CM MUDA Case: ಸಿಎಂಗೆ ಹಬ್ಬಕ್ಕೂ ಕೇಸ್ ಟೆನ್ಷನ್: ಸೈಟ್ ಕೊಟ್ಟಿದ್ದು ತಪ್ಪೆಂದು ಒಪ್ಪಿಕೊಂಡ ಸರ್ಕಾರ
CM MUDA Case: ತಮ್ಮ ಕುಟುಂಬಕ್ಕೆ ಮೈಸೂರು ಮುಡಾದಿಂದ(MUDA scam) 14 ನಿವೇಶನಗಳನ್ನು ಪಡೆದುಕೊಂಡ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್(Prosecution) ಅನುಮತಿ ಪ್ರಶ್ನಿಸಿ ಅರ್ಜಿ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ. ಇದರೊಂದಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ನೀಡಿದ್ದು ತಪ್ಪು ಎಂದು ಅಧಿಕೃತವಾಗಿ ಇದೀಗ ಸರ್ಕಾರವೇ(Govt) ಒಪ್ಪಿಕೊಂಡಿದೆ. ಈ ಒಂದು ಆದೇಶದಿಂದ ಸಿಎಂ ಸಿದ್ದರಾಮಯ್ಯನವರಿಗೇ ರಾಜಕೀಯ ಭವಿಷ್ಯವೇ ತಲೆಕೆಳಗಾಗುತ್ತಾ ಎನ್ನುವ ಆತಂಕ ಎದುರಾಗಿದೆ.
ದೇವನೂರು ಬಡಾವಣೆ 2001ರಲ್ಲೇ ನಿರ್ಮಾಣವಾಗಿದೆ ಎಂದು ಖುದ್ದು ಸಿಎಂ ಅವರ ಪತ್ನಿ, ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಈ ಸೈಟ್ ಕೊಟ್ಟಿರುವುದು ಕಾನೂನು ಬಾಹಿರ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಯೇ ಆದೇಶ ಹೊರಡಿಸಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತರಾದ ಜಿ.ಟಿ.ದಿನೇಶ್ ಕುಮಾರ್ ಅಮಾನತು ಆದೇಶ ಮಾಡಿದರಲ್ಲೇ ರಾಜ್ಯ ಸರ್ಕಾರದ ಹಲವು ಆಘಾತಕಾರಿ ಸತ್ಯ ಬಿಚ್ಚಿಕೊಂಡಿದೆ. ಇದೀಗ ಸರ್ಕಾರದ ಅಮಾನತು ಆದೇಶದಲ್ಲಿರುವ ಅಂಶಗಳೇ ಸಿಎಂಗೆ ಅಡ್ಡ ದಾರಿಯಾಗಿದೆ. 2009ರಲ್ಲಿ 50:50 ಅನುಪಾತ ಜಾರಿಗೆ ಬಂದಿದೆ. ಹಾಗಾಗಿ 2009 ಕ್ಕಿಂತ ಹಿಂದಿನ ಹಳೆ ಬಡಾವಣೆಗಳಿಗೆ 50:50 ಅನುಪಾತ ಅನ್ವಯಿಸುವುದಿಲ್ಲ.
ಆದರೆ ಪ್ರಾಧಿಕಾರ 2009 ಹಿಂದಿನ ಬಡಾವಣೆಗಳ ಬದಲಿ ನಿವೇಶನಗಳ ಮಂಜೂರಾತಿಗಾಗಿ 50:50 ಅನುಪಾತ ನಿರ್ಣಯ ಕೈಗೊಂಡಿರುವುದು ನಿಯಮ ಬಾಹಿರ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಿಎಂ ಅವರ ಪತ್ನಿಯ ಸಹೋದರನ ನಿವೇಶನವನ್ನು 2001 ರಲ್ಲೇ ಮೂಡಾ (MUDA Scam) ವಶಪಡಿಸಿಕೊಂಡಿತ್ತು. ಅಲ್ಲಿಗೆ ಈ 50:50 ಅನುಪಾತ ಇದಕ್ಕೆ ಅನ್ವಯವಾಗೋದಿಲ್ಲ. ಇದೀಗಾ ಸರ್ಕಾರ ಮಾಡಿರುವ ಆದೇಶವೇ ಸಿಎಂಗೆ ತಿರುಗುಬಾಣವಾಘುವ ಸಾಧ್ಯತೆಯಿದೆ.
ಇದರೊಂದಿಗೆ ಸಿದ್ದರಾಮಯ್ಯ ಪಾಲಿಗೆ ಗಣೇಶ ಚತುರ್ಥಿ ಹಬ್ಬವನ್ನೂ ಟೆನ್ನನ್‌ನಲ್ಲೇ ಆಚರಿಸುವ ಪರಿಸ್ಥಿತಿ ಬಂದೊದಿಗಿದೆ. ಮುಂದಿನ ದಿನಾಂಕದಲ್ಲೇ ವಿಚಾರಣೆ ಪೂರ್ಣಗೊಳಿಸಲು ನ್ಯಾಯಮೂರ್ತಿಗಳು ವಾದಿ ಮತ್ತು ಪ್ರತಿವಾದಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಅಂದು ವಿಚಾರಣೆ ಅಂತ್ಯ ಕಾಣುವ ಸಾಧ್ಯತೆ ಇದೆ.
