Renukaswamy Murder Case: ಪವಿತ್ರಾ ಗೌಡಗೆ ಅಶ್ಲೀಲ ಫೋಟೋ ಕಳಿಸಿದ್ದು ನಿಜ; ಆದರೆ ಈ ಮೂವರ ಪಾತ್ರ ರೇಣುಕಾಸ್ವಾಮಿ ಕೊಲೆಯಲ್ಲಿ ಇಲ್ಲ
Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ತಿರುವೊಂದು ದೊರಕಿದೆ. ಚಾರ್ಜ್‌ಶೀಟ್‌ನಲ್ಲಿ ರೇಣುಕಾಸ್ವಾಮಿ ಕೊಲೆಯಲ್ಲಿ ಬಂಧಿತರಲ್ಲಿ ಈ ಮೂವರು ಆರೋಪಿಗಳು ಭಾಗಿಯಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿರುವ ಕುರಿತು ವರದಿಯಾಗಿದೆ. ಹೌದು, ಈ ಮೂವರು ಆರೋಪಿಗಳು ಕೊಲೆಯಲ್ಲಿ ಪಾತ್ರವಿಲ್ಲ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ನಿಖಿಲ್ ನಾಯಕ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಈ ಮೂವರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಆರಂಭದಲ್ಲಿ ರೇಣುಕಾಸ್ವಾಮಿಯನ್ನು ತಾವೇ ಕೊಲೆ ಮಾಡಿದ್ದಾಗಿ ಹೇಳಿ ಸರೆಂಡರ್ ಆಗಿದ್ದರು. ಆದರೆ ತನಿಖೆಯಲ್ಲಿ ಈ ಮೂವರ ಪಾತ್ರ ಇಲ್ಲ ಎನ್ನುವುದು ಸಾಬೀತಾಗಿದೆ. ಈ ಮೂವರ ಮೇಲೆ ಕೊಲೆ ಕೇಸ್ ಇಲ್ಲದಿದ್ದರೂ, ಚಾರ್ಜ್‌ಶೀಟ್‌ನಲ್ಲಿ 201 ಅಡಿ ಸಾಕ್ಷಿ ನಾಶ ಆರೋಪವಿದೆ. ಸಾಕ್ಷಿ ನಾಶ, ಸುಳ್ಳು ಮಾಹಿತಿ ನೀಡಿದ್ದಾಗಿ ಪೊಲೀಸರು ಉಲ್ಲೇಖ ಮಾಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಫೋಟೋಗಳನ್ನು ಕಳಿಸಿರುವುದು ದೃಢವಾಗಿದೆ.
ಇನ್‌ಸ್ಟಾಗ್ರಾಂಗೆ ಪತ್ರ ಬರೆದಿದ್ದ ಪೊಲೀಸರು ರೇಣುಕಾಸ್ವಾಮಿ ಫೋಟೋ ಕಳಿಸಿರುವ ಮಾಹಿತಿ ನೀಡುವಂತೆ ಕೇಳಿದ್ದರು. ಪೊಲೀಸರ ಮನವಿಗೆ ಸ್ಪಂದಿಸಿ ಮಾಹಿತಿ ನೀಡಿದ್ದಾರೆ. ಪವಿತ್ರಾಗೌಡಗೆ ಮೆಸೇಜ್‌ಗಳು, ಅಶ್ಲೀಲ ಫೋಟೋ ಬಗ್ಗೆ ಇನ್ಸ್ಟಾಗ್ರಾ ಖಚಿತಪಡಿಸಿರುವ ಕುರಿತು ವರದಿಯಾಗಿದೆ. ಹಾಗೂ ಈ ಮಾಹಿತಿಯನ್ನು ತನಿಖಾ ತಂಡ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆ.3 ರಂದು ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ 4500 ಪುಟಗಳ ಒಟ್ಟು 22 ಪ್ರತಿಗಳ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪ್ರಿಂಟಿಂಗ್ ಆಂಡ್ ಬೈಂಡಿಂಗ್ ಕಾರ್ಯ ಮುಗಿಯದೇ ಇರುವ ಕಾರಣ ಚಾರ್ಜ್‌ಶೀಟ್ ಸಲ್ಲಿಕೆ ಮಾಡುವುದು ಆಗಿಲ್ಲ ಎನ್ನಲಾಗಿದೆ.
ಈಗಾಗಲೇ ನಮ್ಮ ತನಿಖೆ ಮುಗಿದಿದ್ದು, ಕೆಲವೊಂದು ಅಬ್ಸರ್ವೇಷನ್ ಮಾಡಿದ್ದು ತಿದ್ದುಪಡಿಯಾಗುತ್ತಿದೆ. ಬೆಂಗಳೂರು ಎಫ್‌ಎಸ್‌ಎಲ್ ನಿಂದ ಎಲ್ಲಾ ವರದಿ ಬಂದಿದು, ಹೈದರಾಬಾದ್‌ನಿಂದ ಬರಬೇಕಾದ ವರದಿ ಕೆಲವೊಂದು ಬಂದಿಲ್ಲ. ಇದನ್ನು ಹೊರತುಪಡಿಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡುತ್ತೇವೆ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಪ್ರತಿಕ್ರಿಯೆ ನೀಡಿದ್ದಾರೆ.