PM ujjwala yojana: ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಉಚಿತ LPG ಸಿಲಿಂಡರ್: ಈ ರೀತಿ ಅರ್ಜಿ ಸಲ್ಲಿಸಿ
pm ujjwala yojana: 2016ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ LPG ಸಂಪರ್ಕಗಳನ್ನು ಒದಗಿಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (Pradhan Mantri Ujjwala Yojana) ಪ್ರಾರಂಭಿಸಿದ್ದು, ಇದರಿಂದ ಫಲಾನುಭವಿಗಳಿಗೆ ಹಲವಾರು ಪ್ರಯೋಜನಗಳು ಆಗಿವೆ.
ಈಗಾಗಲೇ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ ಎಲ್ ಪಿ ಜಿ ಸಿಲಿಂಡರ್ ನೀಡಲಾಗುತ್ತಿದೆ. ಈ ಯೋಜನೆಯ ಲಾಭ ಪಡೆಯಲ ಪಿಎಂ ಉಜ್ವಲ್ ಯೋಜನಾ 2.0 ಅಡಿ, ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು, ಮಹಿಳೆಯರು ನೋಂದಾಯಿಸಿಕೊಳ್ಳಬೇಕಿದೆ. ಹೀಗೆ ನೋಂದಾಯಿಸಿಕೊಂಡಂತ ಅರ್ಹ ಮಹಿಳೆಯರಿಗೆ ಉಚಿತ ಸಿಲಿಂಡರ್ ಮತ್ತು ಒಲೆ ನೀಡಲಾಗುತ್ತದೆ.
ಅರ್ಹತಾ ಮಾನದಂಡಗಳು: ಅರ್ಜಿದಾರರು ಮಹಿಳೆಯಾಗಿರಬೇಕು.
18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರವೇ ಅರ್ಜಿಯನ್ನು ಸಲ್ಲಿಸಬಹುದು.
ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್
ಬ್ಯಾಂಕ್ ಖಾತೆಯ ಪಾಸ್ ವಿವರ
ಮೊಬೈಲ್ ಸಂಖ್ಯೆ
ಪಾಸ್ ಪೋರ್ಟ್ ಅಳತೆಯ ಪೋಟೋ
ಪಡಿತರ ಚೀಟಿ
ನೋಂದಣಿ ಮಾಡುವ ವಿಧಾನ:
ಜನ ಸೇವಾ ಕೇಂದ್ರ: ನಿಮ್ಮ ಹತ್ತಿರದ ಜನ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಲು ಸಹಾಯ ಪಡೆಯಿರಿ
ಅಥವಾ ಅಧಿಕೃತ ವೆಬ್ಸೈಟ್: pmuy.gov.in ಅಧಿಕೃತ ಉಜ್ವಲ ಯೋಜನೆ ವೆಬ್ಸೈಟ್ಗೆ ಭೇಟಿ ನೀಡಿ.
“ಉಜ್ವಲ ಯೋಜನೆ 2.0 ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಗ್ಯಾಸ್ ಡೀಲರ್: ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಲು ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಲು ನೀವು ನಿಮ್ಮ ಸ್ಥಳೀಯ ಗ್ಯಾಸ್ ಡೀಲರ್ ಅನ್ನು ಭೇಟಿ ಮಾಡಬಹುದು.