Central Scheme: ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ; ಅಕ್ಕಿ ಜೊತೆ ಸಿಗಲಿದೆ 9 ವಸ್ತುಗಳು
Central Scheme: ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ ನೀಡಿದ್ದು, ಉಚಿತ ಪಡಿತರವನ್ನು ಒದಗಿಸುತ್ತದೆ. ಆದರೆ ಇದೀಗ ಈ ಯೋಜನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಸರಕಾರ ಹೊರಟಿದೆ. ಕೇಂದ್ರ ಈ ಹಿಂದೆ ಉಚಿತ ಅಕ್ಕಿ ನೀಡುತ್ತಿತ್ತು. ಆದರೆ ಇದೀಗ ಉಚಿತ ಅಕ್ಕಿ ಬದಲಿಗೆ ಒಂಭತ್ತು ಅಗತ್ಯ ವಸ್ತುಗಳನ್ನು ನೀಡುವ ಕುರಿತು ಸರಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಕೆಲವು ಸುದ್ದಿಗಳ ಪ್ರಕಾರ ಉಚಿತ ಅಕ್ಕಿ ಬದಲು ಒಂಭತ್ತು ಅಗತ್ಯ ವಸ್ತುಗಳನ್ನು ನೀಡಲು ಸರಕೃ ಮುಂದಾಗಿದ್ದು, ಇದರಲ್ಲಿ ಗೋಧಿ, ಕಾಳುಗಳು, ಧ್ಯಾನಗಳು, ಸಕ್ಕರೆ, ಉಪ್ಪು, ಸಾಸಿವೆ ಎಣ್ಣೆ, ಹಿಟ್ಟು, ಸೋಯಾಬೀನ್ ಮತ್ತು ಮಸಾಲೆಗಳು ಇರಲಿದೆ ಎಂದು ಹೇಳಲಾಗಿದೆ.
ಕೆಲವು ವರದಿಗಳ ಪಕ್ರಕಾರ, ಅಕ್ಕಿ ಬದಲಿಗೆ ಈ ವಸ್ತುಗಳನ್ನು ನೀಡಲಾಗುವುದು ಎಂಬ ಮಾತಿದ್ದರೆ, ಇನ್ನೂ ಕೆಲವೊಂದು ವರದಿಗಳ ಪ್ರಕಾರ ಅಕ್ಕಿ ಜೊತೆಗೆ ಒಂಭತ್ತು ರೀತಿಯ ವಸ್ತುಗಳನ್ನು ನೀಡಲು ಸರಕಾರ ಮುಂದಾಗಿದೆ ಎಂದು ಹೇಳಲಾಗಿದೆ. ಇದರಿಂದ ಜನರ ಜೀವನ ಮಟ್ಟವೂ ಸುಧಾರಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಕುರಿತು ನಿರ್ದಿಷ್ಟ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.