Darshan Case: ಡಿ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಿದ್ಧ: ಹಬ್ಬದ ಒಳಗೆ ಕೋರ್ಟ್‌ಗೆ ಸಲ್ಲಿಕೆ – ಗೃಹ ಸಚಿವ ಸುಳಿವು
Darshan Case: ಗಣೇಶ ಚತುರ್ಥಿಗೂ(Ganesha Chaturti) ಮುನ್ನವೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ(Ranukaswami murder case) ಆರೋಪಿ ಚಿತ್ರ ನಟ ದರ್ಶನ್(Actor Darshan) ಮತ್ತು ಗ್ಯಾಂಗ್ ವಿರುದ್ಧ ಚಾಜ್ ಶೀಟ್(Charge sheet) ಸಲ್ಲಿಕೆಯಾಗಲಿದೆ ಎಂದು ಗೃಹ ಸಚಿವ(Home Minister) ಡಾ.ಜಿ.ಪರಮೇಶ್ವರ್(Dr. G Paramwshwar) ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ದರ್ಶನ್ ಹಾಗೂ ಅವರ ಸಹಚರರ ವಿರುದ್ಧ ನ್ಯಾಯಾಲಯಕ್ಕೆ(Court) ಪ್ರಾಥಮಿಕ ಹಂತದ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದರು.
ಈ ಮಧ್ಯೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೋಲಿಸ್ ಆಯುಕ್ತ
ಬಿ.ದಯಾನಂದ್, ಮೃತ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು
ಸಿದ್ಧಪಡಿಸಿರುವ ಚಾರ್ಜ್ ಶೀಟ್ ಅನ್ನು ಅಡ್ವೋಕೇಟ್ ಜನರಲ್ ಅವರ ಸಲಹೆಗೆ ಕಳುಹಿಸಲಾಗಿತ್ತು ಎಂದರು. ಅವರು ಕೆಲವು ಮಾರ್ಪಾಡುಗಳಿಗೆ ಸಲಹೆ ಮಾಡಿದ್ದಾರೆ. ಅದರ ಪರಿಷ್ಕರಣೆ ನಂತರ ಒಂದೆರಡು ದಿನದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಕೊಲೆ ಆರೋಪಿ ದರ್ಶನ್ ಸೇರಿದಂತೆ ಇತರರನ್ನು ಬಂಧಿಸಿ ಮೂರು ತಿಂಗಳಾಗುತ್ತಿದೆ, ನಾವು 90 ದಿನಗಳ ಮುನ್ನವೇ ಚಾರ್ಜ್ಶೀಟ್ ಸಲ್ಲಿಸಬೇಕಿದೆ ಎಂದು ಮಾಹಿತಿ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆ ಸಂಗ್ರಹಿಸಿದ್ದೇವೆ, ಬೆಂಗಳೂರಿನ ವಿಧಿ ವಿಜ್ಞಾನ ವರದಿ ಬಂದಿದೆ, ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿದೆ. ನಮಗೆ ದೊರೆತಿರುವ ವರದಿಯನ್ನೇ ದಾಖಲೆಗೆ ಸೇರಿಸಿ ನ್ಯಾಯಾಲಯಕ್ಕೆ ಪ್ರಾಥಮಿಕ ಆರೋಪ ಪಟ್ಟಿ ಜೊತೆ ಸಲ್ಲಿಸುತ್ತೇವೆ, ಹೈದರಾಬಾದ್ ವರದಿ ಬಂದ ನಂತರ ಪೂರಕ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಕಳೆದ ಜೂನ್ 9ರಂದು ರೇಣುಕಾಸ್ವಾಮಿ ಹತ್ಯೆಯಾಗಿತ್ತು, ಕೊಲೆಗೆ ಸಂಬಂಧಿಸಿದಂತೆ ದರ್ಶನ್ ಸೇರಿದಂತೆ ಇತರರನ್ನು 11ರಂದು ವಶಕ್ಕೆ ಪಡೆಯಲಾಗಿತ್ತು. ಘಟನೆ ಸಮಯದಲ್ಲಿ ಆರು ಮಂದಿ ಆರೋಪಿಗಳು ಧರಿಸಿದ್ದ ಬಟ್ಟೆ, ಪಾದರಕ್ಷೆ ಹಾಗೂ ಚರ್ಮದ ವಸ್ತುಗಳು, ಅವರುಗಳ ಬಂಧನದ ನಂತರ ಅವರ ಮನೆಗಳಿಂದ ವಶ ಪಡಿಸಿಕೊಳ್ಳಲಾದ ವಸ್ತುಗಳೂ ಸೇರಿದಂತೆ 200ಕ್ಕೂ ಹೆಚ್ಚು ಸಾಕ್ಷಿಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದರು.
ರೇಣುಕಸ್ವಾಮಿ ತೀವ್ರತರ ಗಾಯ, ಆಘಾತ ಮತ್ತು ರಕ್ತಸ್ರಾವದಿಂದ ಸಾವನ್ನಪ್ಪಿರುವುದು, ಮರಣೋತ್ತರ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಇದಾದ ನಂತರ ಪೋಲಿಸರು ಕಾನೂನು ತಜ್ಞರ ಸಲಹೆ ಪಡೆದು ಸವಿಸ್ತಾರವಾದ ಚಾರ್ಜ್ ಶೀಟ್ ಸಿದ್ಧಪಡಿಸಿದ್ದು, ಯಾವುದೇ ಸಮಯದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು
ಅವರು ಹೇಳಿದರು.