Viral Video: ರಸ್ತೆಯಲ್ಲಿ ಸಿಗರೇಟು ಸೇದುತ್ತಾ ನಿಂತ ಹುಡುಗಿಯರು; ವೀಡಿಯೋ ವೈರಲ್

Viral Video: ಇತ್ತೀಚಿನ ಯುವ ಸಮುದಾಯ ಎತ್ತ ಕಡೆ ಸಾಗುತ್ತಿದೆ ಎನ್ನುವುದೇ ಪ್ರಶ್ನಾತೀತವಾಗಿದೆ. ಏಕೆಂದರೆ ಫ್ಯಾಶನ್ ಎನ್ನುವ ಹೆಸರಿನಲ್ಲಿ ಮದ್ಯಪಾನ, ಧೂಮಪಾನದ ದಾಸರಾಗುವ ಕಾಲೇಜು ವಿದ್ಯಾರ್ಥಿಗಳು, ಇವುಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಮರೆತು ಬಿಟ್ಟಿದ್ದಾರೆನೋ? ಹಾಗಾಗಿ ರೋಡಲ್ಲಿ ನಿಂತುಕೊಂಡು, ಎಗ್ಗಿಲ್ಲದೆ ಧಮ್ ಹೊಡೆಯೋ ಹುಡುಗಿಯರ ವೀಡಿಯೋವೊಂದು ಇದೀಗ ವೈರಲ್ ಆಗಿದೆ.

ಹೈಸ್ಕೂಲ್ ಹುಡುಗೀರು ನಡು ಬೀದಿಯಲ್ಲಿ ಸಿಗರೇಟು ಸೇದುವ ದೃಶ್ಯ ವೈರಲ್ ಆಗಿದ್ದು, ನೆಟ್ಟಿಗರು ” ಈ ಮಕ್ಕಳಿಗೆ ಸರಿಯಾಗಿ ಧೂಮಪಾನ ಮಾಡುವುದು ಕೂಡಾ ಹೇಗೆಂದು ಗೊತ್ತಿಲ್ಲ. ಆದರೂ ಸಿಗರೇಟು ಸೇದುತ್ತಿದ್ದಾರೆ” ಎಂದು ಬರೆದಿದ್ದಾರೆ.
ಆಗಸ್ಟ್ 29 ರಂದು ಈ ವೀಡಿಯೋ ಹಂಚಿಕೊಳ್ಳಲಾಗಿದ್ದು, ಒಂದು ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ.
https://twitter.com/i/status/1829111082645848391