TTP : ಟಿಟಿಪಿ ಭಯೋತ್ಪಾದಕರ ಬಿಡುಗಡೆಗೆ ಭಾರೀ ಬೇಡಿಕೆ‌‌ ಇಟ್ಟ ಟಿಟಿಪಿ

TTP: ಇಸ್ಲಾಮಾಬಾದ್: ಟಿಟಿಪಿ ಭಯೋತ್ಪಾದಕರು ಪಾಕಿಸ್ತಾನಿ ಸೇನೆಯನ್ನು ಮಂಡಿಯೂರಿಸಿ ಸೇನಾ ಅಧಿಕಾರಿಯ ಬಿಡುಗಡೆಗೆ ಬದಲಾಗಿ ಭಾರಿ ಮೊತ್ತವನ್ನು ಸುಲಿಗೆ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕರ ಕಾಟ ತುಂಬಾ ಹೆಚ್ಚಿದ್ದು, ಸೈನ್ಯವನ್ನು ಸಹ ಅವರ ಮುಂದೆ ಮಂಡಿಯೂರುವಂತೆ ಒತ್ತಾಯಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಬಲುಚಿಸ್ತಾನದಲ್ಲಿ ಉಗ್ರಗಾಮಿಗಳ ಕೆಲವು ಬಸ್‌ಗಳನ್ನು ನಿಲ್ಲಿಸಿ ಅದರಲ್ಲಿದ್ದ ಪಂಜಾಬಿ‌ಸೈನಿಕ‌ ಪ್ರಯಾಣಿಕರ ಐಡಿಕಾರ್ಡುಗಳನ್ನಿರುವುದನ್ನು ನೋಡಿ ಅವರನ್ನು ಹತ್ಯೆಗೈದಿದ್ದರು‌.
ಈ ಘಟನೆಯ ಬಳಿಕ‌ ಪಾಕಿಸ್ತಾನದ‌ ಗಡಿ ಪೃದೇಶದಲ್ಲಿ‌ಪಖ್ತುನಖಾ ಗ್ರಾಮದಲ್ಲಿ ಸೇನಾದ ಒಬ್ಬ ಲೆಫ್ಡಿನೆಂಟ್ ಕರ್ನಲ್ ಮತ್ತು ಅವರ ಇಬ್ಬರು ಸಹೋದರರನ್ನು ಟಿಟಿಪಿಯ ಆತಂಕವಾದಿಗಳು ಅಪಹರಿಸಿದ್ದರು.ಈಗ ಈ ಅಧಿಕಾರಿಗಳ ಬಿಡುಗಡೆಯ ಬದಲಿಗೆ ಆತಂಕವಾದಿಗಳು ತಮ್ಮ ಆರು ಮಂದಿ ಜೊತೆಗಾರರನ್ನು ಬಿಡುಗಡೆ ಮಾಡಬೇಕು ಮತ್ತು ಹತ್ತು ಕೋಟಿ ರೂಪಾಯಿಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಮೂಲಗಳ ಪ್ರಕಾರ, ಲೆಫ್ಟಿನೆಂಟ್ ಕರ್ನಲ್ ಮತ್ತು ಪಾಕಿಸ್ತಾನಿ ಸೇನೆಯ 3 ನಾಗರಿಕರನ್ನು ರಕ್ಷಿಸುವ ಬದಲು, ಪಾಕಿಸ್ತಾನ ಸೇನೆಯು 6 ಟಿಟಿಪಿ ಭಯೋತ್ಪಾದಕರು ಮತ್ತು 100 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ಸುಲಿಗೆಯಾಗಿ ಪಾವತಿಸಬೇಕು ಎಂದು ಹೇಳಲಾಗಿದೆ. ಗಮನಾರ್ಹವಾಗಿ, ಆಗಸ್ಟ್ 28 ರಂದು, ಟಿಟಿಪಿ ಲೆಫ್ಟಿನೆಂಟ್ ಕರ್ನಲ್ ಖಾಲಿದ್ ಅಮೆರ್ ಮತ್ತು ಡೇರಾ ಇಸ್ಮಾಯಿಲ್ ಖಾನ್ ಅವರ ಮೂವರು ಸಂಬಂಧಿಕರನ್ನು ಅಪಹರಿಸಿದರು. ಟಿಟಿಪಿ ಅವರ ವಿಡಿಯೋ ಕೂಡ ಬಿಡುಗಡೆ ಮಾಡಿತ್ತು. ಇದರಲ್ಲಿ ಅವರು ಟಿಟಿಪಿಯ ಬೇಡಿಕೆಯನ್ನು ಈಡೇರಿಸುವಂತೆ ಪಾಕಿಸ್ತಾನಿ ಸೇನೆಗೆ ಮನವಿ ಮಾಡಿದ್ದು, ತಮ್ಮ ಯೋಗಕ್ಷೇಮವನ್ನು ತಿಳಿಸಿದ್ದಾರೆ

Leave A Reply

Your email address will not be published.