Harassment: ಐ ಲವ್ ಯು ಹೇಳಿದ್ರೆ ಮಾತ್ರ ರಿಚಾರ್ಜ್ ಮಾಡ್ತೇನೆ ಅಂದ ಮೊಬೈಲ್ ಮಾಲಕ: ಕೆರಳಿದ ವಿದ್ಯಾರ್ಥಿನಿಯರು ಮಾಡಿದ್ದೇನು ಗೊತ್ತಾ?

Harassment: ಕಾಮುಕರ ಅಟ್ಟಹಾಸ ಬೀದಿ ಬೀದಿಯಲ್ಲಿ ನಡೆಯುತ್ತಿದೆ. ಈ ಕಾಮುಕರ ಕಾಟದಿಂದ (Harassment) ತಪ್ಪಿಸಿಕೊಳ್ಳೋದೇ ಪ್ರತಿನಿತ್ಯ ಹೆಣ್ಣು ಮಕ್ಕಳ ದೊಡ್ಡ ಸವಾಲು ಆಗಿದೆ. ಇದೀಗ ಕಾಮುಕನನೊಬ್ಬನ ಕಾಟ ತಾಳಲಾರದೆ ಸ್ಕೂಲ್ ಹುಡುಗೀರು ಮೊಬೈಲ್ ಅಂಗಡಿ ಮಾಲಕನಿಗೆ ಸರಿಯಾಗಿ ಬುದ್ಧಿ ಕಳಿಸಿದ್ದಾರೆ.

ಹೌದು, ಮೊಬೈಲ್ ಅಂಗಡಿ ಮಾಲೀಕ ಐ ಲವ್ ಯು ಹೇಳಿದ್ರೆ ಮಾತ್ರ ಮೊಬೈಲ್ ರೀಚಾರ್ಜ್ ಮಾಡುವುದಾಗಿ ಹೇಳಿದ್ದು, ಇದರಿಂದ ಕೆರಳಿದ ವಿದ್ಯಾರ್ಥಿನಿಗಳು ಆತನನ್ನು ನಡು ರಸ್ತೆಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲೇ ಮನಬಂದಂತೆ ಥಳಿಸಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದ್ದು, ಹಲವರು ಪಾಸಿಟಿವ್ ರೆಸ್ಪಾನ್ಸ್ ಮಾಡಿದ್ದಾರೆ.

ಮೂಲತಃ ಈ ಘಟನೆ ರಾಜಸ್ಥಾನದ ದಿದ್ವಾನಾ ಎಂಬಲ್ಲಿ ನಡೆದಿದ್ದು, ವಿದ್ಯಾರ್ಥಿನಿಯರು ಮೊಬೈಲ್ ರೀಚಾರ್ಜ್ ಮಾಡಿಸಲೆಂದು ಮೊಬೈಲ್ ಶಾಪ್‌ಗೆ ಹೋಗಿದ್ದಾರೆ. ಆದ್ರೆ ಅಂಗಡಿ ಮಾಲೀಕ ಐ ಲವ್ ಯು ಹೇಳಿದ್ರೆ ಮಾತ್ರ ಮೊಬೈಲ್ ರೀಚಾರ್ಜ್ ಮಾಡಿಕೊಡುವುದಾಗಿ ಅವರನ್ನು ಪೀಡಿಸಿದ್ದಾನೆ. ಇದರಿಂದ ಕೆರಳಿದ ಹುಡುಗೀರು, ಆತನನ್ನು ದರದರನೇ ನಡು ರಸ್ತೆಗೆ ಎಳೆದು ತಂದು ಆತನ ಪ್ರೀತಿ ಹುಚ್ಚು ಬಿಡಿಸಿದ್ದಾರೆ.

ವಿಡಿಯೋ ಇಲ್ಲಿದೆ

https://x.com/gharkekalesh/status/1830120559255957791

Leave A Reply

Your email address will not be published.