Yograj Singh: ಮಗನ ಲೈಫ್ ಹಾಳು ಮಾಡಿದ ಅವನನ್ನು ಎಂದೂ ಕ್ಷಮಿಸಲ್ಲ, ಹತ್ತಿರಕ್ಕೂ ಸೇರಿಸಲ್ಲ – ದೋನಿ ವಿರುದ್ಧ ಯುವರಾಜ್ ಸಿಂಗ್ ತಂದೆ ಆಕ್ರೋಶ !!

Yograj Singh: ಟೀಂ ಇಂಡಿಯಾ ಮಾಜಿ ಕ್ಯಾಪ್ಟಾನ್ ಎಂಎಸ್ ಧೋನಿ(MS Dhoni) ವಿರುದ್ಧ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್(Yograj Singh) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಧೋನಿ, ಯುವರಾಜ್(Yuvraj Singh) ಅವರ ವೃತ್ತಿಜೀವನವನ್ನು ಹಾಳುಮಾಡಿದರು. ಧೋನಿಯ ಪ್ರಭಾವವಿಲ್ಲದಿದ್ದರೆ, ಯುವರಾಜ್ ಅವರ ವೃತ್ತಿಜೀವನವು ಇನ್ನೂ ನಾಲ್ಕೈದು ವರ್ಷಗಳವರೆಗೆ ಇರುತ್ತದೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಚಾನೆಲ್‌ವೊಂದರ ಸಂದರ್ಶನದಲ್ಲಿ ಮಾತನಾಡಿದ ಯೋಗರಾಜ್ ಸಿಂಗ್ ಅವರು ನನ್ನ ಮಗನ ಭವಿಷ್ಯವನ್ನು ಧೋನಿ ಹಾಳು ಮಾಡಿದ್ದಾರೆ. ಹೀಗಾಗಿ ನಾನು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಎಷ್ಟೇ ದೊಡ್ಡ ಕ್ರಿಕೆಟಿಗನಾದರೂ ಧೋನಿ ನನ್ನ ಕ್ಷಮೆಗೆ ಅರ್ಹರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ‘ಈಗ ಧೋನಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಧೋನಿ ಮಹಾನ್ ಕ್ರಿಕೆಟಿಗರಾಗಿರಬಹುದು. ಆದರೆ ಅವರು ನನ್ನ ಮಗನಿಗೆ ಮಾಡಿದ್ದನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ನಾನು ಜೀವನದಲ್ಲಿ ಎರಡು ಕೆಲಸಗಳನ್ನು ಮಾಡುವುದಿಲ್ಲ. ಮೊದಲನೆಯದಾಗಿ, ನನಗೆ ಅನ್ಯಾಯ ಮಾಡಿದವರನ್ನು ಕ್ಷಮಿಸಲ್ಲ. ಎರಡನೆಯದಾಗಿ, ನಾನು ಅವರನ್ನು ಭೇಟಿಯಾದಾಗ ಎಂದಿಗೂ ಅವರನ್ನು ತಬ್ಬಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ‘ದೋನಿಯನ್ನು ನನ್ನ ಕುಟುಂಬದ ಸದಸ್ಯರ ಹತ್ತಿರ ಬರಲು ಬಿಡುವುದಿಲ್ಲ. ಧೋನಿ ಆತ್ಮಾವಲೋಕನ ಮಾಡಿಕೊಳ್ಳಲ್ಲಿ ಈ ಹಿಂದೆ ಸ್ಟಾರ್​ ಬ್ಯಾಟರ್​ಗಳಾದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಹೇಳಿದ್ದರು, ಯುವರಾಜ್ ಸಿಂಗ್​ ನಂತಹ ಮತ್ತೊಬ್ಬ ಆಟಗಾರ ಎಂದಿಗೂ ಸಿಗಲ್ಲ ಎಂದಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ದೇಶಕ್ಕಾಗಿ ಆಡಿ ವಿಶ್ವಕಪ್ ಗೆದ್ದ ಯುವರಾಜ್‌ಗೆ ಸರ್ಕಾರ ಭಾರತ ರತ್ನ ನೀಡಿ ಗೌರವಿಸಬೇಕು’ ಎಂದು ಯೋಗರಾಜ್ ಹೇಳಿದ್ದಾರೆ.

ಅಂದಹಾಗೆ ಎಂ.ಎಸ್ ಧೋನಿ ವಿರುದ್ಧ ಯೋಗರಾಜ್ ಸಿಂಗ್ ಈ ರೀತಿಯಾಗಿ ಆರೋಪಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಧೋನಿಯನ್ನು ಬಹಿರಂಗವಾಗಿ ದೂರಿದ್ದರು. 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಿಎಸ್‌ಕೆ (CSK) ಸೋಲಲು ಧೋನಿಯೇ ಪ್ರಮುಖ ಕಾರಣ. ಅವರಿಗೆ ಅಸೂಯೆ ಜಾಸ್ತಿ ಇದೆ ಎಂದು ಯೋಗರಾಜ್ ಸಿಂಗ್ ಆರೋಪಿಸಿದ್ದರು.

ಇನ್ನು ಯುವರಾಜ್ ಸಿಂಗ್ ಅವರು ‘ಭಾರತ 2007ರ ಟಿ-20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಅವರಿಗೆ ಸಾಕಷ್ಟು ಮನ್ನಣೆ ಸಿಕ್ಕಿಲ್ಲ ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ಯುವಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದಿತ್ತು. ನಂತರ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿ ಮತ್ತೆ ಟೀಂ ಇಂಡಿಯಾ ಸೇರಿಕೊಂಡರು. ಆ ನಂತರ ಯುವಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಈ ನಡುವೆ ಯುವಿ 2000 ಮತ್ತು 2017 ರ ನಡುವೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ಎಲ್ಲ ಸ್ವರೂಪಗಳಲ್ಲಿ 402 ಪಂದ್ಯಗಳನ್ನು ಆಡಿದ್ದು 11,178 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 71 ಅರ್ಧ ಶತಕಗಳು ಸೇರಿವೆ. ಅವರು 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು.

Leave A Reply

Your email address will not be published.