Arun Kumar Puttila: ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ FIR ದಾಖಲು, ಲೈಂಗಿಕ ದೌರ್ಜನ್ಯ ಆರೋಪ

Share the Article

Arun Kumar Puttila: ಬಿಜೆಪಿ ನಾಯಕ, ಹಿಂದೂಪರ ಹೋರಾಟಗಾರ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ 417, 354A, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಪೈ ವಿಸ್ತಾ ಹೋಟೆಲ್ನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದ್ದು, 2023 ಜೂನ್ ನಲ್ಲಿ ಬೆಂಗಳೂರಿನ ಪೈ ವಿಸ್ತಾ ಹೋಟೆಲ್ ನಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಫೋಟೊ, ಸೆಲ್ಫಿ, ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆಂದು ಆರೋಪಿಸಿದ್ದಾರೆ. 47 ವರ್ಷದ ಮಹಿಳೆಯಿಂದ ಈ ದೂರು ದಾಖಲಾಗಿದೆ.

ಅರುಣ್ ಕುಮಾರ್ ರ್ ಪುತ್ತಿಲ ಪುತ್ತೂರು ವಿಧಾನಸಭಾ ಚುನಾವಣೆಗೆ ಬಂಡಾಯ ಸ್ಪರ್ಧೆ ಮಾಡಿದ್ದರು. ಈ ಮಹಿಳೆ ಪುತ್ತಿಲ ಅಭಿಮಾನಿ ಎನ್ನಲಾಗಿದೆ. ಪುತ್ತಿಲ ಪರಿವಾರದಲ್ಲಿಯೇ ಕೆಲ ತಿಂಗಳುಗಳಿಂದ ಬಿರುಕು ಮೂಡಿತ್ತು ಅನ್ನುವುದು ಗಮನಾರ್ಹ. ಸದರಿ ಮಹಿಳೆಯ ಜತೆ ಪುತ್ತಿಲ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಕಳೆದ ವಾರ ಬಿಡುಗಡೆಯಾಗಿತ್ತು.

ಈ ಮಹಿಳೆ ಕಳೆದ ಕೆಲದಿನಗಳಿಂದ ಪುತ್ತೂರಿನಲ್ಲಿ ಬೀಡುಬಿಟ್ಟಿದ್ದರು ಎನ್ನಲಾಗಿದೆ. ಇದೀಗ ಪುತ್ತಿಲ ಮೇಲೆ ಲೈಂಗಿಕ ದೌರ್ಜನ್ಯದ ದೂರು ನೀಡಲಾಗಿದೆ.

Leave A Reply

Your email address will not be published.