Sullia: ಯುವತಿ ನಾಪತ್ತೆ ಪ್ರಕರಣ; ಪತ್ತೆ ಹಚ್ಚಿದ ಪೊಲೀಸರು

Sullia: ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳಿದ ಕೊಲ್ಲಮೊಗ್ರಿನ ಯುವತಿಯೊಬ್ಬಳನ್ನು ಪೊಲೀಸರು ಪತ್ತೆ ಹಚ್ಚಿ ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದಾರೆ.

 

ಆ.23 ರಂದು ಈಕೆ ಉನ್ನತ ಶಿಕ್ಷಣಕ್ಕೆಂದು ಪೋಲೆಂಡ್‌ಗೆ ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ ಕುಕ್ಕೆಯಿಂದ ಬೆಂಗಳೂರಿಗೆ ತೆರಳಿದ್ದಳು. ಆ.26 ರಂದು ರಾತ್ರಿ ತಾನು ಪೋಲೆಮಡ್‌ ತಲುಪಿದ್ದೇನೆ ಎಂದು ಮನೆಯವರಿಗೆ ಈಕೆ ವಾಟ್ಸಪ್‌ ಮೆಸೇಜ್‌ ಕಳುಹಿಸಿದ್ದಾಳೆ. ಆದರೆ ಆ.28 ರಂದು ಸಂಬಂಧಿಕರೋರ್ವರು ಆಕೆ ಪೋಲೆಂಡ್‌ನಲ್ಲಿ ಇಲ್ಲ, ಸುಬ್ರಹ್ಮಣ್ಯ-ಬೆಂಗಳೂರು ಬಸ್ಸಿನಲ್ಲಿ ನೋಡಿರುವುದಾಗಿ ಬಸ್‌ ನಿರ್ವಾಹಕರೊಬ್ಬರು ಹೇಳಿರುವುದಾಗಿ ಮಾಹಿತಿಯನ್ನು ಯುವತಿಯ ಮನೆ ಮಂದಿಗೆ ತಿಳಿಸಿದ್ದಾರೆ.

ಕೂಡಲೇ ಯುವತಿಯ ಮನೆ ಮಂದಿ ಆಕೆಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಲಿಲ್ಲ. ಆಕೆಯ ಸ್ನೇಹಿತರ ಸಂಪರ್ಕಕ್ಕೆ ಪ್ರಯತ್ನ ಪಟ್ಟಾಗ ಯಾವುದೇ ಮಾಹಿತಿ ಲಭಿಸಿಲ್ಲ.

ನಂತರ ಯುವತಿ ಬೆಂಗಳೂರಿಗೆ ಬಂದಿರುವ ಮಾಹಿತಿ ಪ್ರಕಾರ, ಮನೆಯವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ಆ.29 ರಂದು ದೂರು ನೀಡಿದ್ದರು. ಇದೀಗ ಪೊಲೀಸರ ಯುವತಿಯನ್ನು ಪತ್ತೆ ಹಚ್ಚಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರಕಬೇಕಿದೆ.

Leave A Reply

Your email address will not be published.