Masjid Attack: ನಕಲಿ ನೋಟು ಮುದ್ರಣ ಜಾಲ: ಮಸೀದಿಗೆ ದಾಳಿ, ಅಧಿಕಾರಿಗಳಿಗೆ ಸಿಕ್ಕಿದ್ದು RSS ವಿವಾದಾತ್ಮಕ ಪುಸ್ತಕ!

Masjid Attack: ದೇಶವೇ ಬಿಚ್ಚಿ ಬೀಳಿಸುವ, ಜನರಲ್ಲಿ ವಿಷ ಬೀಜ ಬಿತ್ತುವ ಆಘಾತಕಾರಿ ವಿಷಯ ಒಂದು ಬಯಲಾಗಿದೆ. ಹೌದು, ಮದರಸಾವೊಂದರಲ್ಲಿ ನಕಲಿ ನೋಟುಗಳ ಮುದ್ರಣವಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ದಾಳಿ (Masjid Attack) ನಡೆಸಿದ್ದಾರೆ. ಆ ಸಂದರ್ಭದಲ್ಲಿ ಮಸೀದಿಯಲ್ಲಿ ಆರ್​ಎಸ್​ಎಸ್​ ಕುರಿತು ವಿವಾದಾತ್ಮಕ ಪುಸ್ತಕ ದೊರಕಿದೆ.

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನ ಅತರ್ಸುಯ್ಯಾ ಪ್ರದೇಶದ ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾದಲ್ಲಿ, ನಕಲಿ ನೋಟು ಮುದ್ರಣಕ್ಕೆ ಸಂಬಂಧಿಸಿದಂತೆ ಬಂದ ಮಾಹಿತಿ ಮೇರೆಗೆ ಮದರಸಾಗೆ ಸರ್ಚ್ ಮಾಡಲು ಹೋಗಿದ್ದ ಅಧಿಕಾರಿಗಳಿಗೆ ಆರ್​ಎಸ್​ಎಸ್​ ಕುರಿತ ವಿವಾದಾತ್ಮಕ ಪುಸ್ತಕ ಸಿಕ್ಕಿದೆ. ಅಲ್ಲಿ ನಡೆದ ದಾಳಿಯಲ್ಲಿ ನಕಲಿ ನೋಟುಗಳ ಜೊತೆಗೆ, ಪೊಲೀಸರು ಈ ಪುಸ್ತಕವನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಅಂದ್ರೆ ಈ RSS ಅರ್ಥ ” ಆರ್​ಎಸ್​ಎಸ್​ ದಿ ಬಿಗ್ಗೆಸ್ಟ್ ಟೆರರಿಸ್ಟ್​ ಆರ್ಗನೈಸೇಷನ್ ಇನ್​ ದಿ ಕಂಟ್ರಿ” (RSS: The Biggest Terrorist Organization in the Country) ಎನ್ನುವ ಪುಸ್ತಕವನ್ನು ಉರ್ದುವಿನಿಂದ ಹಿಂದಿಗೆ ತರ್ಜುಮೆ ಮಾಡಲಾಗಿದೆ. ಈ ಪುಸ್ತಕವನ್ನು ಎಸ್​ಎಂ ಮುಷರಫ್​ ಎಂಬುವವರು ಬರೆದಿದ್ದಾರೆ.

ಮುಖ್ಯವಾಗಿ ಮದರಸಾದಲ್ಲಿ ಆರ್​ಎಸ್​ಎಸ್​ ವಿರುದ್ಧ ಮಕ್ಕಳಲ್ಲಿ ವಿಷಬೀಜ ಬಿತ್ತಲು ಮೌಲ್ವಿ ಮೊಹಮ್ಮದ್ ತಫ್ಸೀರುಲ್ ಅರಿಫೀನ್​ ಈ ಪುಸ್ತಕವನ್ನು ಬಳಕೆ ಮಾಡುತ್ತಿರಬಹುದು ಎನ್ನಲಾಗಿದೆ.

ಅವರ ಲೇಖನ ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿಯೂ ಪ್ರಕಟವಾಗಿದೆ. ಮದರಸಾದಲ್ಲಿ ಈ ಪುಸ್ತಕ ಪತ್ತೆಯಾದ ನಂತರ ಭದ್ರತಾ ಏಜೆನ್ಸಿಗಳು ಅಲರ್ಟ್ ಆಗಿದೆ. ಮತ್ತು ಮಸೀದಿಯಿಂದ 1 ಲಕ್ಷ ರೂಪಾಯಿಯ ನಕಲಿ ನೋಟುಗಳು ಮತ್ತು ಮುದ್ರಣಕ್ಕೆ ಬಳಸಲಾದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave A Reply

Your email address will not be published.