರು

Foreign Muslims: ವಿದೇಶಿಯರ ನ್ಯಾಯಮಂಡಳಿ 28 ಮಂದಿ ಮುಸ್ಲಿಮರನ್ನು(Muslims) ‘ವಿದೇಶಿಯರು(Foreign)’ ಎಂದು ಅಸ್ಸಾಂನ(Assam) ಬಾರ್ಪೇಟಾ ಜಿಲ್ಲೆಯ ಪೊಲೀಸರು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಮಾಟಿಯಾ ‘ಟ್ರಾನ್ಸಿಟ್ ಕ್ಯಾಂಪ್‌’(transit camp) ಅಂದರೆ ಬಂಧನ ಕೇಂದ್ರಕ್ಕೆ ರವಾನೆ ಮಾಡಿರುವ ಬಗ್ಗೆ ವರದಿಯಾಗಿದೆ. ಈ ನ್ಯಾಯಾಲಯದ(Court) ಆದೇಶ ಪ್ರಕಾರ 19 ಪುರುಷರು(Gents) ಹಾಗೂ 9 ಮಹಿಳೆಯರನ್ನು(Women) ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಬಾರ್ಪೇಟಾ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ್ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.

ಟ್ರಾನ್ಸಿಟ್ ಕ್ಯಾಂಪ್‌ಗೆ ರವಾನಿಸಿರುವ ವಿದೇಶಿಗರು ‘ಬಂಗಾಳಿ ಮಾತನಾಡುವ ಮುಸ್ಲಿಮರಾಗಿದ್ದು’, ಅವರ ಬಗ್ಗೆ ವಿಚಾರಿಸಿ ಕಾನೂನು ಪ್ರಕ್ರಿಯೆ ನಡೆದ ಬಳಿಕ ವರನ್ನು ವಿದೇಶಿಯರೆಂದು ಘೋಷಿಸಲಾಗಿದೆ. ಅವರೆಲ್ಲ ಅಸ್ಸಾಂನ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಈ 28 ಮಂದಿ ವಿದೇಶಿಗರನ್ನು ಎಸ್‌ಪಿ ಕಚೇರಿಗೆ ಕರೆಸಿದ್ದರು. ಅಲ್ಲಿಗೆ ಹಾಜರಾದ ಅವರನ್ನು ಬಿಗಿ ಭದ್ರತೆಯೊಂದಿಗೆ ಟ್ರಾನ್ಸಿಟ್ ಕ್ಯಾಂಪ್‌ಗೆ ರವಾನಿಸಲಾಗಿದೆ. ೨೮ ಮಂದಿಯನ್ನು ಬೀಲ್ಕೊಡಲು ಅವರ ಕುಟುಂಬಸ್ಥರು ಮತ್ತು ಸಂಬಂಧಿಕರು ಎಸ್‌ಪಿ ಕಚೇರಿ ಬಳಿ ಸೇರಿದ್ದರು. ಎಲ್ಲರನ್ನು ತಬ್ಬಿಕೊಂಡು ಅಳುತ್ತಾ ಅವರನ್ನು ಬಂಧನ ಕೇಂದ್ರಕ್ಕೆ ಕಳುಹಿಸಿಕೊಟ್ಟಿರುವ ವಿಡಿಯೋ ಎಕ್ಸ್‌ನಲ್ಲಿ ಹಾಕಲಾಗಿದೆ.

28 Muslims from Bengali community in Assam have been declared foreigners & sent to a ‘transit camp’
Videos show their family members gathered outside SP’s office, crying & hugging each other, as some members of same family were declared ‘foreigners’ while others were not pic.twitter.com/u4XwWEZG61
— Maktoob (@MaktoobMedia) September 4, 2024

ವಿದೇಶಿಯರ ನ್ಯಾಯಮಂಡಳಿಗಳು ಶಂಕಿತ ವಿದೇಶಿಯರ ಪ್ರಕರಣಗಳನ್ನು ವ್ಯವಹರಿಸುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿ ಕೆಲಸ ನಿರ್ವಹಿಸುತ್ತವೆ. ಅಸ್ಸಾಂ ರಾಜ್ಯದಲ್ಲಿ ಇಂತಹ 100ಕ್ಕೂ ಧಿಕ ನ್ಯಾಯಮಂಡಳಿಗಳಿವೆ. ಮಾಟಿಯಾದಲ್ಲಿ 64 ಕೋಟಿ ರೂ ಖರ್ಚು ಮಾಡಿ ‘ಟ್ರಾನ್ಸಿಟ್ ಕ್ಯಾಂಪ್‌’ ಸ್ಥಾಪಿಸಲಾಗಿದೆ. ಮೊದಲು ಇದನ್ನು ‘ಬಂಧನ ಕೇಂದ್ರ’ ಎಂದು ಕರೆಯಲಾಗುತ್ತಿತ್ತು. ಆದರೆ, ಇದಕ್ಕೆ ಹೆಚ್ಚು ಮಾನವೀಯ ಸ್ಪರ್ಶ ನೀಡು ಉದ್ದೇಶದಿಂದ ‘ಟ್ರಾನ್ಸಿಟ್ ಕ್ಯಾಂಪ್‌’ ಎಂದು ಮರುನಾಮಕರಣ ಮಾಡಲಾಯ್ತು.

ಮಾಟಿಯಾದ ಈ ಕ್ಯಾಂಪ್‌ 3,000 ಜನರಿಗೆ ವಸತಿ ಒದಗಿಸುವ ಸಾಮರ್ಥ್ಯ ಹೊಂದಿದೆ.
ಅದಲ್ಲದೇ ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ಮಾಟಿಯಾದಲ್ಲಿರುವ ಈ ಟ್ರಾನ್ಸಿಟ್ ಕ್ಯಾಂಪ್‌ ದೇಶದಲ್ಲೇ ಅತೀ ದೊಡ್ಡ ಕ್ಯಾಂಪ್. ಇದೀಗ ಸದ್ಯ ಅಲ್ಲಿ 210 ‘ಘೋಷಿತ ವಿದೇಶಿಗರು’ ಇದ್ದಾರೆ ಎಂದು ಅಸ್ಸಾಂ ಗೃಹ ಇಲಾಖೆ ಅಸ್ಸಾಂ ವಿಧಾನಸಭೆಗೆ ಈ ಹಿಂದೆ ಮಾಹಿತಿ ಒದಗಿಸಿತ್ತು.

4 Comments
  1. MichaelLiemo says

    ventolin salbutamol: Buy Ventolin inhaler online – ventolin australia buy
    ventolin buy

  2. Josephquees says

    neurontin 600 mg coupon: buy gabapentin online – drug neurontin 200 mg

  3. Timothydub says

    reputable canadian online pharmacies: Cheapest online pharmacy – rate canadian pharmacies

  4. Timothydub says

    mexico pharmacies prescription drugs: mexican pharmacy – mexico drug stores pharmacies

Leave A Reply

Your email address will not be published.