Hindu Protest: ಗಣೇಶೋತ್ಸವ ಆಚರಣೆ ಮಾಡಿದ್ರೆ ಮಾಲಿನ್ಯ ಆಗುತ್ತಂತೆ! ಸಿಡಿದೆದ್ದ ಹಿಂದುಗಳು
Hindu Protest: ಸಂವಿಧಾನದತ್ತವಾಗಿ(Constitutional) ನಮಗೆ ಧಕ್ಕಿರುವ ಧಾರ್ಮಿಕ ಸ್ವಾತಂತ್ರ್ಯದ(Religious freedom) ಮೇಲೆ ಪರಿಸರ ಮಾಲಿನ್ಯಗಳ(Pollution) ನೆಪ ಹೇಳಿ ಅಡ್ಡಿಪಡಿಸುತ್ತಿರುವ ಸ್ಥಳಿಯಾಡಳಿತದ ಕ್ರಮವನ್ನು ಖಂಡಿಸಿ ಹಿಂದು ಜಾಗರಣ ವೇದಿಕೆHindu Jagarana Vedike ಹಾಗೂ ವಿವಿಧ ಗಣೇಶೋತ್ಸವ ಸಮಿತಿಗಳ ನೇತೃತ್ವದಲ್ಲಿ ಮಡಿಕೇರಿ(Madikeri) ನಗರಸಭೆಯ ಮುಂಭಾಗ ಪ್ರತಿಭಟನೆ(Protest) ನಡೆಯಿತು. ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ಹಿಂದೂ ವಿರೋಧಿ ಶಕ್ತಿಗಳು ನಡೆಸುತ್ತಿರುವ ದಾಳಿಯನ್ನು ಒಕ್ಕೊರಲಿನಿಂದ ಖಂಡಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹಿಂದು ಜಾಗರಣ ವೇದಿಕೆಯ ಪ್ರಾಂತ ಸಮಿತಿಯ ಪ್ರಮುಖರಾದ ಕೆ.ಟಿ. ಉಲ್ಲಾಸ್ ರವರು ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದ ಸಾರ್ವಜನಿಕ ಗಣೇಶೋತ್ಸವಕ್ಕೆ ಪರಿಸರ ಮಾಲಿನ್ಯ ಹಾಗೂ ಕಾನೂನಿನ ನೆಪ ಹೇಳಿ ಅಡ್ಡಿಪಡಿಸುತ್ತಿರುವುದನ್ನು ಬಲವಾಗ ಖಂಡಿಸುವುದಾಗಿ ಹೇಳಿದರು. ಕಾನೂನು ಪಾಲನೆ ಕೇವಲ ಹಿಂದುಗಳಿಗಷ್ಟೇ ಸೀಮಿತ ಎನ್ನುವಂತ ಧೋರಣೆಯನ್ನು ಆಡಳಿತ ನಡೆಸುವವರು ಹಾಗೂ ಅಧಿಕಾರಿಗಳು ಕೈಬಿಡಬೇಕೆಂದು ಹಾಗೂ ನಾಡಿನ ಗಣೇಶೋತ್ಸವ ಸಮಿತಿಗಳಿಗೆ ಕಾನೂನಿನ ನೆಪದಲ್ಲಿ ಕಿರುಕುಳ ನೀಡಿದಲ್ಲಿ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಕೆ ನೀಡಿದರು.
ಗಣೇಶ ಉತ್ಸವ ಸಮಿತಿಗಳ ಪರವಾಗಿ ಮಾತನಾಡಿದ ಹಿಂದೂ ಯುವಶಕ್ತಿ ಮಂಡಳಿಯ ಪ್ರಮುಖರಾದ ಅರುಣ್ ಕುಮಾರ್ ರವರು ಯಾವುದೇ ಕಾರಣಕ್ಕೂ ಹಿಂದುಗಳು ಮುಚ್ಚಳಿಕೆ ಬಾಂಡ್ ನೀಡಿ ಹಬ್ಬಹರಿದಿನಗಳನ್ನು ಆಚರಿಸುವ ದುಸ್ಥಿತಿಗೆ ತಲುಪಬಾರದೆಂದರು.ಎಲ್ಲೂ ಇಲ್ಲದ ಕಾನೂನುಗಳ ಹೇರಿಕೆಯನ್ನು ನಗರಸಭೆ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ನಗರಸಭಾ ಕಮೀಷನರ್ ಪತ್ರಿಕಾ ಪ್ರಕಟಣೆ ನೀಡಿರುವುದು ಖಂಡನೀಯವೆಂದರು. ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆಯ ಪ್ರಾಂತ ಸಮಿತಿಯ ಸುಭಾಸ್ ತಿಮ್ಮಯ್ಯ, ಜಿಲ್ಲಾ ಸಂಯೋಜಕರಾದ ಕುಕ್ಕೇರ ಅಜಿತ್ , ಜಿಲ್ಲಾ ಸಹ ಸಂಯೋಜಕರಾದ ಚೇತನ್ ಶಾಂತಿನಿಕೇತನ್ ಸೇರಿದಂತೆ ನಗರ ಸಭಾ ಸದಸ್ಯರುಗಳು, ಮಹಿಳಾ ಮೋರ್ಛಾ ಪದಾಧಿಕಾರಿಗಳು ವಿವಿಧ ಗಣೇಶೋತ್ಸವ ಸಮಿತಿಗಳ ಮುಖಂಡರು, ಹಾಗೂ ಸಾರ್ವಜನಿಕರು ಸುರಿವ ಮಳೆಯ ನಡುವೆಯೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.