Tungabhadra Dam: ಅರ್ಧಕ್ಕರ್ಧ ಖಾಲಿಯಾಗಿದ್ದ ತುಂಗಭದ್ರಾ ಜಲಾಶಯ ಮತ್ತೆ ಭರ್ತಿ! ಇನ್ನೇಷ್ಟು ಅಡಿ ಬಾಕಿ?
Tungabhadra Dam: ನಾಡಿನಾದ್ಯಂತ ಮುಂಗಾರು ಮಳೆ(Monsoon rain) ಮತ್ತೆ ಚುರುಕು ಪಡೆದುಕೊಂಡಿದೆ. ರಾಜ್ಯದ ಜಲಾಶಯಗಳ(Dam) ನೀರಿನ ಮಟ್ಟ ಮತ್ತಷ್ಟು ಏರುತ್ತಿದೆ. ಕೆಲ ಜಲಾಶಯಗಳು ಈಗಾಗಲೇ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಳೆದ 15 ದಿನಗಳ ಹಿಂದೆ ತುಂಗಭದ್ರಾ ಅಣೆಕಟ್ಟಿನ ಕ್ರಸ್ಟ್ ಗೇಟ್ವೊಂದರ(Crust gate) ಚೈನ್ ಲಿಂಕ್(Chain link) ತುಂಡಾಗಿ ಬಹಳ ನೀರು ಪೋಲಾಗಿತ್ತು. ಇದರಿಂದ ರೈತರು(Farmer) ಆತಂಕ್ಕೀಡಾಗಿದ್ದರು. ಆದರೆ ಇದೀಗ ಅಲ್ಲಿನ ಜನ ನೆಮ್ಮದಿಯ ಉಸಿರು ಬಿಡುವಂತಾಗಿದೆ. ತುಂಗಾಭ್ರದಾ ಜಲಾಶಯದ ನೀರನ್ನೇ ನಂಬಿ ಸಾವಿರಾರು ಮಂದಿ ಜೀವನ ನಡೆಸುತ್ತಾರೆ. ಹಾಗೆ ಲಕ್ಷಗಟ್ಟಲೆ ಎಕರೆ ಕೃಷಿಭೂಮಿಗೆ ಈ ಜಲಾಶಯ ನೀರು ಒದಗಿಸುತ್ತದೆ.
ಇದೀಗ ವಿಜಯನಗರ ಜಿಲ್ಲೆಯ ಹೊಸಪೇಟೆಯ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯ ಮತ್ತೆ ಭರ್ತಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.
ತುಂಗಾಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುದೆ. ಹಾಗಾಗಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಬಹುತೇಕ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬುತ್ತಿದೆ. ಹಾಗಾಗಿ ಬರುವ ವಾರದಿಂದ ನೀರನ್ನು ಹೊರಬಿಡುವ ಸಾಧ್ಯತೆ ಹೆಚ್ಚಿದೆ.
ತುಂಗಭದ್ರಾ ಜಲಾಶಯದ ನೀರಿನ ಮಟ್ಟ
• ಗರಿಷ್ಠ ಮಟ್ಟ : 1,633 ಅಡಿ
• ಇಂದಿನ ಮಟ್ಟ : 1631.06 ಕ್ಯೂಸೆಕ್
• ಇಂದಿನ ಒಳ ಹರಿವು : 30,031 ಕ್ಯೂಸೆಕ್
• ಇಂದಿನ ಹೊರ ಹರಿವು : 15,234 ಕ್ಯೂಸೆಕ್
• ನದಿಗೆ : 5,170 ಕ್ಯೂಸೆಕ್
• ಇಂದಿನ ಸಾಮರ್ಥ್ಯ : 98.01 ಟಿಎಂಸಿ
• ಗರಿಷ್ಠ ಸಾಮರ್ಥ್ಯ : 105.788 ಟಿಎಂಸಿ
ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಲು ಇನ್ನೂ 1.94 ಅಡಿ ಮಾತ್ರ ಬಾಕಿ ಇದೆ. ಒಂದೇ ದಿನದಲ್ಲಿ 2 ಟಿಎಂಸಿ ನೀರು ಸಂಗ್ರಹವಾಗಿದೆ. ಮೊನ್ನೆ ಹೊಸ ಕ್ರಸ್ಟ್ ಗೇಟ್ 19ಅನ್ನು ಅಳವಡಿಸಿದ ಬಳಿಕ ಬರೋಬ್ಬರಿ 27 ಟಿಎಂಸಿ ನೀರು ಸಂಗ್ರಹಗೊಂಡಿದೆ. ಇದೀಗ ಒಳ ಹರಿವಿನಲ್ಲೂ ಹೆಚ್ಚಳವಾಗಿದ್ದು, ಸದ್ಯದಲ್ಲೇ ಜಲಾಶಯ ಭರ್ತಿಯಾಗಲಿದೆ.