Eshwar Khandre: ತಮ್ಮದೇ ಅರಣ್ಯ ಇಲಾಖೆ ವಿರುದ್ಧ ಸಚಿವ ಈಶ್ವರ್ ಖಂಡ್ರೆ ಕಿಡಿ

Eshwar Khandre: ಪಶ್ಚಿಮ ಘಟ್ಟಗಳ ತಪ್ಪಲು, ಅರಣ್ಯ ಇರೋದು ಮೋಜು ಮುಸ್ತಿಗೆ ಅಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸಿಡಿಮಿಡಿಗೊಂಡಿದ್ದಾರೆ. ಅಲ್ಲದೇ ತನಿಖೆಗೆ ಕೂಡಾ ಆದೇಶಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಭೈರಾಪುರ-ಹೊಸಕೆರೆಯಲ್ಲಿ ಜೀಪ್ ರ್ಯಾಲಿ ನಡೆದಿದ್ದು, ಇದರಲ್ಲಿ ಸುಮಾರು 80 ಕ್ಕೂ ಹೆಚ್ಚು ಜೀಪ್‌ಗಳು ಇದ್ದವು. ಸಿಸಿಎಫ್ ದರ್ಜೆಯ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಲು ಈಶ್ವರ್ ಖಂಡ್ರೆ ಸೂಚಿಸಿದ್ದಾರೆ. ಫೋರ್‌ವೀಲ್ ರ್ಯಾಲಿ ವಿರುದ್ಧ ತನಿಖೆಗೆ ಕೂಡಾ ಆದೇಶ ನೀಡಿದ್ದು, ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡುವಂತೆ ಸೂಚನೆ ನೀಡಿದ್ದಾರೆ.