ಸೋಮವಾರ ಮಧ್ಯಾಹ್ನ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಪ್ರಕರಣವನ್ನು ಗಣೇಶ ಚತುರ್ಥಿಗೂ ಮುನ್ನವೇ ಮುಗಿಸೋಣ ಎಂದು ವಾದಿ ಮತ್ತು ಪ್ರತಿವಾದಿ ವಕೀಲರುಗಳಿಗೆ ಸಲಹೆ ಮಾಡಿದರು. ಆದರೆ, ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ತಾವು ಈ ವಿಷಯದಲ್ಲಿ ವಾದ ಮಾಡಬೇಕಿದೆ. ನನಗೆ ಒಂದು ವಾರಗಳ ಸಮಯಾವಕಾಶ ಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪರ ವಕೀಲ ಅಭಿಷೇಕ್ ಮನು ಸಿಂಪ್ಲಿ, ನನಗೆ ಸೆಪ್ಟೆಂಬರ್ 21ರವರೆಗೂ ಸಮಯವಿಲ್ಲ. 9ರಂದು ಜನರಲ್ ವಾದ ಮಂಡಿಸಿದ ನಂತರ ನನ್ನ ವಾದ ಮಂಡನೆ ಮಾಡುವುದಾಗಿ ತಿಳಿಸಿದರು. ಆಗ ನ್ಯಾಯಾಮೂರ್ತಿಗಳು, ಅಕ್ಟೋಬರ್ 2ರಿಂದ ನ್ಯಾಯಾಲಯಗಳಿಗೆ ರಜೆ ಇರಲಿದೆ. ಅದಕ್ಕೆ ಮುನ್ನವೇ ಪ್ರಕರಣ ಮುಗಿಸುವ ಆಗತ್ಯವಿದೆ ಎಂದರು.
ಅಡ್ವಕೇಟ್ ಜನರಲ್ ಸಲಹೆಯಂತೆ ಸೆಪ್ಟೆಂಬರ್ 9ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳೋಣ. ಆದರೆ, ಸೆಪ್ಟೆಂಬರ್ 12ಕ್ಕೆ ವಾದ-ಪ್ರತಿವಾದ ಪೂರ್ಣಗೊಳ್ಳಬೇಕು. ಇದನ್ನು ಮತ್ತಷ್ಟು ಮುಂದುವರೆಸಲು ಸಾಧ್ಯವಿಲ್ಲ ಎಂದು ಸೂಚಿಸಿ, ಇದೇ ತಿಂಗಳ 9ಕ್ಕೆ ವಿಚಾರಣೆಯನ್ನು ಮುಂದೂಡಿದರು.
ರಾಘವನ್ ಸುದೀರ್ಘ ವಾದ: ವಿಚಾರಣೆ ಪ್ರಾರಂಭವಾಗುತ್ತಿದ್ದಂತೆಯೇ ರಾಜ್ಯಪಾಲರು ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಸುದೀರ್ಘ ವಾದ ಮಂಡಿಸಿ, ಕರ್ನಾಟಕ ಸರ್ಕಾರವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಮುಖ್ಯಮಂತ್ರಿ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವುದು, ಅವರ ಕುಟುಂಬದವರು ಬೆಲೆ ಬಾಳುವ 14 ನಿವೇಶನಗಳನ್ನು ಪಡೆದು ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲೇ, ಇಲ್ಲಿ, ಮುಖ್ಯಮಂತ್ರಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಭಾವ ಬಳಸಿ ತಮ್ಮ ಕುಟುಂಬಕ್ಕೆ ನಿವೇಶನಗಳನ್ನು ನೀಡಿದ್ದಾರೆ ಎಂಬುದಕ್ಕಷ್ಟೇ ಸೀಮಿತ ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ಸರ್ಕಾರದಲ್ಲಿ ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ಗೆ ಕಳೆದ ಎರಡು ದಶಕಗಳಿಂದ ಒಂದಲ್ಲಾ ಒಂದು ಅಧಿಕಾರದಲ್ಲಿ ಭಾಗಿಯಾಗಿದ್ದಾರೆ. ಅವರು ಎರಡು ಬಾರಿ ಮುಖ್ಯಮಂತ್ರಿ ಎಂಬ ಆಗಿದ್ದ ಸಂದರ್ಭದಲ್ಲಿ ನಿವೇಶನಗಳ ಹಂಚಿಕೆ ಆಗದಿರಬಹುದು. ಆದರೆ, ಅವರು ಬೇರೆ , ಬೇರೆ ಅಧಿಕಾರ ಹುದ್ದೆಯಲ್ಲಿ ಇದ್ದಾಗ ಈ ಪ್ರಕ್ರಿಯೆ ನಡೆದಿದೆ ಎಂದು ವಕೀಲರು ಕೆಲವು ದಾಖಲೆಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.