Mango Juice: ಪ್ಯಾಕ್ ಮಾಡಿದ ‘ಮ್ಯಾಂಗೋ ಜ್ಯೂಸ್’ ಕುಡಿಯೋ ಮೊದಲು ಈ ವಿಡಿಯೋ ನೋಡಿ!
Mango Juice: ಅದೇನೋ ಗೊತ್ತಿಲ್ಲ, ಪ್ರೆಶ್ ಜ್ಯೂಸ್ ಗಿಂತ ಹೆಚ್ಚಾಗಿ ಬಹುತೇಕರು ಪ್ಯಾಕ್ ಮಾಡಿದ ಜ್ಯೂಸ್ ಅಂದ್ರೆ ಸಾಕು ಬಾಯಿ ಚಪ್ಪರಿಸಿ ಕುಡಿತಾರೆ. ಅದರಲ್ಲೂ ಮ್ಯಾಂಗೋ ಜ್ಯೂಸ್ (Mango Juice) ಎಲ್ಲಾ ಸೀಸನ್ ನಲ್ಲೂ ಸಿಗುತ್ತೆ. ಆದ್ರೆ ಈ ಮ್ಯಾಂಗೋ ಜ್ಯೂಸ್ ಕುಡಿಯೋರು ಇಲ್ಲಿ ಸ್ವಲ್ಪ ಗಮನಿಸಿ.
ಹೌದು, ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಾವಿನ ರಸಗಳ ಸಂಸ್ಕರಣಾ ಘಟಕದೊಳಗಿನ ಉತ್ಪಾದನಾ ಪ್ರಕ್ರಿಯೆಯನ್ನು ಬಹಿರಂಗಪಡಿಸಿದೆ, ಇಲ್ಲಿ ನಿಜವಾದ ಮಾವಿನಹಣ್ಣುಗಳನ್ನು ಜ್ಯೂಸ್ ಮಾಡಲು ಬಳಸುವುದೇ ಇಲ್ಲ ಅನ್ನೋದು ಶಾಕಿಂಗ್ ವಿಷ್ಯ.
ಈ ವಿಡಿಯೋದಲ್ಲಿ ಕೈಗಾರಿಕಾ ಮಂಥನ ಯಂತ್ರದಲ್ಲಿ ದಪ್ಪವಾದ ಹಳದಿ ದ್ರವವನ್ನು ಕೆಂಪು ಮತ್ತು ಕಿತ್ತಳೆ ಆಹಾರ ಬಣ್ಣ, ಸಕ್ಕರೆ ಸಿರಪ್ ಮತ್ತು ಇತರ ರಾಸಾಯನಿಕಗಳೊಂದಿಗೆ ಬೆರೆಸಿ ಮಾವಿನ ರಸಕ್ಕೆ ಹೋಲುವ ಅಂತಿಮ ಉತ್ಪನ್ನವನ್ನು ನಂತರ ಬಾಟಲಿಯಲ್ಲಿ ತುಂಬಿಸಿ ವಿತರಣೆಗಾಗಿ ಪ್ಯಾಕ್ ಮಾಡಲಾಗುತ್ತದೆ. ಇಲ್ಲಿ ಮಾವಿನ ಹಣ್ಣು ಬಳಸದೆ ಮಾವಿನ ಜ್ಯೂಸ್ ಮಾಡಲು ವಿಷವನ್ನೇ ಬಳಸುತ್ತಿದ್ದಾರೆ ಅಂದರೆ ತಪ್ಪಾಗಲಾರದು.
No Mango in Mango Juice! Tetra Pack Mango Juice Viral Video Reveals Food Colour and Sugar Syrup as Key#mangojuice #juice #sugarsyrup #tetrapackmango #viralvideo #viral #trending #oneworldnews #own #mango #mangos pic.twitter.com/nYiO7DLdVX
— One World News (@Oneworldnews_) August 31, 2024
ಸದ್ಯ ವೀಡಿಯೊಗೆ “ಟೆಟ್ರಾ ಪ್ಯಾಕ್ ಮಾವಿನ ರಸ” ಎಂಬ ಶೀರ್ಷಿಕೆ ನೀಡಲಾಗಿದ್ದು, ವೀಡಿಯೊದಲ್ಲಿ ಕಂಡುಬರುವ ರಸವು ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಟೆಟ್ರಾ ಪ್ಯಾಕ್ ಪಾನೀಯಗಳು ಎಂದು ಸೂಚಿಸುತ್ತದೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋ ನೋಡಿ ಅನೇಕ ಬಳಕೆದಾರರು ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.