Dream Bazaar: ಉದ್ಘಾಟನೆಯಾದ 30 ನಿಮಿಷದಲ್ಲೇ ಬೃಹತ್ ಮಾಲ್ ಲೂಟಿ ಮಾಡಿದ ಜನರು! ವಿಡಿಯೋ ವೈರಲ್

Dream Bazaar: ಪಾಕಿಸ್ತಾನದಲ್ಲಿ ಬೃಹತ್ ಬಟ್ಟೆ ಮಾರಾಟ ಮಳಿಗೆಯಾದ ಡ್ರೀಮ್ ಬಜಾರ್ ಶುಕ್ರವಾರ ಅದ್ದೂರಿಯಾಗಿ ಆರಂಭಗೊಂಡಿತ್ತು. ಆದರೆ ಅದು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಇಡೀ ಮಳಿಗೆ ಲೂಟಿಯಾಗಿದೆ.

 

ಈಗಾಗಲೇ ಪಾಕಿಸ್ತಾನದಲ್ಲಿ ಜನರು ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿರುವುದು ತಿಳಿದಿರುವ ವಿಚಾರ. ಹಾಗಿರುವಾಗ ಈ ನಡುವೆ ಆಗಷ್ಟೇ ಉದ್ಘಾಟನೆಯಾಗಿದ್ದ ‘Dream Bazaar’ ಮಾಲ್ ಅನ್ನು ಕೆಲವೇ ಗಂಟೆಗಳಲ್ಲಿ ಜನರು ಲೂಟಿ ಮಾಡಿದ್ದಾರೆ.

ಹೌದು, ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್’ ಮಾಲ್ ಅನ್ನು ಉದ್ಘಾಟನೆಗೊಂಡ ಮೊದಲ ದಿನವೇ ಜನರ ಗುಂಪೊಂದು ಧ್ವಂಸಗೊಳಿಸಿದ್ದು ಮಾತ್ರವಲ್ಲದೇ ದುಬಾರಿ ವಸ್ತುಗಳಿಂದ ಹಿಡಿದು ಸಿಕ್ಕಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಜನರ ಗುಂಪು ಕಂಡು ಗಾಬರಿಗೊಂಡ ಮಾಲ್ ಸಿಬ್ಬಂದಿ, ಎಕ್ಸಿಟ್ ಬಾಗಿಲು ಮುಚ್ಚಲು ಪ್ರಯತ್ನಿಸಿದ್ದರು. ಆದರೆ ಪುಡಿ ರೌಡಿಗಳ ಗಾಜಿನ ಬಾಗಿಲನ್ನು ಬಲಪ್ರಯೋಗದ ಮೂಲಕ ದ್ವಾಂಸ ಮಾಡಿದ್ದಾರೆ. ಇನ್ನು ಘಟನಾ ಸ್ಥಳದಲ್ಲಿ ಪೊಲೀಸರು ಇರದೇ ಇರುವ ಕಾರಣ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಮಾಲ್‌ ಸಿಬ್ಬಂದಿ ಅಸಹಾಯಕತೆ ಹೊರಹಾಕಿದ್ದಾರೆ .

ವಿಡಿಯೋ ಇಲ್ಲಿದೆ

https://x.com/Politicspedia23/status/1830115111102513395

ಮಾಹಿತಿ ಪ್ರಕಾರ ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿರುವ ‘ಡ್ರೀಮ್ ಬಜಾರ್’ ಮಾಲ್‌ನ ಉದ್ಘಾಟನೆ ಪ್ರಯುಕ್ತ ಮಾಲೀಕರು ವಿಶೇಷ 50 ರೂ ರಿಯಾಯಿತಿ ಘೋಷಿಸಿದ್ದರು. ಮೊದಲ ದಿನದಂದು ಪಾಕಿಸ್ತಾನದ ಕರೆನ್ಸಿಯ 50 ರೂ.ಗೂ ಕಡಿಮೆ ದರದಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವುದಾಗಿ ಈ ಮಾಲ್ ಹೇಳಿಕೊಂಡಿತ್ತು.ಜತೆಗೆ ಸಾರ್ವಜನಿಕರನ್ನು ಆಕರ್ಷಿಸಲು ಟಿವಿ, ದಿನ ಪತ್ರಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಪ್ರಚಾರವನ್ನು ಮಾಡಿದ್ದರು ಎಂದು ತಿಳಿದು ಬಂದಿದೆ.

2 Comments
  1. vk downloader video says

    Your blog is a constant source of inspiration for me. Your passion for your subject matter shines through in every post, and it’s clear that you genuinely care about making a positive impact on your readers.

  2. instagram reels downloader says

    I simply could not go away your web site prior to suggesting that I really enjoyed the standard info a person supply on your guests Is going to be back incessantly to investigate crosscheck new posts

Leave A Reply

Your email address will not be published.