FIRE Committee: ಕೇರಳದ ಹೇಮಾ ಕಮಿಟಿಯಂತೆ ಕರ್ನಾಟಕದಲ್ಲಿ ಫೈರ್ ಕಮಿಟಿ: ಸಿಎಂ ಗೆ ಮನವಿ

FIRE Committee: ಕೇರಳದ(Kerala) ಹೇಮಾ ಕಮಿಟಿ(HEMA Committee) ವರದಿ ನಂತರ ಚಿತ್ರರಂಗದಲ್ಲಿ(Film Industry) ಮತ್ತೆ ಮೀ ಟೂ(Me Too) ಪ್ರಕರಣ ಮುನ್ನೆಲೆಗೆ ಬಂದಿದೆ. ಚಿತ್ರರಂಗದಲ್ಲಿ ಹೆಣ್ಣು(Women) ಮಕ್ಕಳನ್ನು ನೋಡುವ ರೀತಿ, ನಡೆಸಿಕೊಳ್ಳುವ ವಿಧಾನ ಬದಲಾಗಬೇಕು ಅನ್ನುವ ಕೂಗು ಜೋರಾಗುತ್ತಿದೆ. ಕೇರಳದ ಹೇಮಾ ಕಮಿಟಿಯನ್ನು ಜಾರಿ ಗೊಳಿಸುವಂತೆ ಕರ್ನಾಟಕ(Karnataka) ಚಿತ್ರರಂಗದಲ್ಲೂ ಕಮಿಟಿ ರಚನೆ ಮಾಡಬೇಕೆಂದು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ಕರ್ನಾಟಕ ಸರ್ಕಾರಕ್ಕೆ(Govt) ಮನವಿ ಸಲ್ಲಿಸಿದ್ದುದೆ.

ಈ ಒಂದು ಮನವಿ ಪತ್ರಕ್ಕೆ ಚಿತ್ರರಂಗ ಹಾಗೂ
ವಿವಿಧ ಕ್ಷೇತ್ರಗಳ 153 ವ್ಯಕ್ತಿಗಳು ಸಹಿ ಹಾಕಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ(CM Siddaramaiah) ಅವರಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗ್ತಿರೋ ಲೈಂಗಿಕ ದೌರ್ಜನ್ಯದ ಹಾಗು ಕಿರುಕುಳದ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಈಗಾಗಲೇ ಕೇರಳದ ಸರ್ಕಾರಕ್ಕೆ ಹೇಮಾ ಕಮಿಟಿ ವರದಿ ಸಲ್ಲಿಕೆ ಮಾಡಿದ್ದು ಭಾರಿ ಸಂಚಲನ ಮೂಡಿಸಿದೆ. ಹಾಗೆ ವರದಿಯನ್ನ ಆಧಾರಿಸಿ ಕ್ರಮ ಕೈಗೊಳ್ಳುವುದಾಗಿ ಕೇರಳ ಸರ್ಕಾರ ಹೇಳಿದೆ. ಕೇರಳ ರೀತಿಯಲ್ಲೇ ಎಲ್ಲಾ ರಾಜ್ಯದ ಸಿನಿಮಾ ಇಂಡಸ್ಟ್ರಿಯಲ್ಲೂ ಹೇಮಾ ಕಮಿಟಿಯನ್ನ ರಚಿಸುವಂತೆ ನಟಿಯರು ಆಗ್ರಹ ಮಾಡಿದ್ದಾರೆ.
ಚಿತ್ರರಂಗದ ವತಿಯಿಂದ, ನಟ ವಿನಯ್ ರಾಜ್ ಕುಮಾರ್,ಕಿಶೋರ್, ಅಶಿಕಾ ರಂಗನಾಥ್, ಶೃತಿ ಹರಿಹರನ್, ಅಮೃತ ಅಯ್ಯಂಗಾರ್, ಐಂದ್ರಿತಾ ಅಯ್ಯಂಗಾರ್, ಸಿಹಿ ಕಹಿ ಚಂದ್ರು ಸಂಗೀತಾ ಭಟ್, ಸಂಯುಕ್ತಹೆಗ್ಡೆ, ಪೂಜಾಗಾಂಧಿ, ಮಾನ್ವಿತಾ, ಧನ್ಯಾ ರಾಮ್ ಕುಮಾರ್, ಮೇಘಾನ ಗಾಂವ್ಕರ್ ಅವರು ಸಹಿ ಹಾಕಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.