Delivery agent: ಪುಟ್ಟ ಕಂದಮ್ಮನನ್ನು ಮಡಿಲಲ್ಲಿ ಕೂರಿಸಿಕೊಂಡೆ ಎಲ್ಲೆಡೆ ಡೆಲವರಿ! ಕಾರಣ ಕೇಳಿದ್ರೆ ನೀವೂ ಮರುಗುವಿರಿ!
Delivery agent: ಡೆಲಿವರಿ ಎಜೆಂಟ್ ಗಳ ಕೆಲಸ ಹೇಗಿರುತ್ತೆ, ಎಷ್ಟು ಒತ್ತಡ ಇರುತ್ತೆ ಅನ್ನೋದು ಈಗಾಗಲೇ ನಿಮಗೆ ತಿಳಿದಿರಬಹುದು. ಆದ್ರೆ ಇಲ್ಲೊಂದು ದೃಶ್ಯ ಕಂಡಾಗ ನೀವು ಮರುಗದೇ ಇರಲು ಸಾಧ್ಯವಿಲ್ಲ. ಯಾಕೆಂದರೆ ತಂದೆಯೊಬ್ಬ ತನ್ನ ಪುಟ್ಟ ಕಂದಮ್ಮನನ್ನು ಮಡಿಲಲ್ಲಿ ಕೂರಿಸಿಕೊಂಡೆ ಎಲ್ಲೆಡೆ ಡೆಲವರಿ ಮಾಡುತ್ತಿದ್ದಾನೆ. ಕಾರಣ ಆ ಪುಟ್ಟ ಕಂದನ ಆರೈಕೆ, ಪಾಲನೆ, ಪೋಷಣೆಯ ಎಲ್ಲವೂ ಆ ತಂದೆಯ ಮೇಲಿತ್ತು. ಎಲ್ಲದಕ್ಕೂ ಮಿಗಿಲಾಗಿ ಮಗುವಿನ ಮೇಲೆ ಮಮಕಾರವಿತ್ತು.
ಹೌದು, ತಾಯಿ ಮಡಿಲಲ್ಲಿ , ಪಾಲನೆಯಲ್ಲಿ ಸ್ವಚ್ಚಂದವಾಗಿ ಆಟವಾಡಬೇಕಿದ್ದ ಈ ಮಗು ಅಪ್ಪನ ಜೊತೆ ಡೆಲಿವರಿ ಕೆಲಸಕ್ಕಾಗಿ ಅಪ್ಪನ ತೋಳಿನಲ್ಲಿ ನೇತಾಡುತ್ತಿದೆ. ಇದು ದೆಹಲಿಯ ಜೊಮೆಟೋ ಡೆಲಿವರಿ ಬಾಯ್ ಸೋನು ಬದುಕಿನ ಪಯಣ ಎಂತವರ ಮನ ಕಲುಕಿಸುತ್ತದೆ. ವಿಶೇಷ ಅಂದ್ರೆ ತಂದೆ ಸೋನುವಿಗೆ ಈ ಪುಟ್ಟ ಕಂದನ ನಗು ಎಲ್ಲವನ್ನೂ ಮರೆಸುತ್ತಿದೆ, ಬದುಕಿನ ಬಂಡಿ ಸಾಗಿಸುತ್ತಿದೆ ಎನ್ನುತ್ತಾರೆ.
ಡೆಲಿವರಿ ಎಜೆಂಟ್ (Delivery agent) ಸೋನು, ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಸ್ಟಾರ್ ಬಕ್ಸ್ ಶಾಪ್‌ಗೆ ಆರ್ಡರ್ ಪಡೆದುಕೊಳ್ಳಲು ಬಂದಾಗ ಜೊಮೆಟೋ ಶಾಪ್ ಮ್ಯಾನೇಜರ್ ದೇವೇಂದ್ರ ಮೆಹ್ರ ಅವರ ಗಮನಸೆಳೆದಿದ್ದು, ಕಾರಣ ಸೋನು ಜೊತೆಗೆ 2 ವರ್ಷದ ಪುಟ್ಟ ಕಂದನೂ ಆಗಮಿಸಿತ್ತು. ಕುತೂಹಲಕ್ಕಾಗಿ ಸೋನು ಬಳಿ ಈ ಕುರಿತು ವಿಚಾರಿಸಿದಾಗ ಸಂಕಷ್ಟದ ಬದುಕಿನ ಕಥೆಯೇ ಬಯಲಾಗಿದೆ.,ತಕ್ಷಣವೇ ಮ್ಯಾನೇಜರ್ ಸ್ಟಾರ್ ಬಕ್ಸ್‌ನ ಐಸ್‌ಕ್ರೀಮ್ ತಿನಿಸನ್ನು ಮಗುವಿಗೆ ಉಚಿತವಾಗಿ ನೀಡಿದ್ದಾರೆ.
ಸೋನು ಕುರಿತು ಸೋಶಿಯಲ್ ಮೀಡಿಯಾದಲ್ಲಿ ದೇವೇಂದ್ರ ಮೆಹ್ರಾ ಅವರು, ಸಿಂಗಲ್ ಪೇರೆಂಟ್ ಆಗಿರುವ ಸೋನು, ಬದುಕಿನಲ್ಲಿ ಹಲವು ಸವಾಲು ಎದುರಿಸುತ್ತಿದ್ದಾನೆ. ಜೀವನ ಸಾಗಿಸಲು ಡೆಲಿವರಿ ಎಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಸಂಪಾದನೆಯಲ್ಲಿ ತನ್ನ ಮಗಳನ್ನು ಸಾಕಿ ಸಲಹುತ್ತಿದ್ದಾನೆ. ಕಷ್ಟ, ಸವಾಲುಗಳ ನಡುವೆ ಮಗಳ ಮೇಲಿನ ಪ್ರೀತಿ ಸೋನುವನ್ನು ಮತ್ತಷ್ಟು ಉತ್ಸಾಹ ಹಾಗೂ ಚೈತನ್ಯ ನೀಡುತ್ತಿದೆ. ಕಷ್ಟದಲ್ಲೂ ಮಗಳ ಮುಖದಲ್ಲಿ ನಗು ಕಡಿಮೆ ಮಾಡಿಲ್ಲ, ಆಕೆಯ ಮುಖದಲ್ಲಿನ ನಗು ನಮಗೂ ಚೈತನ್ಯ ನೀಡಿದೆ. ಈ ಸಂದರ್ಭದಲ್ಲಿ ಸೋನು ಹಾಗೂ ಆತನ ಮಗಳಿಗೆ ಶುಭ ಹಾರೈಸುತ್ತೇವೆ ಎಂದು ದೇವೇಂದ್ರ ಮೆಹ್ರಾ ಹೇಳಿಕೊಂಡಿದ್ದಾರೆ.