CPR School Students: ಹೃದಯಾಘಾತ ಪ್ರಕರಣ ಹೆಚ್ಚಳ ಹಿನ್ನಲೆ: ಶಾಲಾ, ಕಾಲೇಜುಗಳಲ್ಲಿ ಸಿಪಿಆರ್‌ ತರಬೇತಿ

CPR School Students: ಕೊರೊನಾ ನಂತರ ಸಾರ್ವಜನಿಕರಲ್ಲಿ ಮಕ್ಕಳಲ್ಲಿ ಹೃದಯಾಘಾತದ ಪ್ರಕರಣ ಹೆಚ್ಚಾಗುತ್ತಿದ್ದು, ಶಾಲಾ ಕಾಲೇಜು ಹಂತದ ಮಕ್ಕಳಿಗೆ ಇದು ಕಾಣಿಸಿಕೊಳ್ಳುತ್ತಿರುವುದರಿಂದ ಹೀಗಾಗಿ ಶಾಲಾ, ಕಾಲೇಜು ಮಕ್ಕಳಿಗೆ ಸಿಪಿಆರ್‌ ತರಬೇತಿ ನೀಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿರುವ ಕುರಿತು ವರದಿಯಾಗಿದೆ.

 

ಹೃದಯಾಘಾತ ಸಂಭವಿಸಿದಾಗ ಕೂಡಲೇ ಏನು ಮಾಡಬೇಕು? ಹೇಗೆ ನಿರ್ವಹಿಸಬೇಕು? ಗೋಲ್ಡನ್‌ ಟೈಮ್‌ನಲ್ಲಿ ಏನು ಮಾಡಿದರೆ ಜೀವ ಉಳಿಸಬಹುದು? ಎನ್ನುವ ಜ್ಞಾನ ಬಹುತೇಕರಿಗೆ ಗೊತ್ತಿರುವುದಿಲ್ಲ. ಹೀಗಾಗಿ ಹೃದಯಾಘಾತ ಸಂಭವಿಸಿದಾಗ ತಕ್ಷಣ ಚಿಕಿತ್ಸೆ ನೀಡದೆ ಗೊಂದಲದಲ್ಲಿ ಇರುವುದರಿಂದ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ಹಿನ್ನೆಲೆಯಲ್ಲಿ ಪ್ರೌಢಶಾಲೆ, ಪಿಯು ಕಾಲೇಜ್‌ನ ಮಕ್ಕಳಿಗೆ ಸಿಪಿಆರ್‌ ತರಗತಿ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ವಾರದಲ್ಲಿ 40 ನಿಮಿಷ ಒಂದು ತರಗತಿ ಅವಧಿಯಲ್ಲಿ ಸಿಪಿಆರ್‌ ಕುರಿತಾಗಿ, ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ನೀಡಲಾಗುವುದು. ಆರೋಗ್ಯದ ಬಗ್ಗೆ ತರಬೇತಿ, ಪ್ರಾಥಮಿಕ ಚಿಕಿತ್ಸೆಯ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

 

Leave A Reply

Your email address will not be published.