Indian Railway: ಸಂಚರಿಸುತ್ತಲೇ ಕಾಣೆಯಾದ ರೈಲು 3 ವರ್ಷಗಳ ಬಳಿಕ ನಿಲ್ದಾಣಕ್ಕೆ ಬಂತು – ಬರೀ 48 ಗಂಟೆಯ ಪ್ರಯಾಣ 3 ವರ್ಷ ಆಗಿದ್ದೇಕೆ?

Indian Railway : ಒಂದು ರೈಲು ತನ್ನ ಕೊನೆಯ ನಿಲ್ದಾಣ ಅಥವಾ ಗಮ್ಯಸ್ಥಾನ ತಲುಪಲು ಎಷ್ಟು ದಿನ ತೆಗೆದುಕೊಳ್ಳುತ್ತದೆ? ಹತ್ತಿರವಿದ್ದರೆ ಅರ್ಧ ದಿನ, ಒಂದು ದಿನ ಅಥವಾ ಎರಡು, ಹೆಚ್ಚೆಂದರೆ ಒಂದು ವಾರ. ಉತ್ತರ ಬಾರತದಿಂದ ದಕ್ಷಿಣ ಭಾರತದತ್ತ ಬರುವು, ಸುತ್ತಾಕಿಕೊಂಡು ಬರುವ ರೈಲು ಒಂದು ವಾರ ಪಡೆಯುವುದು ಗೊತ್ತಿದೆ. ಆದರೆ ನಮ್ಮ ಭಾರತೀಯ ರೈಲೈವೆಯ(Indian Railway) ರೈಲೊಂದು ತನ್ನ ನಿಲ್ದಾಣ ತಲುಪಲು ಬರೋಬ್ಬರಿ 3 ವರ್ಷ ತೆಗೆದುಕೊಂಡಿದೆ. ಇದರ ಹಿಸ್ಟರಿಯೇ ರೋಚಕವಾಗಿದೆ.

 

ಹೌದು, ನಾವು ಹೇಳುತ್ತಿರುವ ರೈಲು ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ವರ್ಷದ ಬಳಿಕ ತನ್ನ ಗಮ್ಯ ಸ್ಥಾನವನ್ನು ತಲುಪಿದೆ. ಇದನ್ನು ಭಾರತೀಯ ರೈಲ್ವೆ ಇತಿಹಾಸದಲ್ಲಿ ಅತಿ ನಿಧಾನ ಟ್ರೈನ್ ಎಂದು ಕರೆಯಲಾಗುತ್ತದೆ. ನಾವು ರೈಲಿಗೆ ಕಾಯುವಾಗ 1, 2,3 ಗಂಟೆ ತಡವಾದರೆ ಸಾಕು ಸಿಡುಕಿಕೊಳ್ಳುತ್ತೇವೆ. ಆದರೆ ಈ ರೈಲು 3 ವರ್ಷ ತಡವಾಗಿ ಬಂದರೆ ಹೇಗಾಗಬೇಡ ಹೇಳಿ?

ಏನಿದು ಘಟನೆ?
2014 ನವೆಂಬರ್‌ನಲ್ಲಿ ವಿಶಾಖಪಟ್ಟಣದಿಂದ(Vishakapattana) ಗೊಬ್ಬರ ತುಂಬಿದ ರೈಲು ಉತ್ತರ ಪ್ರದೇಶದ ಬಸ್ತಿಯತ್ತ ಪ್ರಯಾಣ ಬೆಳೆಸಿತ್ತು. ವ್ಯಾಪಾರಿ ರಾಮಚಂದ್ರ ಗುಪ್ತಾ ಎಂಬವರಿಗೆ ಸೇರಿದ 14 ಲಕ್ಷ ಮೌಲ್ಯದ 1,361 ಗೊಬ್ಬರ ಪ್ಯಾಕೆಟ್‌ಗಳು ರೈಲಿನಲ್ಲಿದ್ದವು. ಈ ರೈಲು ಎಂದಿನಂತೆ ತನ್ನ ನಿಗದಿತ ಮಾರ್ಗದಲ್ಲಿಯೇ ಸಂಚಾರ ಶುರುಮಾಡಿತ್ತು. ರಾಮಚಂದ್ರ ಗುಪ್ತಾ ತಮ್ಮ ಸರಕು ತೆಗೆದುಕೊಳ್ಳಲು ಉತ್ತರ ಪ್ರದೇಶದಲ್ಲಿ ಕಾಯುತ್ತಾ ಕುಳಿತ್ತಿದ್ದರು. ಆದರೆ ಈ ರೈಲು ಒಂದು ದಿನವಾದರೂ ಬರಲಿಲ್ಲ. ಎರಡು, ಮೂರು ದಿನ, ವಾರ ಕಳೆದರೂ ಪತ್ತೆ ಇಲ್ಲ. ರೈಲು ವಿಳಂಬವಾದ ಹಿನ್ನೆಲೆ ಅಧಿಕಾರಿಗಳನ್ನು ವಿಚಾರಿಸಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಯಾವ ಮಾಹಿತಿ ಕೂಡ ಸಿಕ್ಕಿರಲಿಲ್ಲ.

ಆದರೆ ಅಚ್ಚರಿ ಎಂಬಂತೆ ಮೂರು ವರ್ಷದ ನಂತರ ರೈಲು ಬಸ್ತಿ ನಿಲ್ದಾಣಕ್ಕೆ ಬಂದಿದೆ. ಎಲ್ಲರಿಗೂ ಆಶ್ಚರ್ಯ, ಆತಂಕ. ಏನಾದರೂ ಆಗಲಿ ಎಂದು ಪರಶೀಲಿಸಿದಾಗ ರೈಲು ತಲುಪಿದಾಗ ಅದರಲ್ಲಿದ್ದ ಎಲ್ಲಾ ಗೊಬ್ಬರ ಹಾಳಾಗಿತ್ತು. ರಾಮಚಂದ್ರ ಗುಪ್ತಾ ಸಹ ಗೊಬ್ಬರದ ಪ್ಯಾಕೇಟ್ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ.

ವಿಶಾಖಪಟ್ಟಣದಿಂದ ಉತ್ತರ ಪ್ರದೇಶದ ಬಸ್ತಿ ತಲುಪಲು ಅಂದಾಜು 42 ಗಂಟೆ 13 ನಿಮಿಷ ಬೇಕಾಗುತ್ತದೆ. ಆದ್ರೆ ಈ ರೈಲು 1,400 ಕಿಮೀ ತಲುಪಲು ಮೂರು ವರ್ಷ ತೆಗೆದುಕೊಂಡಿದೆ. ಅಂದರೆ 2014ರ ನವೆಂಬರ್‌ನಲ್ಲಿ ಹೊರಟಿದ್ದ ರೈಲು, 2018ಕ್ಕೆ ತಲುಪಿದೆ. ಆದ್ರೆ ಈ ರೈಲು ಮೂರು ವರ್ಷ ವಿಳಂಬವಾಗಿದ್ದೇಕೆ ಎಂಬುದಕ್ಕೆ ಯಾರಿಂದಲೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ ಎಂದು ವರದಿಯಾಗಿದೆ.

Leave A Reply

Your email address will not be published.