Apology by Bellad: ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ ಬಿಜೆಪಿ ನಾಯಕ: ಯಾಕೆ?

Share the Article

Apology by Bellad: ರಾಜಕೀಯದಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಕೆಸರೆರಚಾಡಿಕೊಳ್ಳೋದು ಮಾಮೂಲು. ಕೆಲವೊಮ್ಮೆ ಅಲ್ಲಿ ಮಿತಿ ಮೀರಿದ ಪದಗಳ ಪ್ರಯೋಗ ಕೂಡ ನಡೆಯುತ್ತದೆ. ಹಾಗಾದಾಗ ಅದಕ್ಕೊಂದು ಕ್ಷಮೆ(Apology) ಕೇಳಿ ಅದನ್ನು ಅಲ್ಲಿಗೆ ತಣ್ಣಗಾಗಿಸುತ್ತಾರೆ. ಇದೀಗ ಬಿಜೆಪಿ ಶಾಸಕ(BJP MLA) ಅರವಿಂದ ಬೆಲ್ಲದ್‌(Aravind Bellad) ಆಕ್ಷೇಪಾರ್ಹ ಪದ(Objectionable word) ಬಳಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ(CM Siddaramaiah) ಅವರನ್ನು ಕ್ಷಮೆ ಕೋರಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಹಿನ್ನೆಲೆ, ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಸಿಎಂ ಕ್ಷಮೆ ಕೋರಿದ್ದಾರೆ. ಜಿಂದಾಲ್ ಭೂಮಿ ಪರಭಾರೆ ವಿಚಾರದಲ್ಲಿ ಹೇಳಿಕೆ ನೀಡುವಾಗ ಆಕ್ಷೇಪಾರ್ಹ ಪದವನ್ನು ಬೆಲ್ಲದ್ ಬಳಕೆ ಮಾಡಿದ್ದರು. ಇದೀಗ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಶಾಸಕ ಅರವಿಂದ ಬೆಲ್ಲದ್‌ ಕ್ಷಮೆ ಕೋರಿ ಸಿಎಂ ಗೆ ಪತ್ರ ಬರೆದಿದ್ದಾರೆ.

Leave A Reply